ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈತ್ರಿಯಾ ಜೊತೆ ದೈಹಿಕ ಸಂಪರ್ಕ ಮಾಡಿದ್ದು ಯಾರು?

By Mahesh
|
Google Oneindia Kannada News

ಬೆಂಗಳೂರು, ಸೆ.1: ಕೇಂದ್ರ ರೈಲ್ವೆ ಸಚಿವ ಡಿವಿ ಸದಾನಂದ ಗೌಡ ಅವರ ಪುತ್ರ ಕಾರ್ತಿಕ್ ಗೌಡ ಮೇಲಿನ ಅತ್ಯಾಚಾರ ಹಾಗೂ ವಂಚನೆ ಪ್ರಕರಣಕ್ಕೆ ಸೋಮವಾರ ಮತ್ತೊಂದು ತಿರುವು ಸಿಕ್ಕಿದೆ. ಮೈತ್ರಿಯಾ ಮೇಲೆ ನಡೆದಿದೆ ಎನ್ನಲಾದ ಅತ್ಯಾಚಾರ ಸಾಬೀತುಪಡಿಸಲು ಪ್ರಮುಖ ಎನಿಸಿದ್ದ ವೈದ್ಯಕೀಯ ಪರೀಕ್ಷೆ ವರದಿ ಹೊರಬಿದ್ದಿದೆ.

ಆದರೆ, ಮೈತ್ರಿಯಾ ಗೌಡ ಬಿನ್ ವೆಂಕಟೇಶ ಗೌಡ ಅವರ ಮೇಲೆ ಯಾವುದೇ ಅತ್ಯಾಚಾರ ನಡೆದಿಲ್ಲ. ಎರಡು ತಿಂಗಳ ಹಿಂದೆ ಅವರು ದೈಹಿಕ ಸಂಪರ್ಕಕ್ಕೆ ಒಳಪಟ್ಟಿದ್ದಾರೆ. ಅತ್ಯಾಚಾರ ನಡೆದಿರುವ ಬಗ್ಗೆ ಯಾವುದೇ ಕುರುಹು ಸಿಕ್ಕಿಲ್ಲ ಎಂದು ಡಾ. ಅಂಬೇಡ್ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ನೀಡಿದ ವರದಿಯಲ್ಲಿ ಹೇಳಲಾಗಿದೆ.

ವಿಚಿತ್ರವೆಂದರೆ ಮೂರ್ನಾಲ್ಕು ದಿನಗಳ ಹಿಂದೆಯೇ ವೈದ್ಯಕೀಯ ಪರೀಕ್ಷೆ ವರದಿ ಬಹಿರಂಗವಾಗಿತ್ತು. ಮೈತ್ರಿಯಾ ಮೇಲೆ ರೇಪ್ ಆಗಿಲ್ಲ ಎಂಬ ಸುದ್ದಿ ಎಲ್ಲೆಡೆ ಹಬ್ಬಿತ್ತು. ಇಂದು ಅಧಿಕೃತವಾಗಿದೆ ಅಷ್ಟೇ.

ಇದೇ ವೇಳೆ ಮೈತ್ರಿಯಾ ಗೌಡ ನಗರದ 8ನೇ ಎಸಿಎಂಎಂ ನ್ಯಾಯಾಲಯದಲ್ಲಿ ಸೋಮವಾರ ಮತ್ತೊಮ್ಮೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ. ವಂಚನೆ ಮತ್ತು ಅತ್ಯಾಚಾರ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರ ಪುತ್ರ ಕಾರ್ತಿಕ್ ಗೌಡ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. [62 ಪುಟಗಳ ಹೇಳಿಕೆ ನೀಡಿದ ನಟಿ ಮೈತ್ರಿಯಾ ಗೌಡ]

ಕಾರ್ತಿಕ್ ಗೌಡ ಅವರ ಜಾಮೀನು ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಜಿ.ಬಿ.ಮುದಿಗೌಡರ್ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿ, ಕಾರ್ತಿಕ್ ಗೆ ನೋಟಿಸ್ ಜಾರಿ ಮಾಡುವಂತೆ ಆರ್.ಟಿ. ನಗರ ಪೊಲೀಸರಿಗೆ ನಿರ್ದೇಶನ ನೀಡಿದೆ.

