ರುದ್ರೇಶ್ ಹತ್ಯೆ, ಬೆಂಗಳೂರಲ್ಲಿ ನಾಲ್ವರ ಬಂಧನ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 27: ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರೆಲ್ಲರೂ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಸದಸ್ಯರು ಎಂದು ನಗರ ಪೊಲೀಸ್ ಆಯುಕ್ತ ಮೇಘರಿಕ್ ಹೇಳಿದ್ದಾರೆ

ಕೇರಳದಲ್ಲಿ ಪ್ರಭಾವಿ ಪ್ರಾದೇಶಿಕ ಪಕ್ಷವಾಗಿರುವ ಎಸ್ ಡಿ ಪಿಐ ಕರ್ನಾಟಕದಲ್ಲೂ ತನ್ನ ಪ್ರಭುತ್ವ ಹೊಂದಿದೆ. ಮಂಗಳೂರು,ಬೆಂಗಳೂರು, ಮೈಸೂರು, ಮಡಿಕೇರಿಯಲ್ಲೂ ಪಕ್ಷದ ಘಟಕಗಳಿವೆ.[ಕೇರಳದ ಸುಪಾರಿ ಕಿಲ್ಲರ್ಸ್ ಗಳಿಂದ ರುದ್ರೇಶ್ ಹತ್ಯೆ ಶಂಕೆ?]

RSS activist Rudresh Murder : Three Accused arrested are SDPI Members

ಸಾದಿಕ್, ವಾಸೀಂ, ಮಜರ್, ಮುಜೀದ್ ಬಂಧಿತ ಆರೋಪಿಗಳಾಗಿದ್ದಾರೆ. ಘಟನೆ ದಿನದಂದು ಟೀ ಕುಡಿಯುತ್ತಾ ನಿಂತಿದ್ದ ರುದ್ರೇಶ್ ಇರುವ ಜಾಗಕ್ಕೆ ವಸೀಂ ಹಾಗೂ ಮುಜೀದ್ ಬೈಕಿನಲ್ಲಿ ಬಂದಿದ್ದಾರೆ. ರುದ್ರೇಶ್ ಕುತ್ತಿಗೆಗೆ ವಸೀಂ ಲಾಂಗ್ ನಿಂದ ಕೊಚ್ಚಿದ್ದಾರೆ ಎಂದು ತಿಳಿದು ಬಂದಿದೆ.[ಹಿಂದೂ ಸಂಘಟನೆ ಸದಸ್ಯರು ಎಷ್ಟೊಂದು ಮಂದಿ ಸತ್ತರು?]

ಈ ಕೊಲೆಯ ಸಂಚಿನಲ್ಲಿ ಮತ್ತೊಬ್ಬ ಪ್ರಮುಖ ಆರೋಪಿ ನಾಪತ್ತೆಯಾಗಿದ್ದು ಪೊಲೀಸರ ಹುಡುಕಾಟ ಜಾರಿಯಲ್ಲಿದೆ. ರುದ್ರೇಶ್ ಕೊಲೆಗೆ ವೈಯಕ್ತಿಕ ದ್ವೇಷ ಕಾರಣವಲ್ಲ ಎಂಬ ಹೊಸ ಸಂಗತಿ ಬೆಳಕಿಗೆ ಬಂದಿದೆ.

ಆರೋಪಿಗಳು:
1. ಮೊಹಮ್ಮದ್ ಸಾದಿಕ್ (35 ವರ್ಷ), ಜೆಸಿ ನಗರ.
2. ಮೊಹಮ್ಮಸ್ ಮುಜೀಬುಲ್ಲಾ(44) ಆರ್ ಟಿ ನಗರ
3. ವಾಸೀಂ ಅಹ್ಮದ್(30), ಆಸ್ಟಿನ್ ಟೌನ್
4. ಇರ್ಫಾನ್ ಪಾಷ(30), ಗೋವಿಂದಪುರ


(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a major breakthrough the Bengaluru police arrested four persons in connection with the murder of RSS worker Rudresh. The four arrested persons are Mohammad Sadiq, Mohammad Mujibullah, Wasim Ahmed and Irfan Pasha.
Please Wait while comments are loading...