ರಕ್ತದ ಕಲೆ ಅಳಿಸುವ ಮುನ್ನವೇ ರಾಜಕೀಯ ರಂಗಿನಾಟ !

Posted By:
Subscribe to Oneindia Kannada

ಬೆಂಗಳೂರು ನವೆಂಬರ್ 5: ರಾಜ್ಯ ರಾಜಕೀಯ ನಾಯಕರು ರುದ್ರೇಶ್ ಹತ್ಯೆ ಮತ್ತು ರವಿ ನಿಗೂಢ ಸಾವಿಗೆ ಸಂಬಂಧಿಸಿದಂತೆ ವೈವಿಧ್ಯಮಯವಾದ ಹೇಳಿಕೆ ನೀಡುತ್ತಿದ್ದು ಪ್ರಕರಣ ರಾಜಕೀಯ ಬಣ್ಣ ಪಡೆದುಕೊಳ್ಳುತ್ತಿದೆ.

ಕೆಲವು ದಿನಗಳ ಹಿಂದೆ ಬಿಜೆಪಿ ಕಾರ್ಯಕರ್ತ ರುದ್ರೇಶ್ ಹತ್ಯೆ ಮಾಡಲಾಗಿತ್ತು. ಆರೋಪಿಗಳನ್ನು ಬಂಧಿಸಲಾಗಿತ್ತು. ರುದ್ರೇಶ್ ಹತ್ಯೆ, ರವಿ ನಿಗೂಢ ಸಾವಿನ ಸಂಬಂಧ ರಾಜಕೀಯ ವಲಯದ ಕೈವಾಡವಿದೆ ಎಂದು ಅಲ್ಲಲ್ಲಿ ಕೇಳಿಬರುತ್ತಿತ್ತು.

ರುದ್ರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಅವರು ಕಾಂಗ್ರೆಸ್‌ ಮುಖಂಡ ರೋಷನ್ ಬೇಗ್ ಅವರ ಮೇಲೆ ನೇರ ಆರೋಪ ಮಾಡಿದ್ದರು, ರೋಷನ್ ಬೇಗ್ ಅವರು ತನಿಖೆ ನಡೆಸಿ ಪರಿಶೀಲಿಸಲಿ ಎಂದು ತಿಳಿಸಿದ್ದರು ಇನ್ನು ಈ
ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಮುಖಂಡ ಜಮೀರ್ ಅಹಮದ್ ಸವಾಲು ಹಾಕಿದ್ದು, ಸಿಎಂ, ಜಗದೀಶ್ ಶೆಟ್ಟರ್, ದಿನೇಶ್ ಗುಂಡೂರಾವ್ ಅವರ ಹೇಳಿಕೆ ಇಲ್ಲದೆ.

ಅಲ್ಲದೆ ಶನಿವಾರ ಮಾಗಳಿ ರವಿ ಮೃತದೇಹ ಮೆರವಣಿಗೆಗೆ ಬಿಜೆಪಿ ಆರ್ ಎಸ್ ಎಸ್ ಸಿದ್ಧತೆ ನಡೆಸಿದ್ದು ಪರಿಯಾಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆ ಮಾಡಲು ಮುಂದಾಗಿದ್ದಾರೆ ಈ ವೇಳೆ ಜಾಗೃತರಾದ ಪೊಲೀಸರು ಮೆರವಣಿಗೆಗೆ ಅನುಮತಿ ನಿರಾಕರಿಸಿದ್ದಾರೆ.

ಕಾರ್ಯಕರ್ತರು ಪೊಲೀಸರ ನಡುವೆ ಮಾತಿನ ಚಕಮುಕಿ ನೆಡೆದಿದೆ. ಅಲ್ಲದೆ ಶವವನ್ನು ಇಟ್ಟು ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್ ಸಿಂಹ ಇದೊಂದು ರವಿ ಅವರದ್ದು ಕೊಲೆ ಎಂದು ತಿಳಿಸಿದ್ದಾರೆ.

ಆರೋಪ ಸಾಬೀತಾಗದಿದ್ದರೆ ನಿವೃತ್ತಿ ನೀಡುತ್ತಾರಾ?

ಆರೋಪ ಸಾಬೀತಾಗದಿದ್ದರೆ ನಿವೃತ್ತಿ ನೀಡುತ್ತಾರಾ?

ಇನ್ನು ಈ ಸಂಬಂಧ ಶನಿವಾರ ಪ್ರತಿಕ್ರಿಯೆ ನೀಡಿರುವ ಜಮೀರ್ ಸವಾಲು ಹಾಕಿದ್ದಾರೆ. ಕೊಲೆ ಎಂಬುದನ್ನು ಸಾಬೀತು ಪಡಿಸಿದರೆ ರಾಜಿನಾಮೆ ನೀಡುತ್ತೇನೆ. ಆದರೆ ಸಾಬೀತು ಪಡಿಸಲಾಗದಿದ್ದರೆ ರಾಜಿನಾಮೆ ನೀಡಿ ಮನೆಗೆ ಹೋಗ್ತಾರ ಎಂದು ಶೋಭಾ ಕರಂದ್ಲಾಜೆ ಅವರಿಗೆ ಸವಾಲು ಹಾಕಿದ್ದಾರೆ.

