ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೂರು ಗ್ರಾಮಗಳನ್ನು ದತ್ತು ಪಡೆಯಲಿದ್ದಾರೆ ಡಿವಿಎಸ್

|
Google Oneindia Kannada News

ಬೆಂಗಳೂರು, ನ. 18 : ಪ್ರಧಾನ ಮಂತ್ರಿಗಳ ಆದರ್ಶ ಗ್ರಾಮ ಯೋಜನೆಯಡಿ ಅಭಿವೃದ್ಧಿ ಪಡಿಸಲು ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ ಅವರು ಮೂರು ಗ್ರಾಮಗಳನ್ನು ಆಯ್ಕೆ ಮಾಡಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಈ ಗ್ರಾಮಗಳಲ್ಲಿ ಎಲ್ಲಾ ರೀತಿಯ ಮೂಲಸೌಕರ್ಯ ಒದಗಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಯಶವಂತಪುರ ವಿಧಾನಸಭಾ ಕ್ಷೇತ್ರದ ಸೋಮನಹಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ನೆಟ್ಟಿಗೆರೆ, ವೀರಸಂದ್ರ, ಬೋಳಾರೆ ಗ್ರಾಮಗಳನ್ನು ಸದಾನಂದ ಗೌಡರು ಆಯ್ಕೆ ಮಾಡಿಕೊಂಡಿದ್ದಾರೆ.

Sadananda Gowda

ಮೂರು ಗ್ರಾಮಗಳನ್ನು ಆಯ್ಕೆ ಮಾಡಿಕೊಂಡಿರುವ ಕುರಿತು ಸದಾನಂದ ಗೌಡರು ತಮ್ಮ ಫೇಸ್‌ಬುಕ್‌ನಲ್ಲಿ ಮಾಹಿತಿ ನೀಡಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಈ ಗ್ರಾಮಗಳಲ್ಲಿ ಎಲ್ಲಾ ರೀತಿಯ ಮೂಲಸೌಕರ್ಯ ಕಲ್ಪಿಸಿ ಕೊಡುವುದು ಯೋಜನೆಯ ಉದ್ದೇಶ.

ಕೆರಾಡಿ ದತ್ತು ಪಡೆಯಲಿದ್ದಾರೆ ಬಿಎಸ್‌ವೈ : ಶಿವಮೊಗ್ಗ ಸಂಸದ ಬಿ.ಎಸ್.ಯಡಿಯೂರಪ್ಪ ಅವರು ಆದರ್ಶ ಗ್ರಾಮ ಯೋಜನೆಗೆ ಕುಂದಾಪುರ ತಾಲೂಕಿನ ಅತೀ ಹಿಂದುಳಿದ ಪ್ರದೇಶವಾಗಿರುವ ಕೆರಾಡಿ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ.

ಹಿಂದೆ ಗಂಗೊಳ್ಳಿ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳುವುದಾಗಿ ಯಡಿಯೂರಪ್ಪ ಅವರು ಹೇಳಿದ್ದರು. ದತ್ತು ಪಡೆಯುವ ಗ್ರಾಮ ಸುಮಾರು 13 ಸಾವಿರದಷ್ಟು ಜನಸಂಖ್ಯೆ ಹೊಂದಿರಬೇಕಾಗಿದೆ. ಆದ್ದರಿಂದ ಗಂಗೊಳ್ಳಿ ಬದಲಿಗೆ ಕೆರಾಡಿ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ.

ಜಯಪುರ ಮೋದಿ ಗ್ರಾಮ : ಉತ್ತರಪ್ರದೇಶ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ, ಪ್ರಧಾನಿ ಹುದ್ದೆಗೇರಿದ ನರೇಂದ್ರ ಮೋದಿ ಅವರು ಜಯಪುರ ಗ್ರಾಮವನ್ನು ದತ್ತು ಪಡೆದಿದ್ದಾರೆ. ಖ್ಯಾತ ಕ್ರಿಕೆಟಿಗ, ರಾಜ್ಯಸಭಾ ಸಂಸದ ಸಚಿನ್ ತೆಂಡೂಲ್ಕರ್ ಅವರು ಆಂಧ್ರ ಪ್ರದೇಶದ ಖಂಡ್ರಿಗ ಗ್ರಾಮವನ್ನು ದತ್ತು ತೆಗೆದುಕೊಂಡಿದ್ದಾರೆ.

English summary
Law Minister and Bengaluru North MP D.V.Sadananda Gowda selected Nettigere,Veerasandra, Bolare village in the Yeshwanthpura assembly constituency for Pradhan Mantri Adarsh Gram Yojana (PMAGY).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X