ಪರಪ್ಪನ ಅಗ್ರಹಾರದಲ್ಲಿ ಶಶಿಕಲಾ ಗಳಿಸಲಿರುವ ಹಣವೆಷ್ಟು?

By: ವಿಕಾಸ್ ನಂಜಪ್ಪ
Subscribe to Oneindia Kannada
ಬೆಂಗಳೂರು, ಫೆಬ್ರವರಿ 16 : ನೀಲಿ ಸೀರೆಯ ಸಮವಸ್ತ್ರ, ಅಲ್ಯುಮಿನಿಯಂ ತಟ್ಟೆ ಮತ್ತು ಲೋಟವನ್ನು ಕೈಯಲ್ಲಿ ಹಿಡಿದುಕೊಂಡು, ಊಟ ತಿಂಡಿಗಾಗಿ ಇತರ ಅಪರಾಧಿಗಳೊಂದಿಗೆ ಕ್ಯೂನಲ್ಲಿ ನಿಲ್ಲಬೇಕಾದಂಥ ಪರಿಸ್ಥಿತಿ ತಂದುಕೊಂಡಿರುವ ಶಶಿಕಲಾ ಪರಪ್ಪನ ಅಗ್ರಹಾರ ಜೈಲಿನಲ್ಲಿ ಗಳಿಸಲಿರುವ ಮೊತ್ತ ಎಷ್ಟು?

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಯಲಲಿತಾ ಜೊತೆ ಸೇರಿಕೊಂಡು 66.65 ಕೋಟಿ ರು. ಸ್ವಾಹಾ ಮಾಡಿರುವ ಶಶಿಕಲಾ ನಟರಾಜನ್, ಕಳೆಯಬೇಕಾಗಿರುವ 3.6 ವರ್ಷಗಳಲ್ಲಿ ನಿಯತ್ತಾಗಿ ಕೆಲಸ ಮಾಡಿದರೆ 65 ಸಾವಿರದ 7 ನೂರು ರುಪಾಯಿ! ಶಶಿಕಲಾ ಜೈಲಿನಲ್ಲಿ ಮಾಡಬೇಕಾಗಿರುವುದು ಮೇಣಬತ್ತಿ ತಯಾರಿಸುವ ಕೆಲಸ.[ಜಯಾ ಅಕ್ರಮ ಆಸ್ತಿ ಪ್ರಕರಣದಲ್ಲಿ ಕರ್ನಾಟಕ ಖರ್ಚು ಮಾಡಿದ್ದು 5 ಕೋಟಿ!]

Rs 65700 is what Sasikala will earn at the end of her jail term

ಜಯಲಲಿತಾ ಸೇರಿಕೊಂಡು ಕಂಪನಿಗಳ ಮೇಲೆ ಕಂಪನಿಗಳನ್ನು ಸ್ಥಾಪಿಸಿ ಕೋಟಿಗಟ್ಟಲೆ ಲೂಟಿ ಹೊಡೆದಿರುವ ಶಶಿಕಲಾ ಪರಪ್ಪನ ಅಗ್ರಹಾರದಲ್ಲಿ ಎಲ್ಲರಂತೆ ಒಬ್ಬ ಅಪರಾಧಿ. ಸನ್ನಡತೆಯ ಮೇಲೆ ಮೊದಲೇ ಬಿಡುಗಡೆಯಾಗದಿದ್ದರೆ 3.6 ವರ್ಷಗಳ ಕಾಲ ಮೇಣಬತ್ತಿ ತಯಾರಿಸುವ ಕೆಲಸ ಕಾಯಂ.

ಪ್ರತಿದಿನ ಕಷ್ಟಪಟ್ಟು ಚಾಕರಿ ಮಾಡಿ ಗಳಿಸಲಿರುವ 65,700 ರುಪಾಯಿಯನ್ನು ಶಶಿಕಲಾ ಜೈಲಿನಿಂದ ಹೊರಬರುವ ಮುನ್ನ ನೀಡಲಾಗುತ್ತದೆ. ಪ್ರತಿ ಕೈದಿಗೂ ಅವರು ಮಾಡುವ ಕೆಲಸದ ಆಧಾರದ ಮೇಲೆ ದಿನಗೂಲಿ ನೀಡಲಾಗುತ್ತದೆ. ಶಶಿಕಲಾಗೆ ಪ್ರತಿನಿತ್ಯ 50 ರುಪಾಯಿ ನೀಡಲಾಗುತ್ತದೆ.[66 ಕೋಟಿ ಅಕ್ರಮ ಆಸ್ತಿ ಕೇಸಿನ ದೋಷಿಗೆ ದಿನಕ್ಕೆ 50 ರು. ಸಂಬಳ]

