ಸ್ವರ್ಣ ಭಾರತಿ ಸಹಕಾರ ಬ್ಯಾಂಕಿಗೆ 1.05 ಕೋಟಿ ರೂ. ಲಾಭ

Subscribe to Oneindia Kannada

ಬೆಂಗಳೂರು, ಮೇ 16: ರಾಜ್ಯದ ಸಹಕಾರ ಬ್ಯಾಂಕುಗಳಲ್ಲಿ ವರ್ಷದಿಂದ ವರ್ಷಕ್ಕೆ ಆರ್ಥಿಕ ಪ್ರಗತಿ ಕಾಣುತ್ತಾ ಬಂದಿರುವ ಸ್ವರ್ಣ ಭಾರತಿ ಸಹಕಾರ ಬ್ಯಾಂಕ್ 2016-17 ನೇ ಸಾಲಿನಲ್ಲಿ ರೂ. 1.05 ಕೋಟಿಗೂ ಮೀರಿ ಲಾಭವನ್ನು ಗಳಿಸುವ ಮೂಲಕ ಹೊಸ ಮೈಲುಗಲ್ಲು ಸ್ಥಾಪಿಸಿದೆ.

ಪ್ರಸ್ತುತ 6000ಕ್ಕೂ ಮೇಲ್ಪಟ್ಟು ಸದಸ್ಯರನ್ನು ಹೊಂದಿರುವ ಬ್ಯಾಂಕ್ ಬೆಂಗಳೂರು ನಗರದಲ್ಲಿ ಗ್ರಾಹಕರ ನೆಚ್ಚಿನ ಸಹಕಾರ ಬ್ಯಾಂಕುಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2.00 ಕೋಟಿ ರೂಪಾಯಿಗಳಿಗೂ ಅಧಿಕ ಶೇರು ಬಂಡವಾಳ ಹೊಂದಿದ್ದು, 53 ಕೋಟಿ ರೂಪಾಯಿಗಳಿಗೂ ಅಧಿಕ ಠೇವಣಿ ಹೊಂದಿದೆ.

 Rs 1.05 crore profit to Swarna Bharathi Co-operative Bank in 2016

ನೋಟು ಅಮಾನ್ಯೀಕರಣ ಸಂದರ್ಭದಲ್ಲೂ ಬ್ಯಾಂಕು ಉತ್ತಮ ಕೆಲಸ ನಿರ್ವಹಿಸಿದ್ದು ಪರಿಣಾಮ ಒಟ್ಟಾರೆ ಬ್ಯಾಂಕಿನ ವ್ಯವಹಾರ ಶೇ. 40 ರಿಂದ 45 ರಷ್ಟು ಹೆಚ್ಚಳವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rupees 1.05 crore profit to Swarna Bharathi Co-operative Bank limited in the financial year 2016-17. Bank will be located in Bengaluru and its area of working is Bengaluru City.
Please Wait while comments are loading...