ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಹಾ.. ರುಚಿಸಂತೆ... ಉಳಿದಿರೋದು ಇನ್ನೊಂದೇ ದಿನ !

|
Google Oneindia Kannada News

ಬೆಂಗಳೂರು, ಜನವರಿ, 23: ಮಂಗಳೂರು ಗೋಲಿ ಬಜೆಯಿಂದ ಹಿಡಿದು ಪಿಜ್ಜಾದವರೆಗೆ, ಕಾರ ಬುಂದಿಯಿಂದ ಹಿಡಿದು ಉಪ್ಪಿನಕಾಯಿವರೆಗೆ, ನಿಪ್ಪಟ್ಟು, ಕೋಡುಬಳೆ, ಬಿಕ್ರಮ್ ಪಾಪಡ್, ಬಂಗಾರ್‌ಪೇಟ್ ಪಾನಿಪುರಿ, ಗೋಲಿ ವಡಾಪಾವ್, ಕೇಕ್ ಮತ್ತು ಕ್ರೀಮ್‌ಗಳು, ವೆಜ್‌ರೋಲ್, ಕೊಲ್ಲಾಪುರಿ ಭೇಲ್, ಡೋಕ್ಲಾ, ಮುಳಬಾಗಿಲು ದೋಸೆ... ಆಹಾ ಬಾಯಲ್ಲಿ ನೀರು ಬಂತಾ?

ಹೌದು.. ತರಹೇವಾರಿ ತಿಂಡಿ ಸವಿಯಲು ನೀವು ರಾಮಕೃಷ್ಣ ಆಶ್ರಮ ಮತ್ತು ಉಮಾ ಥಿಯೇಟರ್ ಮಧ್ಯದಲ್ಲಿರುವ ಮರಾಠಾ ಹಾಸ್ಟೆಲ್ ಆವರಣಕ್ಕೆ ಭೇಟಿ ನೀಡಲೇಬೇಕು. ಜನವರಿ 23, 24 ರಂದು ಎಲ್ಲ ತಿಂಡಿಗಳ ರುಚಿ ಸವಿಯಬಹುದು. ನಿಮ್ಮ ನಿಮ್ಮ ನಾಲಗೆಗೆ ತಕ್ಕಂತೆ![ಅರೆರೆ.. ಅವರೆ ಮೇಳ.. ಕೊಂಚ ದುಬಾರಿ, ಆದ್ರೂ ಬರ್ರಿ!]

ನಮಗೆ ಸಾಮಾಜಿಕ ತಾಣದಲ್ಲಿಯೇ ಸಾಕಷ್ಟು ಪ್ರಚಾರ ಸಿಕ್ಕಿದೆ ಎಂದು ರುಚಿ ಸಂತೆಯನ್ನು ಆಯೋಜಿಸಿರುವ 'ಯುನಿಕ್ 360' ಎಂಬ ಸೋಷಿಯಲ್ ನೆಟ್‌ವರ್ಕ್ ಗ್ರೂಪ್‌ನ ಸದಸ್ಯರು ಹೇಳುತ್ತಾರೆ. ಸಚ್ಛ ಭಾರತ ಅಭಿಯಾನವನ್ನು ಪೂರಕವಾಗಿರಿಸಿಕೊಂಡು ಹಮ್ಮಿಕೊಂಡಿರುವ ರುಚಿ ಸಂತೆಯ ಘಮವನ್ನು ನಾವು ಸವಿದುಕೊಂಡು ಬರೋಣ...[ಈ ವಾರ ಮನೇಲಿ ಬೋರಿ ಮಾಡಿರಿ, ನಮ್ಮನ್ನೂ ಕರೀರಿ]

ಅದ್ಭುತ ಪ್ರತಿಕ್ರಿಯೆ

ಅದ್ಭುತ ಪ್ರತಿಕ್ರಿಯೆ

ಶುಕ್ರವಾರವೇ ಜನರಿಂದ ಅಭೂತಪೂರ್ವ ಸ್ವಾಗತ ಸಂತೆಗೆ ಸಿಕ್ಕಿದೆ. ಅವರ ಇಷ್ಟಕ್ಕೆ ಬೇಕಾದ ತಾಜಾ ತಿಂಡಿಗಳನ್ನು ಸ್ಥಳದಲ್ಲೇ ಸವಿದು ಮೆಚ್ಚುಗೆ ಸೂಚಿಸಿ ತೆರಳಿದ್ದಾರೆ ಎಂದು ಸಂಘಟಕರಲ್ಲಿ ಒಬ್ಬರಾದ ಜೀವನ್ ಹೇಳುತ್ತಾರೆ.

ಬಿಬಿಎಂಪಿ ಸದಸ್ಯರಿಗೆ ಅಡುಗೆ ಸ್ಪರ್ಧೆ

ಬಿಬಿಎಂಪಿ ಸದಸ್ಯರಿಗೆ ಅಡುಗೆ ಸ್ಪರ್ಧೆ

ಶುಕ್ರವಾರ ಬಿವಿಎಂಪಿ ಕಾರ್ಪೋರೇಟರ್ ಗಳಿಗೆ ಅಡುಗೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಬಿಬಿಎಂಪಿಯ ಮಹಿಳಾ ಸದಸ್ಯರು ಉತ್ಸಾಹದಿಂದ ಪಾಲ್ಗೊಂಡು ವಿವಿಧ ಭಕ್ಷ್ಯಗಳನ್ನು ತರಾರಿಸಿದರು.

