ಕಂಪ್ಯೂಟರ್ ಆಪರೇಟರ್, ಮೆಸೆಂಜರ್‌ಗಳಿಗೆ ಸಚಿವೆ ಉಮಾಶ್ರೀ ಉಡುಗೊರೆ

Posted By:
Subscribe to Oneindia Kannada

ಬೆಂಗಳೂರು, ಜನವರಿ 01: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪ್ಯೂಟರ್ ಆಪರೇಟರ್, ಮೆಸೆಂಜರ್‌ಗಳಿಗೆ ಸಚಿವೆ ಉಮಾಶ್ರಿ ಹೊಸ ವರ್ಷಕ್ಕೆ ಉತ್ತಮ ಉಡುಗೊರೆ ನೀಡಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಕಂಪ್ಯೂಟರ್ ಆಪರೇಟರ್, ಮೆಸೆಂಜರ್‌ಗಳಿಗೆ ಗೌರವಧನ ಹೆಚ್ಚಿಸಿರುವುದಾಗಿ ಸಚಿವೆ ಉಮಾಶ್ರೀ ಪ್ರಕಟಿಸಿದ್ದಾರೆ.

Salary hike for some workers in women and child development department

ಹೊಸ ವರ್ಷದ ಉಡುಗೊರೆಯಾಗಿ ಗೌರವ ಧನ ಹೆಚ್ಚಳ ಮಾಡಿರುವುದಾಗಿ ಪ್ರಕಟಣೆಯಲ್ಲಿ ಹೇಳಲಾಗಿದೆ.
ಕಂಪ್ಯೂಟರ್‌ ಆಪರೇಟರ್‌ಗಳ ಗೌರವ ಧನವನ್ನು ರೂ. 6 ಸಾವಿರದಿಂದ ರೂ.11 ಸಾವಿರಕ್ಕೆ ಹಾಗೂ ಮೆಸೆಂಜರ್‌ಗಳ ಗೌರವ ಧನವನ್ನು ರೂ.4 ಸಾವಿರದಿಂದ ರೂ.8 ಸಾವಿರಕ್ಕೆ ಹೆಚ್ಚಿಸಲಾಗಿದೆ.

ಕೌಟುಂಬಿಕ ಹಿಂಸೆಯಿಂದ ಮಹಿಳಾ ಸಂರಕ್ಷಣಾ ಕಾಯ್ದೆ ನಿಯಮ-2005ರ ಅಡಿಯಲ್ಲಿ ಬಾಹ್ಯ ಮೂಲದಿಂದ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಇದು ಅನ್ವಯವಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Salary hike for computer operators and messengers in women and child development department. their honor payment hike by 6 to 11 thousand rupees.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