ಆರೋಪ ಸಾಬೀತಾದರೆ ನಿವೃತ್ತಿ

ಆರೋಪ ಸಾಬೀತಾದರೆ ನಿವೃತ್ತಿ

ರುದ್ರೇಶ್ ನನಗೆ ಗೊತ್ತಿದ್ದ ಒಳ್ಳೆಯ ಹುಡುಗ, ಆತನ ಬಗ್ಗೆ ರಾಜಕೀಯ ಹಗೆತನವಾಗಲಿ, ದ್ವೇಷವಾಗಲಿ ನಮಗಿಲ್ಲ ನಮಗೆ ರಾಜಕೀಯ ಸ್ಪರ್ಧಿಗಳೂ ಯಾರು ಇಲ್ಲ, ಕೇಂದ್ರದಲ್ಲಿ ಬಿಜೆಪಿ ತನಿಖಾ ದಳವಿದೆ ತನಿಖೆ ಎದುರಿಸಲು ನಾನು ಸಿದ್ದ ಎಂದು ತಿಳಿಸಿದ್ದರು.

ಜಿಜೆಪಿಯಿಂದ ರಾಜಕೀಯ ಸ್ವಾಥ್ಯ ಹಾಳು

ಜಿಜೆಪಿಯಿಂದ ರಾಜಕೀಯ ಸ್ವಾಥ್ಯ ಹಾಳು

ಜಿಜೆಪಿ ವಿರುದ್ಧ ರಾಜ್ಯ ಮುಖ್ಯ ಮಂತ್ರಿ ಮಾತನಾಡಿ ಬಿಜೆಪಿಯವರಿಗೆ ಯಾವಾಗಲು ಸಮಾಜದ ಸ್ವಾಥ್ಯ ಹಾಳುಮಾಡುವುದರಲ್ಲಿ ಏನೋ ಒಂದು ರೀತಿ ಸಂತೋಷವಿದೆ. ಶೋಭಾ ಅವರು ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ತಿಳಿಸಿದ್ದಾರೆ.

ಅವರ ಬಳಿ ಮಾಹಿತಿ ಇದ್ದೇ ಇರುತ್ತದೆ

ಅವರ ಬಳಿ ಮಾಹಿತಿ ಇದ್ದೇ ಇರುತ್ತದೆ

ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ಕರಂದ್ಲಾಜೆ ಮಾತನಾಡಿದ್ದರೆ ಅವರು ಸೂಕ್ತ ಮಾಹಿತಿ ಇದ್ದೇ ಮಾತನಾಡಿರುತ್ತಾರೆ. ಅವರಲ್ಲಿ ಸಾಕ್ಷ್ಯ ವಿರಬಹುದು ಎಂದು ಹೇಳಿದ್ದಾರೆ.

ಶೋಭಾ ಹೇಳಿಕೆ ಆಧಾರ ರಹಿತ

ಶೋಭಾ ಹೇಳಿಕೆ ಆಧಾರ ರಹಿತ

ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್ ಬೇಗ್ ವಿರುದ್ಧ ನೀಡಿರುವ ಶೋಭಾ ಹೇಳಿಕೆ ಆಧಾರ ರಹಿತ, ಪ್ರಚಾರಕ್ಕಾಗಿ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದ್ದರು.

ಕೊಲೆಗೆ ಸುಪಾರಿ ನೀಡಿದ್ದು ಬೇಗ್

ಕೊಲೆಗೆ ಸುಪಾರಿ ನೀಡಿದ್ದು ಬೇಗ್

ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಅವರು ರುದ್ರೇಶ್‌ ಕೊಲೆಗೆ ಸುಪಾರಿ ನೀಡಿದ್ದಾರೆ ಎಂಬುದು ಕಾರ್ಯಕರ್ತರು ಹಾಗೂ ಗುಪ್ತಚರ ಇಲಾಖೆಯ ಗುಮಾನಿ ಬಂಧಿತ ಆರೋಪಿಗಳನ್ನು ಸರಿಯಾಗಿ ವಿಚಾರಣೆ ನಡೆಸಿದರೆ ಸತ್ಯ ಹೊರಬರುತ್ತದೆ ಎಂದು ಶುಕ್ತವಾರ ಶೋಬಾಕರಂದ್ಲಾಜೆ ಆರೋಪ ಮಾಡಿದ್ದರು. [ಬಿಜೆಪಿ ಕಾರ್ಯಕರ್ತ ಮಾಗಳಿ ರವಿ ಅನುಮಾನಾಸ್ಪದ ಸಾವು]

ಜತೆಗೆ ಬಿಜೆಪಿ ಮೇಲಿನ ದ್ವೇಷದಿಂದ ಕಾಂಗ್ರೆಸ್ ಪಕ್ಷ ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಿಸಿ ಹೆದರಿಸುವ ಯತ್ನ ಮಾಡುತ್ತಿದೆ. ಇದಕ್ಕೆ ರುದ್ರೇಶ್‌ ಹತ್ಯೆ ಪ್ರಾಯೋಜಿತ ಕೊಲೆ ಇದಕ್ಕೆ ನಾವು ಹೆದರುವುದಿಲ್ಲ ಎಂದು ಹೇಳಿದ್ದರು.

ಇದೊಂದು ಪ್ರಾಯೋಜಿತ ಕೊಲೆ

ಇದೊಂದು ಪ್ರಾಯೋಜಿತ ಕೊಲೆ

ಬಿಜೆಪಿ ಮುಖಂಡ ಮಾಗಳಿ ರವಿ ನಿಗೂಡ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಾಪ್‌ ಸಿಂಹ ಪ್ರತಿಕ್ರಿಯಿಸಿ ಇದೊಂದು ಪ್ರಾಯೋಜಿತ ಕೊಲೆ ಇದನ್ನು ವೈದ್ಯರೇ ದೃಢಪಡಿಸಿದ್ದಾರೆ ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Rudresh murder has been criate political colour. Shobha karandlaje apose to congress leader Roshn baig, jameer ahamad and verius congress leader apose to BJP
Please Wait while comments are loading...