ಲೋಕಾಯುಕ್ತರ ನೇಮಕಕ್ಕೆ ಮತ್ತೆ ಶುರುವಾಯ್ತು ಪ್ರತಿಭಟನೆ

Posted By: Prithviraj
Subscribe to Oneindia Kannada

ಬೆಂಗಳೂರು, ಅಕ್ಟೋಬರ್, 25: ಲೋಕಾಯುಕ್ತರನ್ನೂ ಶೀಘ್ರ ನೇಮಕ ಮಾಡುವಂತೆ ಒತ್ತಾಯಿಸಿ ಆರ್ ಟಿ ಐ ಕಾರ್ಯಕರ್ತರು ಮಂಗಳವಾರ (ಅ.25) ಲೋಕಾಯುಕ್ತ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಬೆಳಿಗ್ಗೆ ಕಪ್ಪುಪಟ್ಟಿ ಧರಿಸಿ ಭಿತ್ತಿ ಪತ್ರಗಳೊಂದಿಗೆ ಕಚೇರಿ ಮೆಟ್ಟಿಲುಗಳ ಮೇಲೆ ಆರ್ ಟಿ ಐ ಕಾರ್ಯಕರ್ತರು ಧರಣಿ ಆರಂಭಿಸಿದರು. ಪ್ರತಿಭಟನಕಾರರನ್ನು ಪೊಲೀಸ್ ಸಿಬ್ಬಂದಿ ಬಂಧಿಸಿ ಕರೆದೊಯ್ದರು.

ಲೋಕಾಯುಕ್ತರ ನೇಮಕಕ್ಕೆ ಆಗ್ರಹಿಸಿ ಪ್ರತಿಭಟನೆ: ಕಾರ್ಯಕರ್ತರ ಬಂಧನ

ಲೋಕಾಯುಕ್ತ ಸಂಸ್ಥೆಗೆ ಹನ್ನೊಂದು ತಿಂಗಳಿನಿಂದ ನೇಮಕ ಮಾಡದೆ ಇರುವುದರಿಂದ ಸಂಸ್ಥೆ ಮುಚ್ಚುವ ಸ್ಥಿತಿಗೆ ಬಂದಿದೆ. ಸಂಸ್ಥೆಗೆ ಸಲ್ಲಿಕೆಯಾಗುತ್ತಿರುವ ದೂರುಗಳು ಧೂಳು ಹಿಡಿಯುತ್ತಿವೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಇಬ್ಬರೂ ಉಪಲೋಕಾಯುಕ್ತರನ್ನು ನೇಮಕ ಮಾಡಲಾಗಿದ್ದರೂ ಯಾವುದೇ ಪ್ರಯೋಜವಾಗಿಲ್ಲ. ದೂರುಗಳು ವಿಲೇವಾರಿ ಆಗದೆ ಹಾಗೆಯೇ ಉಳಿದಿವೆ ಎಂದು ಕಾರ್ಯಕರ್ತರು ತಿಳಿಸಿದರು.

ಆರ್ ಟಿ ಐನಲ್ಲಿ ಸಲ್ಲಿಸುವ ಅರ್ಜಿಗೂ ಮಾಹಿತಿ ನೀಡುತ್ತಿಲ್ಲ. ಸರ್ಕಾರ ಕೂಡಲೇ ಲೋಕಾಯುಕ್ತರನ್ನು ನೇಮಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
RTI activist protest to appoint Lokayukta in Bengaluru on Monday,(Oct. 25). The Police were arrested protesters.
Please Wait while comments are loading...