ರೆಡ್ಡಿ ಮಗಳ ಮದುವೆಯಲ್ಲಿ ನಿಯಮ ಚಲ್ಲಾಪಿಲ್ಲಿ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 18: ಜನಾರ್ದನ ರೆಡ್ಡಿ ಮಗಳ ಮದುವೆ ಸ್ವರ್ಗ ಸದೃಶ ಎಂದು ಎಲ್ಲರ ಬಾಯಲ್ಲೂ ಅದರದ್ದೇ ಸುದ್ದಿಯಾಗಿತ್ತು. ಅದರೆ ಮದುವೆ ಸಂಭ್ರಮದಲ್ಲಿ ಆದ ನಿಯಮ ಉಲ್ಲಂಘನೆಯನ್ನು ಕೇಳುವವರೇ ಇಲ್ಲವಾಗಿದ್ದಾರೆ.

ಸರ್ಕಾರದ ನಿಯಮದ ಪ್ರಕಾರ ಅರಮನೆ ಮೈದಾನವನ್ನು ಒಂದು ಕಾರ್ಯಕ್ರಮಗಳಿಗೆ ಮೂರು ದಿನಕ್ಕಿಂತ ಹೆಚ್ಚ ಬಳಸುವಂತಿಲ್ಲ. ಅದರೆ ರೆಡ್ಡಿ ಮಗಳ ಮದುವೆ ಮುಗಿಯುವ ಹೊತ್ತಿಗೆ ಅದು ಬಳಕೆಯಾಗಿರುವುದು ಎರಡು ತಿಂಗಳಿಗಿಂತ ಹೆಚ್ಚು.[ಗಾಲಿ ರೆಡ್ಡಿ ಮಗಳ ಮದುವೆಯಲ್ಲಿ ಕಂಡ ಮುಖಗಳು]

Rules are breaking in janardhan reddy daughter marriage

ತಾತ್ಕಾಲಿಕ ನಿರ್ಮಾಣಗಳನ್ನು ವಿವಾಹ ನಂತರ ತೆಗೆದು ಹಾಕಬೇಕೆಂಬುದು ನಿಯಮ. ಅದರೆ ಮದುವೆಯಾಗಿ ಒಂದು ದಿನ ಕಳೆದರೂ ತಿರುಪತಿ ಮಾದರಿಯಿಂದ ಹಿಡಿದು ಹಂಪಿ ದೇವಾಲಯಗಳವರೆಗೆ ಹಾಗೇಯಿದೆ.

ಇನ್ನು ಗಾಲಿ ರೆಡ್ಡಿ ಮಗಳ ಮದುವೆ ನಂತರ ಸೃಷ್ಟಿಯಾಗಿರುವ ಭಾರಿ ಪ್ರಮಾಣದ ತ್ಯಾಜ್ಯ ವಿಲೇವಾರಿಗೆ ಸರ್ಕಾರಿ ಬಿಬಿಎಂಪಿ ವಾಹನಗಳು ಏಕೆ ಬಳಕೆಯಾಗುತ್ತಿವೆ ಎಂಬುದೇ ತಿಳಿಯದಾಗಿದೆ. ಉತ್ಪತ್ತಿಯಾದ ಕಸವನ್ನು ಅರಮನೆ ಮೈದಾನದವರೇ ವಿಲೇವಾರಿ ಮಾಡುವುದು ವಾಡಿಕೆ ಹಾಗಾಗಿಲ್ಲ ಏಕೆ? ಹಸಿ, ಒಣ ಕಸಗಳು ಒಂದೆಡೆಯೇ ಇವೆ ಇದರ ವರ್ಗೀಕರಣ ಮಾಡುವವರಾರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rules are breaking in janardhan reddy daughter marriage, palece gorund have 3 days but still accupay above 2 months, and garbage problem also
Please Wait while comments are loading...