ಎಂಎಆರ್ ಯೋಜನೆ: ಪ್ರತಿ 1 ಕಿಮೀ ರಸ್ತೆಗೆ ಬರೋಬ್ಬರಿ 43 ಕೋಟಿ ವೆಚ್ಚ!

Posted By: Nayana
Subscribe to Oneindia Kannada

ಬೆಂಗಳೂರು, ಫೆಬ್ರವರಿ 14 : ನಾಡಪ್ರಭು ಕೆಂಪೇಗೌಡ ಬಡಾವಣೆಯಿಂದ ಮಾಗಡಿ ರಸ್ತೆ ಹಾಗೂ ಮೈಸೂರು ರಸ್ತೆಯನ್ನು ಸಂಪರ್ಕಿಸುವ 10.7 ಕಿ.ಮೀ ರಸ್ತೆಗೆ ಬರೋಬ್ಬರಿ 466 ಕೋಟಿ ರೂ ವೆಚ್ಚಮಾಡಲಾಗುತ್ತಿದ್ದು ಪ್ರತಿ ಕಿ.ಮೀ ಗೆ 43 ಕೋಟಿ ರೂ ತಲುಗುಲುತ್ತದೆ ಈ ಸುದ್ದಿ ಸಾರ್ವಜನಿಕರು ಹುಬ್ಬೇರಿಸುವಂತೆ ಮಾಡಿದೆ.

ನಮ್ಮ ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನಕ್ಕೆ ಖರ್ಚಾಗಿರುವುದ 450 ಕೋಟಿ. ಆದರೆ, ಇದಕ್ಕಿಂತ ಹೆಚ್ಚಿನ ಹಣವನ್ನು ಸಿದ್ದರಾಮಯ್ಯ ಸರ್ಕಾರ ಬರೀ 10 ಕಿಲೋಮೀಟರ್ ರಸ್ತೆಗೆ ಖರ್ಚು ಮಾಡಲು ಹೊರಟಿದೆ.

ಬಿಡಿಎ: ನಿವೇಶನಕ್ಕೆ ಅರ್ಜಿ ಸಲ್ಲಿಸಲು ಫೆ.23 ರವರೆಗೆ ಕಾಲಾವಕಾಶ

ಈ ರಸ್ತೆಯನ್ನು ಬಿಡಿಎ ನಿರ್ಮಿಸುತ್ತಿದೆ. ಜನವರಿ 2 ರಂದು ನಡೆದ ಕ್ಯಾಬಿನೇಟ್ ನಲ್ಲಿ ಎಂಎಆರ್ ಯೊಜನೆಗೆ 466 ಕೋಟಿ ರೂ ಮೀಸಲಿಡುವ ಬಗ್ಗೆ ಹಸಿರು ನಿಶಾನೆ ನೀಡಲಾಗಿದೆ. ಈ ಹಿಂದೆ ಫೆರಿಪೆರಲ್ ರಿಂಗ್ ರೋಡ್ 2 ಭಾಗ 1 ರಲ್ಲಿ ತುಮಕೂರು ರಸ್ತೆ , ಹೊಡೂರು ರಸ್ತೆ, ಬಳ್ಳಾರಿ ರಸ್ತೆ ಮಾರ್ಗವಾಗಿ ಹಳೆ ಮದ್ರಾಸ್ ರಸ್ತೆ ಹಾಗೂ ಸರ್ಜಾಪುರ ರಸ್ತೆಗೆ ಸಂಪರ್ಕ ಕಲ್ಪಿಸುವ ಯೋಜನೆ ಇನ್ನುವರೆಗೂ ಮುಗಿದಿಲ್ಲ.