 170 ಸ್ಟಾಲ್ ಗಳು

170 ಸ್ಟಾಲ್ ಗಳು

ಸಂತೆಯಲ್ಲಿ 170 ಅಧಿಕ ಸ್ಟಾಲ್ ಗಳಿವೆ. ಪಡ್ಡು, ದೋಸೆ, ಇಡ್ಲಿ, ತಟ್ಟೆ ಇಡ್ಲಿ, ಪಲಾವ್, ಅವರೆಕಾಳು ತಿಂಡಿ ಎಲ್ಲವನ್ನು ಸವಿಯಬಹುದಾಗಿದೆ. ಎಲ್ಲ ಸ್ಟಾಲ್ ಗಳಲ್ಲೂ ತಿಂಡಿಗೆ ಯಾವ ಬೆಲೆ ಎಂಬ ಬೋರ್ಡ್ ನ್ನು ನೇತುಹಾಕಿದ್ದಾರೆ.

 50 ರು. ಪ್ರವೇಶ ಶುಲ್ಕ

50 ರು. ಪ್ರವೇಶ ಶುಲ್ಕ

ಸಾಮಾನ್ಯರು 50 ರು. ಪ್ರವೇಶ ಶುಲ್ಕ ನೀಡಿ ಒಳಗೆ ಹೋಗಬೇಕು. ಪಾಸ್ ಇದ್ದವರಿಗೆ ಇದರಿಂದ ವಿನಾಯಿತಿ. ಶನಿವಾರ ಬೆಳಗ್ಗೆಯೇ ಸಾಗರೋಪಾದಿಯಲ್ಲಿ ಜನ ರುಚಿ ಸಂತೆ ಕಡೆ ಹೆಜ್ಜೆ ಹಾಕಿದರು.

ಸಾಂಸ್ಕೃತಿಕ ಕಾರ್ಯಕ್ರಮ

ಸಾಂಸ್ಕೃತಿಕ ಕಾರ್ಯಕ್ರಮ

ಪ್ರತಿದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿವೆ. ಶನಿವಾರ ಸಂಜೆ ಬೀಟ್ ಗುರುಸ್ ತಂಡದಿಂದ ಮನರಂಜನೆ ಕಾರ್ಯಕ್ರಮವಿದೆ. ಆರೋಗ್ಯ ಹೆಚ್ಚಿಸಿಕೊಳ್ಳುವ ಟಿಪ್ಸ್ ಗಳನ್ನು ನೀಡಲಾಗುತ್ತದೆ.

ವಾರದ ಅಂತ್ಯ ಸುಂದರ

ವಾರದ ಅಂತ್ಯ ಸುಂದರ

ನಿಮ್ಮ ಕುಟುಂಬ ಇಲ್ಲವೇ ಪ್ರೀತಿ ಪಾತ್ರರೊಂದಿಗೆ ತೆರಳಿದರೆ ವಾರಾಂತ್ಯದ ಸಂಜೆಯನ್ನು ಮತ್ತಷ್ಟು ಸುಂದರವಾಗಿಸಬಹುದು.

ಮಂಗಳೂರು ತಿಂಡಿ

ಮಂಗಳೂರು ತಿಂಡಿ

ಮಂಗಳೂರಿನ ತರೇವಾರಿ ತಿಂಡಿಗಳಾದ, ನೀರು ದೋಸೆ, ಗೋಲಿ ಬಜ್ಜಿ, ಬನ್ಸ್, ಕಡುಬು ಎಲ್ಲವನ್ನು ಸವಿಯಬಹುದು.

ಉತ್ತರ ಕರ್ನಾಟಕ ಸ್ಪೇಶಲ್

ಉತ್ತರ ಕರ್ನಾಟಕ ಸ್ಪೇಶಲ್

ಉತ್ತರ ಕರ್ನಾಟಕದ ರೊಟ್ಟಿ ಅಂಗಡಿಗಳು ನಿಮ್ಮನ್ನು ಸೆಳೆಯುತ್ತವೆ. ಜೋಳದ ಖಡಕ್ ರೊಟ್ಟಿ, ಕಾಳು ಪಲ್ಯ, ರಾಗಿ ರೊಟ್ಟಿ, ಚಟ್ನಿ ಪುಡಿ ಎಲ್ಲವೂ ಒಂದೇ ಕಡೆ ಲಭ್ಯವಿದೆ.

English summary
Bengaluru: The ‘Ruchi Santhe,' a three-day vegetarian food festival, threw open its doors to customers on Friday. The festival is being held at the Maratha Hostel grounds in Basavanagudi and will remain open between 9 am and 10.30 pm on Saturday and Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X