ರಮ್ಯಾ ಟ್ವಿಟ್ಟರಲ್ಲಿ ನಡೆಯುತ್ತಿದೆ ಹೊಸ ಕರೆನ್ಸಿ ನೋಟು ಪರೀಕ್ಷೆ!

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 15: ಮಂಡ್ಯದ ಮಾಜಿ ಸಂಸದೆ ರಮ್ಯಾ ಅಲಿಯಾಸ್ ದಿವ್ಯಸ್ಪಂದನ ಅವರು ಟ್ವಿಟ್ಟರ್ ಖಾತೆಯಲ್ಲಿ ಕರೆನ್ಸಿ ನೋಟುಗಳ ಗುಣಮಟ್ಟದ ಪರೀಕ್ಷೆ ನಡೆಯುತ್ತಿದೆಯೇ? ಹಿಂಬಾಲಕರು ಹಾಗೂ ಟ್ವೀಟ್ ಲೋಕದ ಮಂದಿಗೆ ಹೀಗೊಂದು ಅನುಮಾನ ಬಂದಿದೆ.

ನವೆಂಬರ್ 8ರಂದು ಮಧ್ಯರಾತ್ರಿಯಿಂದ 500 ಹಾಗೂ 1000 ರೂಪಾಯಿ ಬಳಕೆ ನಿಷೇಧಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಆದೇಶ ಹೊರಡಿಸಿದರು. ಕಪ್ಪುಹಣ ತಡೆ, ಕಾಳಧನಿಕರ ಮೇಲೆ ನಿಯಂತ್ರಣ ಎನ್ ಡಿಎ ಸರ್ಕಾರದ ಗುರಿಯಾಗಿದೆ. [ಗುಣಮಟ್ಟ ಪರೀಕ್ಷೆ : ನೀರಿನಲ್ಲಿ ಹೊಸ ನೋಟು ತೊಳೆದು ನೋಡಿ!]

Rs 2,000 note Quality Test at Ramya alias Divya Spandana Twitter account

ನೋಟುಗಳ ಬದಲಾವಣೆ ಭರಾಟೆ, ಎಟಿಎಂಗಳ ಮುಂದೆ ಸಾರ್ವಜನಿಕರ ಸರತಿ ಸಾಲು, ಜನ ಸಾಮಾನ್ಯರ ಸಂಕಷ್ಟ, ಹೊಸ 2000 ರೂಪಾಯಿ ನೋಟಿನ ಗುಣಮಟ್ಟದ ಬಗ್ಗೆ ಅನೇಕ ಚರ್ಚೆ, ಪ್ರತಿಕ್ರಿಯೆಗಳು ಬರುತ್ತಲೇ ಇವೆ.

ಈ ನಡುವೆ ನಟಿ ಕಮ್ ರಾಜಕಾರಣಿ ರಮ್ಯಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಪ್ರಾತ್ಯಕ್ಷಿಕೆ ಹಾಕಿ, ಹೊಸ ನೋಟಿನ ಗುಣಮಟ್ಟ ಸರಿ ಇಲ್ಲ,


ಬಣ್ಣ ಸುಲಭವಾಗಿ ಅಳಿಸಿ ಹೋಗುತ್ತಿದೆ ಎಂದಿದ್ದಾರೆ. ರಮ್ಯಾ ಅವರ ಟ್ವೀಟ್ ಗೆ ಪರ ವಿರೋಧ ಪ್ರತಿಕ್ರಿಯೆಗಳು ಬಂದಿವೆ.

ಇದಲ್ಲದೆ ಮಂಗಳವಾರ ಮತ್ತೊಂದು ಟ್ವೀಟ್ ಮಾಡಿದ್ದಾರೆ.


ಹುಡುಗಿಯರು ಲಿಪ್ ಸ್ಟಿಕ್ ಮರೆತರೆ ಚಿಂತಿಸಬೇಕಾಗಿಲ್ಲ. ಸುಮ್ಮನೆ 2000 ರೂಪಾಯಿ ನೋಟಿಗೆ ಮುತ್ತು ಕೊಟ್ಟರೆ ಸಾಕು ನಿಮ್ಮ ತುಟಿಗಳಿಗೆ ಬಣ್ಣ ತಾನಾಗೇ ಸಿಗುತ್ತದೆ.

ಬೇಕಾದರೆ ಈ ಚಿತ್ರ ನೋಡಿ ಎಂದಿದ್ದಾರೆ.


ಆ ಚಿತ್ರದಲ್ಲಿ ನೇರಳೆ ಬಣ್ಣದ ಲಿಪ್ ಸ್ಟಿಕ್ ಹಾಕಿಕೊಂಡಿರುವ ನಟಿ ಐಶ್ವರ್ಯಾ ರೈ ಇದ್ದಾರೆ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Rs 2,000 note Quality Test: My help at home showed me a video of a man wiping the color off the 2000 rs note, I didn't believe it. So they tried it out themselves Tweeted former Mandya MP Ramya alias Divya Spandana.
Please Wait while comments are loading...