Rs 43 crore-a-km spend on Bengaluru Arterial road

ಕೆಂಪೇಗೌಡ ಲೇಔಟ್ ಪ್ರಾಜೆಕ್ಟ್​ನ ಭಾಗವಾಗಿ ಈ ಕಾಮಗಾರಿಯ ಗುತ್ತಿಗೆಯನ್ನು ಸ್ಟಾರ್ ಕಂಪೆನಿಗೆ ವಹಿಸಿಕೊಡಲಾಗುತ್ತಿದೆ. ಒಂದು ಕಿಲೋಮೀಟರ್ ಡಾಂಬರ್ ರಸ್ತೆಗೆ ಹೆಚ್ಚೆಂದರೆ ಖರ್ಚಾಗುವುದು 1 ಕೋಟಿ. ಇನ್ನೂ ಕಾಂಕ್ರಿಟ್ ರಸ್ತೆಗೆ ಪ್ರತಿ ಕಿಲೋಮೀಟರ್​ಗೆ 2ರಿಂದ ಮೂರುವರೆ ಕೋಟಿಯಾಗುತ್ತೆ.

ಇವತ್ತಿನ ದಿನಗಳಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಟೆಂಡರ್ ಶ್ಯೂರ್ ರಸ್ತೆಗೆ ಪ್ರತಿ ಕಿಲೋಮೀಟರ್​ಗೆ 5 ಕೋಟಿಯಾದರೆ ವೈಟ್ ಟಾಪಿಂಗ್ ರಸ್ತೆಯ ಖರ್ಚಾಗೋದು ಕಿಲೋಮೀಟರ್​ಗೆ ಹೆಚ್ಚೆಂದ್ರೂ 10 ಕೋಟಿ. ಹೀಗಿರುವಾಗ ಕೆಂಪೇಗೌಡ ಲೇಔಟ್​ನ ಪ್ರತಿ ಕಿಲೋಮೀಟರ್ ರಸ್ತೆಗೆ 39 ಕೋಟಿ ಖರ್ಚು ಮಾಡುತ್ತಿರುವುದು ಯಾರ ಉದ್ದಾರಕ್ಕೆ ಎನ್ನುವುದು ಈಗಿರುವ ಪ್ರಶ್ನೆಯಾಗಿದೆ.

ಈಗ ನಡೆಯುತ್ತಿರುವ ಎನ್ ಎಚ್ ಎಎಲ್ ರಸ್ತೆಯಲ್ಲಿ ಒಂದು ಕಿ.ಮೀ ಗೆ 15 ಕೋಟಿ ರೂ. ವೆಚ್ಚಮಾಡಲಾಗುತ್ತಿದೆ. ನಗರಾಭಿವೃದ್ಧಿ ಇಲಾಖೆ ಮಾಹಿತಿ ಪ್ರಕಾರ ಅಭಿವೃದ್ಧಿ ವೆಚ್ಚವು ಅಧಿಕವಾಗಿದೆ ಹಾಗೂ ಸೇವಾ ತೆರಿಗೆ ಕೂಡ ಹೆಚ್ಚಳವಾಗಿದೆ ಆದ್ದರಿಂದ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದಿದ್ದಾರೆ.

ಜಿಎಸ್ ಟಿ ಪ್ರಭಾವದಿಂದ ನಂತರ ಎಂಎಆರ್ ಯೋಜನೆಗೆ ೪೩೮ ಕೋಟಿ ಮೀಸಲಿಡುಲು ಚಿಂತನೆ ನಡೆಸಲಾಗಿತ್ತು, ಅದಾದ ನಂತರ 469 ಕೋಟಿ ಮೀಡಲಿಡುವಂತೆ ಬಿಡ್ ಮಾಡಲಾಗಿತ್ತು. ಕೊನೆಯದಾಗಿ ಸರ್ಕಾರವು 466 ಕೋಟಿ ಮೀಲಿಡುವುದಾಗಿ ತಿಳಿಸಿದೆ. ಇದು 350 ಎಕರೆ ಪ್ರದೇಶದಲ್ಲಿ, 2 ಸರ್ವೀಸ್ ರಸ್ತೆ ಒಳಗೊಂಡಂತೆ, 10 ಲೈನ್ ರಸ್ತೆಗಳನ್ನು ನಿರ್ಮಿಸಲಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The cost of constructing a road in Bengaluru is set to touch a new high : Rs 43 crore a km. The 10.7km major arterial road (MAR) proposed to connect Magadi road and Mysuru road.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