ಫೆ.12ರಂದು ಬೆಂಗಳೂರಿನಲ್ಲಿ ಸದಾಸ್ಮರಾಮಿ ಯತಿರಾಜಮ್

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 9: ಶ್ರೀ ರಾಮಾನುಜಾಚಾರ್ಯರ ಸಹಸ್ರಮಾನೋತ್ಸವದ ಅಂಗವಾಗಿ ಫೆ.12ರಂದು ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ 'ಸದಾ ಸ್ಮರಾಮಿ ಯತಿರಾಜಮ್' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಶ್ರೀ ರಾಮಾನುಜಾಚಾರ್ಯರು ಜನ್ಮ ತಾಳಿ ಸಾವಿರ ವರ್ಷಗಳು ಉರುಳಿದೆ. ಅವರೇ ಸ್ಥಾಪಿಸಿದ ಮೇಲುಕೋಟೆ ಯದುಗಿರಿ ಯತಿರಾಜ ಮಠದ ವತಿಯಿಂದ ಶ್ರೀಶ್ರೀಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮಿ ಮುಂದಾಳತ್ವದಲ್ಲಿ ಕಾರ್ಯಕ್ರಮ ಜರುಗಲಿದೆ.

Jeeyar

ಉಪನ್ಯಾಸಕರಾದ ಶ್ರೀ ವೇಲುಕುಡಿಕೃಷ್ಣನ್ ಸ್ವಾಮಿ ಹಾಗೂ ಕಿಂಚಿತ್ ಕಾರಮ್ ಟ್ರಸ್ಟ್ ನ ಸಹಯೋಗವೂ ಈ ಕಾರ್ಯಕ್ರಮಕ್ಕಿದೆ.[ರಾಮಾನುಜರ ಸ್ಮರಣೆಗಾಗಿ ವಿಶ್ಮಮಂಗಳ ಸಹಸ್ರಮಾನೋತ್ಸವ]

ಸದಾಸ್ಮರಾಮಿ ಯತಿರಾಜಮ್ ಶ್ರೀಮದ್ ರಾಮಾನುಜಾಚಾರ್ಯರಿಗೆ ಸಂಬಂಧಿಸಿದ ಹಿತವಚನ, ಕುಂಚನಮನ ಹಾಗೂ ನುಡಿನಮನಗಳು ಕಾಲೇಜಿನಲ್ಲಿ ಫೆ.12ರಂದು ಬೆಳಗ್ಗೆ 10 ಪ್ರಾರಂಭವಾಗಲಿದೆ. ಸರ್ವರಿಗೂ ಉಚಿತ ಪ್ರವೇಶವಿದ್ದು ಕಾರ್ಯಕ್ರಮದ ನಂತರ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.

Logo

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ವೇಣು ಅನಂತಪದ್ಮನಾಭನ್ 7090899911.ವಿವಿಧೆಡೆಯಿಂದ ತೆರಳಿದ್ದ ಸ್ವಾಮೀಜಿಗಳು ಪೆರಂಬದೂರಿನಲ್ಲಿ ಗುರುವಾರ ರಾಮಾನುಜಚಾರ್ಯರ ಸಹಸ್ರಮಾನೋತ್ಸವ ಕಾರ್ಯಕ್ರಮದ ಆಚರಣೆ ಬಗ್ಗೆ ಮಾತುಕತೆ ನಡೆಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sadasmarami Yatirajam function has been organized by Mr velukudikrishnan swami and kanchit karam trust on Feb.12 in Sheshadri pruram college, bengaluru to commemorate the demise of sage Ramanujacharya one thousand years ago.
Please Wait while comments are loading...