ಹವಾಮಾನ ಪಟುತ್ವದ ಬಗ್ಗೆ ಬೆಂಗಳೂರಿಗರೊಂದಿಗೆ ಸಂವಾದ ನಡೆಸಿದ ಅಮೆರಿಕ ತಜ್ಞೆ

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 15:ಅಮೆರಿಕದ ರೋಡ್‌ ಐಲ್ಯಾಂಡ್‌ ನ ಪ್ರಾವಿಡೆನ್ಸ್ ನಗರದ ಸುಸ್ಥಿರತೆ ವಿಭಾಗದ ನಿರ್ದೇಶಕರಾಗಿರುವ ಲೆ ಬ್ಯಾಂಬರ್ಗರ್ಸೆ. 14 ಮತ್ತು 15ರಂದು ಬೆಂಗಳೂರಿಗೆ ಭೇಟಿ ನೀಡಿ, ವಿದ್ಯಾರ್ಥಿಗಳು, ವಿಜ್ಞಾನಿಗಳು ಮತ್ತು ಸಮಾಜದ ಪ್ರಮುಖರೊಂದಿಗೆ ಹವಾಮಾನ ಬದಲಾವಣೆ ಬಗ್ಗೆ ಸಂವಾದ ನಡೆಸಿದರು.

ಸುಸ್ಥಿರ ನಗರ ಯೋಜನೆ ರೂಪಿಸುವಲ್ಲಿ ಸಂರಕ್ಷಣಾ ವಿಜ್ಞಾನ ಮತ್ತು ನಿರ್ವಣೆಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಸದ್ಯಕ್ಕೆ ನೂತನ ಎಚ್ 1ಬಿ ವೀಸಾ ನಿಯಮ ಇಲ್ಲ?

River linking, cloud seeding not sustainable

ಜ್ಞಾನ ವಿನಿಮಯ ಸಂವಾದ ಕಾರ್ಯಕ್ರಮದಲ್ಲಿ ಸ್ಥಳೀಯ ಎನ್‌ಜಿಒ ಮುಖಂಡರೊಂದಿಗೆ ಚರ್ಚೆ ನಡೆಸಿದರು. ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ 'ಗ್ರೀನೊವೇಟ್' ರಾಯಭಾರಿಗಳನ್ನು ಭೇಟಿಯಾದರು. ಹವಾಮಾನ ಬದಲಾವಣೆಯನ್ನು ತಡೆಯುವಲ್ಲಿ ಉದ್ಯಮಗಳ ಪಾತ್ರದ ಕುರಿತು ಪರಿಸರ ಸ್ನೇಹಿ ಉದ್ಯಮಗಳ ಸಿಇಒ ಮತ್ತು ಸಿಒಒಗಳೊಂದಿಗೆ ಮಾತುಕತೆ ನಡೆಸಿದರು.

ವಿಜ್ಞಾನಿಗಳು, ಸಂಶೋಧಕರು ಮತ್ತು ಚಿಂತಕರೊಂದಿಗೆ ಸುಸ್ಥಿರ ನಗರಳ ಬಗ್ಗೆ ಚರ್ಚೆ ನಡೆಸಿದರು. ಲೆ ಬ್ಯಾಂಬರ್ಗರ್, ಅಮೆರಿಕದ ರೋಡ್‌ ಐಲ್ಯಾಂಡ್‌ನ ಪ್ರಾವಿಡೆನ್ಸ್ ನಗರದ ಸಸ್ಟೈನಬಲಿಟಿ ವಿಭಾಗದ ನಿರ್ದೇಶಕರಾಗಿ ದುಡಿಯುತ್ತಿದ್ದಾರೆ.

ಫ್ಲೋರಿಡಾದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ 'ಇರ್ಮಾ'

ತ್ಯಾಜ್ಯವನ್ನು ಮಿತಿಗೊಳಿಸುವುದು, ಮಾಲಿನ್ಯದ ತಡೆ, ಕಾರ್ಯಕ್ಷಮತೆ ಹೆಚ್ಚಳಕ್ಕೆ ಪ್ರೋತ್ಸಾಹ ಮತ್ತು ಸ್ಥಳೀಯ ಸಂಪನ್ಮೂಲಗಳ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಇದಕ್ಕೂ ಮೊದಲು ಮೆಸಚುಸೆಟ್ ನ ಬಾಸ್ಟನ್ ನಗರದ ಮೇಯರ್ ಅಮರೊಂದಿಗೆ ಕೆಲಸ ಮಾಡಿದ್ದು, ಅಲ್ಲಿ ನಗರವನ್ನು ಸುಸ್ಥಿರಗೊಳಿಸಲು ಗ್ರೀನೊವೆಟ್ ಬಾಸ್ಟನ್ ಆಲೋಚನೆಗಳನ್ನು ಜಾರಿ ಮಾಡಿದರು.

ಈ ಆಲೋಚನೆಗಳು ಬಾಸ್ಟನ್ ಜನತೆ ಸುಸ್ಥಿರ ಜೀವನಕ್ಕೆ ಅಗತ್ಯವಾದ ಸುದ್ದಿ, ಮಾಹಿತಿ ಮತ್ತು ಕಾರ್ಯತಂತ್ರಗಳನ್ನು ಒದಗಿಸುತ್ತದೆ. ಬಾಸ್ಟನ್ ಜನತೆಯನ್ನು ಬೆಸೆಯುವ ಈ ಯೋಜನೆಯಿಂದ ಅವರ ಸುತ್ತಮುತ್ತಲ ಸ್ಥಳಗಳಲ್ಲಿನ ಅವಕಾಶಗಳನ್ನು ಗಮನಕ್ಕೆ ತರುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
At a time when the government is thinking of linking rivers and cloud seeding to bring in artificial rain, an US environment expert Leah Bamberger, director of sustainability for the city of Providence Rhode Island said, such attempts of geo-engineering', saying they are unsustainable.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