ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಮಂಜಸ ಸಂಸ್ಥೆ ಆರಂಭೋತ್ಸವದಲ್ಲಿ ಕೆಸಿ ವೇಣುಗೋಪಾಲ್‌ ಭಾಗಿ ಸಾಧ್ಯತೆ

By Nayana
|
Google Oneindia Kannada News

ಬೆಂಗಳೂರು, ಜು.9: ವೈವಿಧ್ಯತೆಯಲ್ಲಿ ಏಕತೆಯನ್ನು ಸಮಗ್ರತೆಯನ್ನು ಸಾಧಿಸುವ ಉದ್ದೇಶದಿಂದ ಹುಟ್ಟಿಕೊಂಡ 'ಸಮಂಜಸ' ಎನ್ನುವ ಸಂಸ್ಥೆಯು ಇದೇ ಜುಲೈ 12ರಂದು ಟೌನ್‌ಹಾಲ್‌ನಲ್ಲಿ ಉದ್ಘಾಟನೆಗೊಳ್ಳಲಿದೆ.

ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ಅವರು ಈ ಸಂಸ್ಥೆಗೆ ಚಾಲನೆ ನೀಡಲಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್‌ ಅಧ್ಯಕ್ಷತೆವಹಿಸಲಿದ್ದು, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಶಿಷ್ಟಾಚಾರ ಬಿಡಿ, ಆಂಬ್ಯುಲೆನ್ಸ್‌ಗೆ ದಾರಿ ಕೊಡಿ : ಪರಮೇಶ್ವರಶಿಷ್ಟಾಚಾರ ಬಿಡಿ, ಆಂಬ್ಯುಲೆನ್ಸ್‌ಗೆ ದಾರಿ ಕೊಡಿ : ಪರಮೇಶ್ವರ

ಉದ್ಘಾಟನೆ ಸಮಾರಂಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್‌ ಪಾಲ್ಗೊಳ್ಳಲಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿಯವರು ಈ ಸಂದರ್ಭದಲ್ಲಿ ಸಮಂಜಸ ಸಂಸ್ಥೆಗೆ ಶುಭಾಶಯ ಕೋರಿ ಮಾತನಾಡಲಿದ್ದಾರೆ.

Samanjasa organization inauguration on July 12

ಸಮಂಜಸ ಸಂಸ್ಥೆಯ ಉದ್ಘಾಟನೆ ನಂತರ ವಿಚಾರ ಮಂಥನ ನಡೆಯಲಿದ್ದು, ಏಕಕಾಲದಲ್ಲೇ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಸ್ಥಿತಿಗತಿ ಕುರಿತಂತೆ ರಾಜ್ಯ ಸಭಾ ಸದಸ್ಯ ಹಾಗೂ ಹಿರಿಯ ಚಿಂತಕ ಜಯರಾಮ್‌ ರಮೇಶ್‌ ಮಾತನಾಡಿಸಲಿದ್ದಾರೆ. ರಾಜ್ಯ ಸಭಾಸದಸ್ಯ ಕೆಸಿ ರಾಮಮೂರ್ತಿ ಇದಕ್ಕೆ ಪ್ರತಿಕ್ರಿಯೆ ನೀಡಿ ಮಾತನಾಡಲಿದ್ದಾರೆ.

ಚರ್ಚೆಯಲ್ಲಿ ಜೈನ್‌ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಸಂದೀಪ್‌ ಶಾಸ್ತ್ರಿ, ಕಲಾವಿದ ಆರ್. ಅಶೋಕ್‌ ಪಾಲ್ಗೊಳ್ಳಲಿದ್ದಾರೆ, ದೇಶದ ಜನರನ್ನು ಮೂಲಭೂತವಾದ, ಮತೀಯವಾದದ ಮೂಲಕ ವಿಘಟಿಸುತ್ತಿರುವ ವಿಚ್ಛಿದ್ರಕಾರಿ ಶಕ್ತಿಗಳನ್ನು ಬುದ್ಧ, ಬಸವ, ಗಾಂಧಿ , ಅಂಬೇಡ್ಕರ್‌, ಕುವೆಂಪು ಅವರ ಚಿಂತನೆಗಳಿಂದ ತಡೆಯುವುದು ಸಮಂಜಸದ ಗುರಿಯಾಗಿದೆ.

English summary
To fight against communal forces and fundamentals, Samanjasa organization will be formed on July 12 at 9.30am at town hall.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X