ಕಾರ್ತಿಕ್ ಪತ್ತೆಗೆ ವಿಶೇಷ ತಂಡ ರಚನೆ

ಕಾರ್ತಿಕ್ ಪತ್ತೆಗೆ ವಿಶೇಷ ತಂಡ ರಚನೆ

ಕಾರ್ತಿಕ್ ಹೇಳಿಕೆ ಪಡೆಯಲು ಹಾಗೂ ಪ್ರಕರಣದ ವಿಚಾರಣೆ ನಡೆಸಲು ಅವರನ್ನು ವಶಕ್ಕೆ ಪಡೆಯಲು ಪೊಲೀಸರು ನಿರ್ಧರಿಸಿದ್ದಾರೆ. ಕೋರ್ಟ್ ಸೂಚನೆ ವಿಶೇಷ ತಂಡ ರಚನೆ ಮಾಡಲಾಗಿದೆ. ಕೊಡಗು, ಮಂಗಳೂರು, ಬೆಂಗಳೂರು ನಿವಾಸಕ್ಕೆ ಏಕಕಾಲಕ್ಕೆ ತೆರಳಲು ಸಿದ್ಧವಾಗಿದೆ.

ನಿರೀಕ್ಷಣಾ ಜಾಮೀನು ಅರ್ಜಿ ರದ್ದುಪಡಿಸಿ

ನಿರೀಕ್ಷಣಾ ಜಾಮೀನು ಅರ್ಜಿ ರದ್ದುಪಡಿಸಿ

ಕಾರ್ತಿಕ್ ಗೌಡ ಅವರ ನಿರೀಕ್ಷಣಾ ಜಾಮೀನು ಅರ್ಜಿ ಗುರುವಾರ ವಿಚಾರಣೆ ಬರಲಿದ್ದು, ಜಾಮೀನು ನೀಡದಂತೆ ಪ್ರತಿ ಅರ್ಜಿ ಸಲ್ಲಿಸಲು ಮೈತ್ರಿಯಾ ಪರ ವಕೀಲರು ಸಜ್ಜಾಗಿದ್ದಾರೆ.

ಮೈತ್ರಿಯಾ ಜೊತೆ ಸಂಪರ್ಕ ಬೆಳೆಸಿದ್ದು ಯಾರು?

ಮೈತ್ರಿಯಾ ಜೊತೆ ಸಂಪರ್ಕ ಬೆಳೆಸಿದ್ದು ಯಾರು?

ಇದೆಲ್ಲದರ ನಡುವೆ ದೈಹಿಕ ಸಂಪರ್ಕ ನಡೆದಿದ್ದು 2 ತಿಂಗಳ ಹಿಂದೆ ಎಂದರೆ, ಮೈತ್ರಿಯಾ ಜೊತೆ ಸಂಪರ್ಕ ಬೆಳೆಸಿದ್ದು ಯಾರು? ಕಾರ್ತಿಕ್ ಪರಿಚಯವಾಗಿದ್ದು ಮೇ ತಿಂಗಳಿನಲ್ಲಿ ಎಂದು ಮೈತ್ರಿಯಾ ಅನೇಕ ಬಾರಿ ಹೇಳಿಕೆ ನೀಡಿದ್ದಾರೆ.

ಹೀಗಾಗಿ ಕಾರ್ತಿಕ್ ಜೊತೆ ದೈಹಿಕ ಸಂಪರ್ಕ ನಡೆದ ಬಗ್ಗೆ ಅನುಮಾನ ಬರುವುದು ಸಹಜ. ಆದರೆ, ಈ ಬಗ್ಗೆ ಅಂತಿಮ ನಿರ್ಣಯಕ್ಕೆ ಬರುವ ಮುಂಚೆ ಕಾರ್ತಿಕ್ ಗೌಡ ಅವರ ದೈಹಿಕ ಪರೀಕ್ಷೆ ನಡೆಯಬೇಕಿದೆ. ಆಗ ಕಾರ್ತಿಕ್ ಹಾಗೂ ಮೈತ್ರಿಯಾ ನಡುವಿನ ದೇಹ ಸಂಪರ್ಕ ವಿವಾದಕ್ಕೆ ಅಂತ್ಯ ಸಿಗಲಿದೆ.

