ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಚಾರ ನಿಯಮ ಇರುವುದು ಪೊಲೀಸರಿಗಲ್ಲ ಸ್ವಾಮಿ ನಿಮಗೆ

By Nayana
|
Google Oneindia Kannada News

ಬೆಂಗಳೂರು, ಜು.20: ರಸ್ತೆ ಸುರಕ್ಷತಾ , ಸಂಚಾರಿ ನಿಯಮಗಳು ನಿಯಮಗಳು ಎಷ್ಟು ಮಂದಿಗೆ ಗೊತ್ತು, ಆ ನಿಯಮಗಳನ್ನು ಎಷ್ಟು ಜನ ಪಾಲನೆ ಮಾಡ್ತೀರಾ ಎಂದು ಪ್ರಶ್ನಿಸಿದರೆ ಯಾರಲ್ಲೂ ಉತ್ತರವಿಲ್ಲ.

ಪ್ರತಿನಿತ್ಯ ನಗರದಲ್ಲಿ ರಸ್ತೆ ಸುರಕ್ಷತಾ ನಿಯಮವನ್ನು ಉಲ್ಲಂಘಿಸಿ ನೂರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ, ಹೆಲ್ಮೆಟ್‌ ಹಾಕಿಕೊಂಡು ಬೈಕ್‌ ಚಲಾಯಿಸಿ ಎಂದರೆ ಹೆಲ್ಮೆಟ್‌ನ್ನು ಕೈಯಲ್ಲಿಟ್ಟುಕೊಂಡು ಓಡಾಡುತ್ತಾರೆ, ಸಿಗ್ನಲ್‌ಲ್ಲಿ ಕೆಂಪು ಲೈಟ್‌ ಬಂದಾಗ ನಿಲ್ಲಿ ಎಂದರೆ ನಿಯಮವಿರುವುದು ನಮಗಲ್ಲ ಎನ್ನುವ ಹಾಗೆ ಕ್ರಾಸ್‌ ಮಾಡಿಕೊಂಡು ಹೋಗುತ್ತಾರೆ.

Road safety awareness programme conducted for Auto drivers, students

ಬೆಂಗಳೂರು ಟ್ರಾಫಿಕ್ ಸಿಗ್ನಲ್ ಸ್ಮಾರ್ಟ್‌ಗೊಳಿಸಲಿದೆ ಜಪಾನ್ಬೆಂಗಳೂರು ಟ್ರಾಫಿಕ್ ಸಿಗ್ನಲ್ ಸ್ಮಾರ್ಟ್‌ಗೊಳಿಸಲಿದೆ ಜಪಾನ್

ಹಾಗಾದರೆ ಈ ಎಲ್ಲಾ ಸುರಕ್ಷತಾ ನಿಯಮವಿರುವುದು ಕೇವಲ ಪೊಲೀಸರಿಗಾಗಿಯೇ ಎನ್ನುವ ಅನುಮಾನಗಳು ಕಾಡುತ್ತಿವೆ. ಈ ಸಂಚಾರಿ ನಿಯಮಗಳ ಕುರಿತು ಜಾಗೃತಿ ಮೂಡಿಸಲು ನೂರಾರು ಅಭಿಯಾನಗಳನ್ನು ಹಮ್ಮಿಕೊಳ್ಳುತ್ತಿದೆ.

Road safety awareness programme conducted for Auto drivers, students

ನಗರದ ಹಲಸೂರು, ಟ್ರಿನಿಟಿ ಸರ್ಕಲ್‌, ಚಾಲುಕ್ಯ ಸರ್ಕಲ್‌ ಮುಂತಾದ ಕಡೆ ಹೆಲ್ಮೆಟ್‌ ಹಾಕದಿದ್ರೆ ಯಮ ಬರ್ತಾನೆ ಎನ್ನುವ ವಿಷಯವನ್ನಿಟ್ಟುಕೊಂಡು ಜಾಗೃತಿ ಮೂಡಿಸಲಾಗುತ್ತಿದೆ. ಇನ್ನು ಕೆಲವೆಡೆ ಶಾಲಾ ಮಕ್ಕಳಿಗೆ ಈ ಸಂಚಾರ ನಿಯಮಗಳು, ಅದು ಯಾವ ರೀತಿಯಲ್ಲಿ ಉಲ್ಲಂಘನೆಯಾಗುತ್ತಿದೆ ಯಾವ ತಪ್ಪನ್ನು ಮಕ್ಕಳು ಮಾಡಬಾರದು ಎನ್ನುವ ಕುರಿತು ತಿಳಿ ಹೇಳಲಾಗುತ್ತಿದೆ.

Road safety awareness programme conducted for Auto drivers, students

ಇನ್ನು ಆಟೋ ಚಾಲಕರು, ಸಾರ್ವಜನಿಕರಿಗೆ ಸಂಚಾರ ನಿಯಮಗಳುಳ್ಳ ಕರಪತ್ರಗಳನ್ನು ಹಂಚಲಾಗುತ್ತಿದೆ, ಕರಪತ್ರದಲ್ಲಿರುವ ನಿಯಮಗಳನ್ನು ಓದಿರಿ, ಸಂಚಾರಿ ನಿಯಮವನ್ನು ಪಾಲಿಸಿರಿ ಎಂದು ಜಾಗೃತಿ ಮೂಡಿಸುತ್ತಿದ್ದಾರೆ.

English summary
Jayanagar traffic police conducted Road safety awareness program, As part of this programme, the students held placards, from over-speeding, jumping traffic lines or rash driving at signals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X