ಪೋಯೆಸ್ ಗಾರ್ಡನ್ ನಲ್ಲಿ ಐಷಾರಾಮಿ ಜೀವನ ಕಳೆಯಬೇಕಾಗಿದ್ದ ಶಶಿಕಲಾ, ಕೋಟಿಗಟ್ಟಲೆ ಹಣವನ್ನು ಎಣಿಸುತ್ತ ಚಿನ್ನದ ತಟ್ಟೆಯಲ್ಲಿ ಊಟ ಮಾಡಬೇಕಿದ್ದ ಚಿನ್ನಮ್ಮ ಪ್ರತಿದಿನ 50 ರುಪಾಯಿ ಗಳಿಸಬೇಕಿದ್ದರೆ ಪ್ರತಿದಿನ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ.

ಬಂದೀಖಾನೆ ಪ್ರವೇಶಿಸುವ ಮುನ್ನ ಶಶಿಕಲಾಗೆ ಮೂರು ನೀಲಿ ಸೀರೆ, ಒಂದು ಮಂಚ, ಒಂದು ಜಮಖಾನೆ, ಒಂದು ಟೇಬಲ್ ಫ್ಯಾನ್ ನೀಡಲಾಗಿದೆ. ಆಕೆ ತನಗೆ ಎಸಿ ರೂಮ್ ಬೇಕು, ಸಂಡಾಸು ಮಾಡಲು ಪಾಶ್ಚಾತ್ಯ ಶೈಲಿಯ ಕಮೋಡ್ ಬೇಕು, ಕುಡಿಯಲು ಮಿನರಲ್ ನೀರು ಬೇಕು ಇತ್ಯಾದಿ ಬೇಡಿಕೆ ಇಟ್ಟಿದ್ದರು. ಅದೆಲ್ಲವನ್ನೂ ನಿರಾಕರಿಸಲಾಗಿದೆ.[ಶಶಿಕಲಾಗೆ ಜೈಲೂಟವೇ ಗ್ಯಾರಂಟಿ, ಜತೆಗಿಬ್ಬರು ಸಹ ಕೈದಿ]

ಅಂದ ಹಾಗೆ, ಬೆಂಗಳೂರಿನಲ್ಲಿರುವ ಪರಪ್ಪನ ಅಗ್ರಹಾರ ಶಶಿಕಲಾಗೆ ಹೊಸದೇನೂ ಅಲ್ಲ. 2014ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಾನ್ ಮೈಕಲ್ ಡಿಕುನ್ಹಾ ಅವರು ಜೈಲಿಗಟ್ಟಿದಾಗ 20 ದಿನ ಇಲ್ಲಿಯೇ ಕಳೆದಿದ್ದಾರೆ. ಹೀಗಾಗಿ ಅವರಿಗೆ ಇಲ್ಲಿಯ ಪರಿಸರದ, ಚಾಕರಿಯ ಪರಿಚಯವಿದೆ.

ಹಿಂದಿನ ಬಾರಿ ಶಶಿಕಲಾ, ಅಪರಾಧದಲ್ಲಿ ಸಹೋದ್ಯೋಗಿಯಾಗಿರುವ ಇಳವರಸಿ ಜೊತೆ 23ನೇ ನಂಬರ್ ಬಂದೀಖಾನೆಯಲ್ಲಿ ಇದ್ದರು. ಆಗ ಜಯಲಲಿತಾ ಕೂಡ ಇದೇ ರೀತಿ ಜೈಲೂಟ ಮಾಡಿದ್ದರು. ಈಗ ಏಕಾಂಗಿಯಾಗಿ ಶಶಿಕಲಾ ಮೇಣಬತ್ತಿ ತಯಾರಿಸಬೇಕಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Sasikala is in jail and will remain there for the next 3.6 years unless she gets a remission of sentence due to good conduct. As she entered the jail on Wednesday she was handed over the jail uniform- a blue saree, plate and a tumbler. The work allotted to her was candle making at Rs 50 a day.
Please Wait while comments are loading...