ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಂಬತ್ತು, ಒಂಬತ್ತು, ಒಂಬತ್ತು ಜೇಬಿಗೆ ಕತ್ತರಿ ಬಿತ್ತು, ಏನಿದರ ಗಮ್ಮತ್ತು!

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 29: ನಿಮ್ಮ ವಾಹನಗಳಿಗೆ ಫ್ಯಾನ್ಸಿ ನಂಬರ್ ಹುಡುಕುವ ಮುನ್ನ ಒಮ್ಮೆ ಆಲೋಚಿಸಿ, ಜ್ಯೋತಿಷ್ಯ ಕ್ರೇಜ್ ಈ ಎಲ್ಲಾ ಕಾರಣಗಳಿಗಾಗಿ ಫ್ಯಾನ್ಸಿ ನಂಬರ್ ಗಳನ್ನು ಪಡೆಯುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ.

ಲಕ್ಷಗಟ್ಟಲೆ ಹಣ ನೀಡಿ ಈ ನಂಬರ್ ಖರೀದಿಸುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಬರೋಬ್ಬರಿ 4.40ಲಕ್ಷ ರೂಗಳಿಗೆ ಸಂಖ್ಯೆ 9 ಹರಾಜಾಗಿದೆ.

ಸಿಎಂಗೆ ಆರ್ಥಿಕ ಮುಗ್ಗಟ್ಟಿನ ಚಿಂತೆ, ಅಧಿಕಾರಿಗಳಿಗೆ ಲಕ್ಸುರಿ ಕಾರ್‌ ಬೇಕಂತೆ!ಸಿಎಂಗೆ ಆರ್ಥಿಕ ಮುಗ್ಗಟ್ಟಿನ ಚಿಂತೆ, ಅಧಿಕಾರಿಗಳಿಗೆ ಲಕ್ಸುರಿ ಕಾರ್‌ ಬೇಕಂತೆ!

ಎಲೆಕ್ಟ್ರಾನಿಕ್ ಸಿಟಿಯ ಸಾರಿಗೆ ಅಧಿಕಾರಿ ಕಚೇರಿಯಲ್ಲಿ ಪ್ರಾರಂಭಿಸಲಾಗುವ ಕೆಎ-51-ಎಂಎನ್ ಮುಂಗಡ ಶ್ರೇಣಿ ಫ್ಯಾನ್ಸಿ ಸಂಖ್ಯೆ ಹರಾಜು ಪ್ರಕ್ರಿಯೆ ಮಂಗಳವಾರ ನಡೆದಿದೆ. ಹರಾಜಿನಲ್ಲಿ ಒಟ್ಟು 22 ಜನ ತಮ್ಮಿಚ್ಛೆಯ ಫ್ಯಾನ್ಸಿ ಸಂಖ್ಯೆಯನ್ನು ಪಡೆದುಕೊಂಡಿದ್ದಾರೆ. ಅದರಲ್ಲಿ ಸಂಖ್ಯೆ 9ಕ್ಕೆ ಹೆಚ್ಚಿನ ಪೈಪೋಟಿ ನಡೆಯಿತು.

RTO bids Rs.4.4 lakhs for registration of number 9

ವಾಹನ ಮಾಲೀಕರು ಈ ಸಂಖ್ಯೆಯನ್ನು ತನ್ನದಾಗಿಸಿಕೊಳ್ಳಲು ಹರಾಜಿನಲ್ಲಿ ನಾಮುಂದು, ತಾಮುಂದು ಎಂದು ಹರಾಜು ಕೂಗಿದರು, ಕೊನೆಗೆ 4.40ಲಕ್ಷ ರೂ.ಗೆ ಒಂಬತ್ತು ಸಂಖ್ಯೆ ಹರಾಜಾಯಿತು. ಉಳಿದಂತೆ 1,999,9999,8055 ಮುಂತಾದವು ಹೆಚ್ಚಿನ ಮೊತ್ತಕ್ಕೆ ಬಿಡ್ ಆಗಿವೆ.

ಬಿಬಿಎಂಪಿಗೆ ಬೇಕಂತೆ 12 ಐಷಾರಾಮಿ ಹೊಚ್ಚ ಹೊಸ ಕಾರುಗಳುಬಿಬಿಎಂಪಿಗೆ ಬೇಕಂತೆ 12 ಐಷಾರಾಮಿ ಹೊಚ್ಚ ಹೊಸ ಕಾರುಗಳು

ಒಟ್ಟಾರೆ ಫ್ಯಾನ್ಸಿ ಸಂಖ್ಯೆ ಹರಾಜಿನಿಂದ ಇಲಾಖೆಗೆ 13.34 ಲಕ್ಷ ರೂ ಬಂದಿದೆ. ಬಿಡ್ ದಾರರು ನೀಡುವ 75ಸಾವಿರ ರೂ. ಡಿಡಿಯಿಂದ 16.50ಲಕ್ಷ ರೂ ಬಂದಿದೆ.

ಪ್ರತಿ ವರ್ಷವೂ ಫ್ಯಾನ್ಸಿ ಶ್ರೇಣಿಯನ್ನು ಆರಂಭಿಸುವಾಗ ಸಾರಿಗೆ ಇಲಾಖೆಯು ಹರಾಜು ಪ್ರಕ್ರಿಯೆಯನ್ನು ಆರಂಭಿಸುತ್ತದೆ, ಇದರಲ್ಲಿ ಫ್ಯಾನ್ಸಿ ನಂಬರ್ ಪಡೆಯಲು ಜನರು ಮುಗಿಬಿದ್ದು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ.

English summary
Electronic city regional transport officer has sold number 9 for registration of vehicle for Rs.4.40 lakhs which 22 persons were participated in the online bidding on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X