ಮೈತ್ರಿಯಾ ವಿಚಾರಣೆಯಂತೆ ಕಾರ್ತಿಕ್ ವಿಚಾರಣೆ

ಮೈತ್ರಿಯಾ ವಿಚಾರಣೆಯಂತೆ ಕಾರ್ತಿಕ್ ವಿಚಾರಣೆ

ಮೈತ್ರಿಯಾ ವಿಚಾರಣೆಯಂತೆ ಕಾರ್ತಿಕ್ ವಿಚಾರಣೆಯೂ ನಡೆಯಬೇಕಿದೆ. ಇಬ್ಬರ ಸಮಾನ ಸ್ನೇಹಿತ ಕುಶಾಲ್ ರನ್ನು ಪ್ರಶ್ನಿಸಲು ಆರ್ ಟಿನಗರ ಪೊಲೀಸ್ ಅಧಿಕಾರಿ ಓಂಕಾರಯ್ಯ ಅವರ ತಂಡ ಸಿದ್ಧವಾಗಿದೆ.

ಆದರೆ, ಗುರುವಾರದ ಜಾಮೀನು ಅರ್ಜಿ ವಿಚಾರಣೆ ನಂತರವೇ ಪೊಲೀಸ್ ಮುಂದಿನ ಕ್ರಮ ಜರುಗಿಸುವುದು ಸ್ಪಷ್ಟವಾಗಿದೆ. ಪ್ರಕರಣದಲ್ಲಿ ಒಂದು ಕಡೆ ಮಾತ್ರ ಒತ್ತಡ ಹೇರಲಾಗುತ್ತಿದೆ ಎಂದು ಮೈತ್ರಿಯಾ ಪರ ವಕೀಲ ಈಗಾಗಲೇ ಆಕ್ಷೇಪಿಸಿದ್ದಾರೆ.
ವಿಳಂಬಕ್ಕೆ ಪೊಲೀಸರು ಕಾರಣರಲ್ಲ: ಎಂಎನ್ ರೆಡ್ಡಿ

ವಿಳಂಬಕ್ಕೆ ಪೊಲೀಸರು ಕಾರಣರಲ್ಲ: ಎಂಎನ್ ರೆಡ್ಡಿ

ಆದರೆ, ಮೈತ್ರಿಯಾ ಅವರಿಗೆ ಹುಷಾರಿಲ್ಲದಂತಾದ ಕಾರಣ ವಿಚಾರಣೆ ವಿಳಂಬಗೊಂಡಿತು ಎಂದು ಪೊಲೀಸರು ನ್ಯಾಯಾಲಯದಲ್ಲಿ ಹೇಳಿದ್ದಾರೆ. ಈಗ ಕೈ ಸೇರಿರುವ ವೈದ್ಯಕೀಯ ವರದಿ ಆಧಾರದ ಮೇಲೆ ಕಾರ್ತಿಕ್ ಅವರನ್ನು ವಿಚಾರಣೆ ನಡೆಸಿ ಅವರ ದೈಹಿಕ ಪರೀಕ್ಷೆ ನಡೆಸುವ ಸಾಧ್ಯತೆಗಳಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೈತ್ರಿಯಾ ಅವರು ಸೂಕ್ತ ಸಾಕ್ಷಿಗಳನ್ನು ತಕ್ಷಣಕ್ಕೆ ಒದಗಿಸಿರಲಿಲ್ಲ. ಹೀಗಾಗಿ ತನಿಖೆ ವಿಳಂಬವಾಯಿತು ಎನ್ನಲಾಗಿದೆ.

English summary
Sadananda Gowda's Son Rape Case: Mythriya Gowda was not raped says Dr. Ambedkar college Medical report submitted to R.T Nagar police today. Meanwhile police formed a specia team to nab Karthik Gowda and quiz him regarding the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X