ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಯದೇವ ಜಂಕ್ಷನ್‌ನಿಂದ ರೈಲು-ರಸ್ತೆ ಬಹುಮಹಡಿ ಫ್ಲೈಓವರ್ ನಿರ್ಮಾಣ

|
Google Oneindia Kannada News

ಬೆಂಗಳೂರು, ಡಿಸೆಂಬರ್ 6: ಜಯದೇವ ಜಂಕ್ಷನ್ ಬಳಿ ಮೆಟ್ರೋ ರೈಲು ಹಾಗೂ ವಾಹನಗಳು ಏಕಕಾಲದಲ್ಲಿ ಸಂಚರಿಸಬಲ್ಲ ರೋಡ್ ಕಂ ರೇಲ್ ಮೇಲ್ಸೇತುವೆ ನಿರ್ಮಾಣ ಕಾರ್ಯ ಶೀಘ್ರ ಆರಂಭವಾಗಲಿದೆ.

ಬನ್ನೇರುಘಟ್ಟ ಕಡೆಯಿಂದ ಈಗಿರುವ ಗ್ರೇಡ್ ಸಪರೇಟರ್ ಗೆ ಸಂಪರ್ಕ ಕಲ್ಪಿಸುವ ಅರ್ಧ ಚಂದ್ರಾಕೃತಿ ಮೇಲ್ಸೇತುವೆ 2019ರ ಏಪ್ರಿಲ್‌ನಲ್ಲಿ ತೆರವಾಗಲಿದೆ.

ಹೆಬ್ಬಾಳದ ಮೂಲಕವೇ ಕೆಂಪೇಗೌಡ ಏರ್‌ಪೋರ್ಟ್‌ಗೆ ನಮ್ಮ ಮೆಟ್ರೋ ಹೆಬ್ಬಾಳದ ಮೂಲಕವೇ ಕೆಂಪೇಗೌಡ ಏರ್‌ಪೋರ್ಟ್‌ಗೆ ನಮ್ಮ ಮೆಟ್ರೋ

ನಮ್ಮ ಮೆಟ್ರೋ ಎರಡನೇ ಹಂತದ ಆರ್‌ವಿ ರಸ್ತೆ-ಬೊಮ್ಮಸಂದ್ರ ಮೆಟ್ರೋ ಕಾಮಗಾರಿ ಚುರುಕಿನಿಂದ ಸಾಗಿದೆ. ಆರ್‌ವಿ ರಸ್ತೆಯಿಂದ ಎಚ್‌ಎಸ್‌ಆರ್ ಲೇಔಟ್ ವರೆಗೆ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಹಿಂದುಸ್ತಾನ್ ಕನ್‌ಸ್ಟ್ರಕ್ಷನ್ ಕಂಪನಿ ಲಿಮಿಟೆಡ್ ಹಾಗೂ ಯುಆರ್‌ಸಿ ಕಂ. ಪ್ರೈವೇಟ್ ಲಿ.ಗೆ ಬಿಎಂಆರ್‌ಸಿಎಲ್ ಗುತ್ತಿಗೆ ನೀಡಿದೆ. ಆರ್‌ವಿ ರಸ್ತೆ, ರಾಗಿಗುಡ್ಡ, ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್, ಸಿಲ್ಕ್ ಬೋರ್ಡ್ ಮೆಟ್ರೋ ನಿಲ್ದಾಣ ನಿರ್ಮಾಣ ಸೇರಿ ಒಟ್ಟು 6.34 ಕಿ.ಮೀ ಮೆಟ್ರೋ ಮಾರ್ಗ ನಿರ್ಮಾಣದ ಗುತ್ತಿಗೆ ಇದಾಗಿದೆ.

Road cum rail fly over in Jayadeva junction

ಹೆಬ್ಬಾಳ ಜಂಕ್ಷನ್‌ನಲ್ಲಿ ಕೆಂಪೇಗೌಡ ಪ್ರತಿಮೆ ಸ್ಥಾಪನೆ ಹೆಬ್ಬಾಳ ಜಂಕ್ಷನ್‌ನಲ್ಲಿ ಕೆಂಪೇಗೌಡ ಪ್ರತಿಮೆ ಸ್ಥಾಪನೆ

ಮಾರೇನಹಳ್ಳಿ ರಸ್ತೆ ಹಾಗೂ ಹೊರವರ್ತುಲ ರಸ್ತೆಯಲ್ಲಿ ಮೆಟ್ರೋ ಕಾಮಗಾರಿ ಚುರುಕಿನಿಂದ ಸಾಗಿದ್ದು, ನಿತ್ಯ ಟ್ರಾಫಿಕ್ ಹೆಚ್ಚಿದೆ. ಬನಶಂಕರಿ ಹಾಗೂ ಹೊರವರ್ತುಲ ರಸ್ತೆಯಿಂದ ಸಿಲ್ಕ್ ಬೋರ್ಡ್ ತಲುಪಲು ಜಯದೇವ ಜಂಕ್ಷನ್ ಮೂಲಕ ದಿನಕ್ಕೆ ಲಕ್ಷಾಂತರ ವಾಹನಗಳು ಸಂಚರಿಸುತ್ತವೆ. ಬನಶಂಕರಿಯಿಂದ ಬರುವ ವಾಹನಗಳು ಜಯದೇವ ಜಂಕ್ಷನ್ ಬಳಿಯಿಂದ ಮೇಲ್ಸೇತುವೆ ಹತ್ತಿ ಇನ್ನೊಂದು ಕಡೆ ಇಳಿಯುತ್ತವೆ.

English summary
BMRCL has decided to construct road cum rail fly over which will have road at first floor and metro rail track at second floor at Jayadeva junction after existing grade separator fly over evacuation in April 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X