ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾರಿಗೆ ಇಲಾಖೆ ವೆಬ್ ಸೈಟ್ ತಾತ್ಕಾಲಿಕ ಸ್ಥಗಿತ

By Manjunatha
|
Google Oneindia Kannada News

ಬೆಂಗಳೂರು, ನವೆಂಬರ್ 20 : ಹೊಸ ಡ್ರೈವಿಂಗ್ ಲೈಸೆನ್ಸ್ ಗೆ ಅಪ್ಲೈ ಮಾಡಬೇಕು, ಆನ್ ಲೈನ್ ನಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ ದಂಡ ಪಾವತಿಸಬೇಕು, ಆರ್.ಟಿ.ಓ ಗೆ ಸಂಬಂಧಿಸಿದ ಆನ್ ಲೈನ್ ಸೇವೆಗಳನ್ನು ಬಳಸಬೇಕು ಎಂದಿದ್ದರೆ ಸ್ವಲ್ಪ ತಡೆಯಿರಿ.

ಆರ್.ಟಿ.ಓ ನ ವೆಬ್ ಸೈಟ್ ತಾತ್ಕಾಲಿಕವಾಗಿ ಬಂದ್ ಆಗಿದೆ. ಆರ್.ಟಿ.ಓ ತನ್ನ ಎಲ್ಲ ಆನ್ ಲೈನ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಸಾರಿಗೆ ಸಂಸ್ಥೆಯ ಜಾಲತಾಣ 'www.transport.karnataka.gov.in' ನಲ್ಲಿ "ಎಸ್.ಐ.ಸಿ ಸರ್ವರ್ ನ (ಸ್ಟೇಟ್ ರಿಜಿಸ್ಟರ್) ತಾಂತ್ರಿಕ ತೊಂದರೆಯಿಂದಾಗಿ ಸಾರಿಗೆ ಇಲಾಖೆಯ ಆನ್ ಲೈನ್ ಸೇವೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದು, ಶೀಘ್ರದಲ್ಲಿಯೇ ಪ್ರಾರಂಭಿಸಲಾಗುವುದು, ಅನಾನುಕೂಲಕ್ಕೆ ವಿಷಾಧಿಸುತ್ತೇವೆ' ಎಂಬ ಸಾಲುಗಳು ಕಾಣುತ್ತಿವೆ.

RTO website has been temporarily stopped working

ಸಾರಿಗೆ ಇಲಾಖೆಯ ದತ್ತಾಂಶಗಳನ್ನು ಶೇಖರಿಸಿಟ್ಟಿದ್ದ ಸರ್ವರ್‌ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದೆ. ಅದರಿಂದಾಗಿ ಇಲಾಖೆಯ ಆನ್‌ಲೈನ್‌ ಸೇವೆಗಳೆಲ್ಲ ಸೋಮವಾರ ನವೆಂಬರ್ 20ರಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ.

ಈ ಜಾಲತಾಣದ ಮೂಲಕ ಲಭ್ಯವಾಗುತ್ತಿದ್ದ ಕಲಿಕಾ, ಚಾಲನಾ ಪ್ರಮಾಣ ಪತ್ರ ಮತ್ತು ಹೊಸ ವಾಹನಗಳ ನೋಂದಣಿಗಾಗಿ ಅರ್ಜಿ ಸಲ್ಲಿಸುವ ಹಾಗೂ ಇ-ಪಾವತಿ ಸೇವೆಗಳು ನಿಷ್ಕ್ರಿಯಗೊಂಡಿವೆ. ಇದರಿಂದ ರಾಜ್ಯದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ (ಆರ್‌ಟಿಒ) ಕಚೇರಿಗಳ ಕೆಲಸಕ್ಕೆ ಅಡ್ಡಿಯಾಗಿದೆ.

English summary
Karnataka RTO website has been temporarily stopped working. due to this all RTO Offices in Karnataka perform almost no work today
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X