ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಏರ್‌ಪೋರ್ಟ್ ಮಾರ್ಗ ಮಹಿಳೆಯರಿಗೆ ಇನ್ನು ಸೇಫ್

|
Google Oneindia Kannada News

ಬೆಂಗಳೂರು, ಅಕ್ಟೋಬರ್ 8: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮತ್ತೊಂದು ಮಾರ್ಗವು ಇನ್ನುಮುಂದೆ ಸುರಕ್ಷಿತವಾಗಿರಲಿದೆ.

ಬೆಂಗಳೂರಿನಿಂದ ಹೊಸ ಮಾರ್ಗದಲ್ಲಿ ಹಲವು ವಿಮಾನಗಳ ಸಂಚಾರ ಬೆಂಗಳೂರಿನಿಂದ ಹೊಸ ಮಾರ್ಗದಲ್ಲಿ ಹಲವು ವಿಮಾನಗಳ ಸಂಚಾರ

ಹೇಗೆ ಅಂತೀರಾ, ಇಷ್ಟು ದಿನ ಟೋಲ್ ನೀಡದೆ ಬೇಗೂರು-ಬಂದಿಕೊಡಿಗೇಹಳ್ಳಿ ಮಾರ್ಗವಾಗಿ ಏರ್‌ಪೋರ್ಟ್ ತಲುಪಬಹುದಿತ್ತು, ಇದು ಏರ್‌ಪೋರ್ಟ್‌ನ ಮತ್ತೊಂದು ಮಾರ್ಗ, ಆದರೆ ಈ ಮಾರ್ಗದಲ್ಲಿ ಎಲ್ಲಿಯೂ ಸ್ಟ್ರೀಟ್‌ಲೈಟ್‌ಗಳು ಇರದ ಕಾರಣ ಮಹಿಳೆಯರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯದ ಪ್ರಕರಣಗಳು ಹೆಚ್ಚಾಗುತ್ತಿತ್ತು.

ಕೆಂಪೇಗೌಡ ಏರ್‌ಪೋರ್ಟ್ ನಲ್ಲಿ ಲಗೇಜ್ ತಪಾಸಣೆಗೆ ಹೊಸ ತಂತ್ರಜ್ಞಾನ ಕೆಂಪೇಗೌಡ ಏರ್‌ಪೋರ್ಟ್ ನಲ್ಲಿ ಲಗೇಜ್ ತಪಾಸಣೆಗೆ ಹೊಸ ತಂತ್ರಜ್ಞಾನ

ಆದರೆ ಇನ್ನೊಂದು ವಾರದೊಳಗೆ ಆ ಮಾರ್ಗದಲ್ಲಿ 1.2 ಕಿ.ಮೀ ಮಾರ್ಗದಲ್ಲಿ ಬೀದಿದೀಪ ಅಳವಡಿಸುವ ಕಾರಣ ಇಂತಹ ಪ್ರಕರಣಗಳು ಕಡಿಮೆಯಾಗಲಿದೆ.

Road to KIA to get streetlights in a week

ಈ ಮಾರ್ಗದಲ್ಲಿ ಹೆಚ್ಚು ಕತ್ತಲಿರುವ ಕಾರಣ ಅತ್ಯಾಚಾರ, ದರೋಡೆ, ಲೈಂಗಿಕ ದೌರ್ಜನ್ಯ, ಅಪಹರಣ ಹೆಚ್ಚಾಗಿದ್ದು ಅಸುರಕ್ಷಿತ ಜಾಗ ಎನ್ನುವ ಪಟ್ಟ ದೊರೆತಿತ್ತು. ಮುಖ್ಯ ಕಾರ್ಯದರ್ಶಿ ಟಿ. ವಿಜಯಭಾಸ್ಕರ್ ಅವರು ಬೆಸ್ಕಾಂಗೆ ಪತ್ರ ಬರೆದಿದ್ದು, ವಿಮಾನ ನಿಲ್ದಾಣ ಆರಂಭವಾಗಿ 10 ವರ್ಷಗಳ ಬಳಿಕ ಆ ಮಾರ್ಗದಲ್ಲಿ ಬೀದಿದೀಪವನ್ನು ಅಳವಡಿಸಲಾಗುತ್ತಿದೆ.

ಕೆಂಪೇಗೌಡ ಏರ್‌ಪೋರ್ಟ್: ಬೋರ್ಡಿಂಗ್ ಪಾಸ್‌ ಮತ್ತಷ್ಟು ಸುಲಭ ಕೆಂಪೇಗೌಡ ಏರ್‌ಪೋರ್ಟ್: ಬೋರ್ಡಿಂಗ್ ಪಾಸ್‌ ಮತ್ತಷ್ಟು ಸುಲಭ

ಸ್ಟ್ರೀಟ್ ಲೈಟ್‌ಗಳ ಅಳವಡಿಕೆ ರಸ್ತೆ ನಿರ್ಮಾಣದ ಒಂದು ಭಾಗವಾಗಿದೆ, ಆದರೆ ರಸ್ತೆ ನಿರ್ಮಿಸುವಾಗ ಸ್ಟ್ರೀಟ್ ಲೈಟ್ ಅಳವಡಿಸಿರಲಿಲ್ಲ. ಶೀಘ್ರದಲ್ಲಿ ವಿದ್ಯುತ್ ಕಂಬಗಳನ್ನು ನೆಟ್ಟು ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತದೆ.

English summary
Here’s a breather for those taking the poorly lit, toll-free alternative road to the Kempegowda International Airport: Streetlights will be installed on a 1.2km stretch of the road in a week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X