ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುನಿರತ್ನ ಶಾಸಕತ್ವ ಅನರ್ಹಗೊಳಿಸುವಂತೆ ಸ್ಪೀಕರ್‌ಗೆ ಮನವಿ: ಮುನಿರಾಜು

By Nayana
|
Google Oneindia Kannada News

ಬೆಂಗಳೂರು, ಜೂನ್ 5: ಮುನಿರತ್ನ ಶಾಸಕತ್ವವನ್ನು ಅನರ್ಹಗೊಳಿಸುವಂತೆ ರಾಜರಾಜೇಶ್ವರಿನಗರ ಬಿಜೆಪಿ ಪರಾಜಿತ ಅಭ್ಯರ್ಥಿ ತುಳಸಿ ಮುನಿರಾಜು ಸ್ಪೀಕರ್‌ಗೆ ಮನವಿ ಮಾಡಿದ್ದಾರೆ.

ಮಂಗಳವಾರ ತುಳಸಿ ಮುನಿರಾಜು, ಬಿಬಿಎಂಪಿ ಸದಸ್ಯೆ ಮಮತಾ ವಾಸುದೇವ್, ಶಿವಣ್ಣ, ರಾಕೇಶ್‌ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಈ ವಿಷಯ ತಿಳಿಸಿದ ಅವರು, ರಾಜರಾಜೇಶ್ವರಿನಗರದಲ್ಲಿ ಚುನಾವಣಾ ಅಕ್ರಮದ ತಲ್ಲಣ ಮೂಡಿತ್ತು.

ರಾಜರಾಜೇಶ್ವರಿ ನಗರದ ಚುನಾವಣೆ : ಯಾರಿಗೆ ಎಷ್ಟು, ಮತ? ರಾಜರಾಜೇಶ್ವರಿ ನಗರದ ಚುನಾವಣೆ : ಯಾರಿಗೆ ಎಷ್ಟು, ಮತ?

ನಕಲಿ ಛಾಪಾ ಕಾಗದ ಹಗರಣದ ಸುದ್ದಿ ಮಾದರಿಯಲ್ಲಿ ಮತದಾರರ ಚೀಟಿ ಮಾಡಲಾಗಿತ್ತು. ಅಲ್ಲದೆ ಸಾವಿರಾರು ಓಟರ್ ಐಡಿ ಸಂಗ್ರಹ ಮಾಡಲಾಗಿತ್ತು. ಇದೆಲ್ಲದಕ್ಕೆ ಕ್ಷೇತ್ರದ ಶಾಸಕ ಮುನಿರತ್ನ ಅವರೇ ಕಾರಣ. ಕ್ಷೇತ್ರದ ಶಾಸಕರ ಸ್ಥಾನ ಅನರ್ಹಗೊಳಿಸುವಂತೆ ಸ್ಪೀಕರ್ ಅವರಲ್ಲಿ ಮನವಿ ಮಾಡುತ್ತೇನೆ ಎಂದರು.

RR Nagar politics: Tulasi urges speaker to disqualify MLA Munirathna

ಮತದಾರರ ಚೀಟಿ ಪತ್ತೆ ವಿಚಾರದಲ್ಲಿ ಯಾವುದೇ ತನಿಖೆ ನಡೆಸದೆ ಚುನಾವಣೆಯನ್ನು ನಡೆಸಲಾಯಿತು. 9 ಸಾವಿರ ಅಕ್ರಮ ಮತದಾರ ಚೀಟಿ ತೆಗೆದುಕೊಂಡು ಹೋಗಿದ್ದರೂ, ಜಾಲಹಳ್ಳಿ ಪೊಲೀಸ್‌ ಠಾಣೆಯಲ್ಲಿ 420 ಪ್ರಕಟಣ ದಾಖಲಿಸಿದ್ದರೂ ಕೂಡ ಯಾರನ್ನೂ ಬಂಧಿಸಿಲ್ಲ.

ಚುನಾವಣಾ ಅಕ್ರಮ ನಡೆದ ಬಳಿಕ, ನನ್ನನ್ನೂ ಸೇರಿದಂತೆ ಬಿಜೆಪಿ ಮುಖಂಡರ ಮೇಲೆ ಜಾತಿ ನಿಂದನೆ ದೂರು ದಾಖಲಿಸಲಾಗಿದೆ. ಒಂದು ರೀತಿಯ ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ ಎಂದರು.

ಆರ್.ಆರ್.ನಗರ ಚುನಾವಣೆ : ಬಿಜೆಪಿ ಸೋಲಿಗೆ ಕಾರಣಗಳು!ಆರ್.ಆರ್.ನಗರ ಚುನಾವಣೆ : ಬಿಜೆಪಿ ಸೋಲಿಗೆ ಕಾರಣಗಳು!

ಜನಾದೇಶ ನಮ್ಮ ಪರವಾಗಿದೆ. ಅತಿ ಹೆಚ್ಚು ಜನ ಅವರ ವಿರುದ್ಧವಾಗಿ ತನಗೆ ಮತ್ತು ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಿದ್ದಾರೆ.ಅವರ ಬೆಂಬಲಿಗರು ಎರಡು ಬಾರಿ ಮತದಾನ ಮಾಡಿರೋದಾಗಿ ಹೇಳಿಕೊಂಡಿದ್ದಾರೆ.ಈ ಪ್ರಕರಣವನ್ನ ಇಲ್ಲಿಗೆ ಬಿಡದೆ, ಸುಪ್ರೀಂ ಕೋರ್ಟ್ ವರೆಗೂ ತೆಗೆದುಕೊಂಡು ಹೋಗುತ್ತೇನೆ ಎಂದು ಎಚ್ಚರಿಕೆ ನೀಡಿದರು.

English summary
Defeated BJP candidate in RR Nagar assembly constituency Tulasi Muniraju Gowda has said he will appeal before the speaker seeking disqualification of MLA Munirathna who was involved in fake voters ID scandal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X