ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯುವಕರ ಜತೆ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಮುಖಾಮಖಿ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 11: ರಾಷ್ಟ್ರಭಕ್ತಿ ಹಾಗೂ ರಾಷ್ಟ್ರೀಯ ವಿಚಾರಧಾರೆಗಳಿಗೆ ಹೆಸರಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅತ್ಯುಚ್ಛ ಹುದ್ದೆ ಆಗಿರುವ ಸರಸಂಗ ಚಾಲಕರು ಇದೇ ಮೊಸಲ ಬಾರಿಗೆ ರಾಜ್ಯದ ಯುವಕರೊಂದಿಗೆ ನೇರ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ.

ನಾಲ್ಕು ದಿನಗಳ ಕಾಲ ಬೆಂಗಳೂರಿನಲ್ಲಿ ಸಂವಾದ ನಡೆಯಲಿದೆ. ವಾರ್ಷಿಕ ಸಂಘಟನಾ ನಿಮಿತ್ತ ಆರ್‌ಎಸ್‌ಎಸ್‌ ಸರಸಂಘ ಚಾಲಕ ಡಾ. ಮೋಹನ್‌ ಭಾಗವತ್‌ ಬೆಂಗಳೂರಿಗೆ ಆಗಮಿಸುತ್ತಿದ್ದು ವಿವಿಧ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಹಿಂದೆ ಐಟಿ ಬಿಟಿ ಉದ್ಯೋಗಿಗಳನ್ನು ಸೆಳೆಯಲು ಐಟಿ ಮಿಲನ್‌ ಪ್ರಾರಂಭಿಸಿ ಆರ್‌ಎಸ್‌ಎಸ್‌ ನೆಡೆಗೆ ತಂತ್ರಜ್ಞಾನ ಸ್ನೇಹಿ ಯುವಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು.

ಅಭಿನವ ಬೀಚಿ ಗಂಗಾವತಿ ಪ್ರಾಣೇಶ್‌ 'ನಕ್ಕಾಂವ ಗೆದ್ದಾಂವ' ಓದಲು ಮರಿಬೇಡಿಅಭಿನವ ಬೀಚಿ ಗಂಗಾವತಿ ಪ್ರಾಣೇಶ್‌ 'ನಕ್ಕಾಂವ ಗೆದ್ದಾಂವ' ಓದಲು ಮರಿಬೇಡಿ

ಆಗಸ್ಟ್ 12ರಂದು ಭಾನುವಾರ ಬೆಳಗ್ಗೆ ನಗರದ ಆರ್‌.ವಿ. ಟೀಚರ್ಸ್‌ ಕಾಲೇಜಿನಲ್ಲಿ ಸಾವಿರಕ್ಕೂ ಹೆಚ್ಚು ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಾಮಾನ್ಯವಾಗಿ ಆರ್ಎಸ್‌ಎಸ್‌ ತರಬೇತಿ ಶಿಬಿರದಲ್ಲಿ ಭಾಗವಹಿಸಲು ಗರಿಷ್ಠ ವಯೋಮಾನ 40 ವರ್ಷ ನಿಗದಿಪಡಿಸಲಾಗಿದೆ.

RSS chief will interact with youths in Bengaluru

ಆ.15ರವರೆಗೆ ವಿವಿಧ ಸಂಘಟನಾತ್ಮಕ ಸಭೆಗಳಲ್ಲಿ ಭಾಗವಹಿಸಲಿರುವ ಭಾಗವತ್‌ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಲಿದ್ದಾರೆ, ಬನಶಂಕರಿಯಲ್ಲಿರುವ ರಾಷ್ಟ್ರೋತ್ತಾನ ವಿದ್ಯಾಕೇಂದ್ರ ಶಾಲೆಯಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡಲಿದ್ದಾರೆ. ಆ.13ಕ್ಕೆ ಆರ್‌ಎಸ್‌ಎಸ್‌ ಪ್ರಾಂತ ಕಾರ್ಯಕಾರಿಣಿ ಸಭೆ ಜತೆಗೆ ವಿವಿಧ ಹಂತದ ಪದಾಧಿಕಾರಿಗಳ ಸಭೆ ನಡೆಸಲಿದ್ದಾರೆ.

English summary
RSS supremo Mohanji Bhagavath will have interaction with several youths in Bengaluru during his four days visit to Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X