ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫುಟ್‌ಪಾತ್‌ ಮೇಲೆ ವಾಹನ ಚಲಾಯಿಸಿದರೆ ಕ್ರಿಮಿನಲ್ ಕೇಸ್

|
Google Oneindia Kannada News

ಬೆಂಗಳೂರು, ನವೆಂಬರ್ 20: ಅಯ್ಯೋ ವಿಪರೀತ ಟ್ರಾಫಿಕ್.. ಫುಟ್ ಪಾತ್ ಖಾಲಿ ಇದೆ ಇದೊಂದು ಸಲ ಅಲ್ಲಿಂದ ಹೋಗಿಬಿಡೋಣ ಎಂದು ಹೋದೀರಿ ಜೋಕೆ...

ಬೆಂಗಳೂರು ಟ್ರಾಫಿಕ್ ಸಿಗ್ನಲ್ ಸ್ಮಾರ್ಟ್‌ಗೊಳಿಸಲಿದೆ ಜಪಾನ್

ಇನ್ನುಮುಂದೆ ಫುಟ್ ಪಾತ್ ಮೇಲೆ ವಾಹನ ಚಲಾಯಿಸಿದರೆ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವುದಷ್ಟೇ ಅಲ್ಲದೆ ವಾಹನ ಜಪ್ತಿ ಮಾಡಿ, ಪರವಾನಗಿಯನ್ನು ರದ್ದು ಮಾಡಲಾಗುತ್ತದೆ ಎಂದು ಸಂಚಾರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಫುಟ್‌ಪಾತ್ ಮೇಲೆ ಬೈಕ್ ಸಂಚಾರಕ್ಕೆ ಬಿತ್ತು ಬ್ರೇಕ್ ಫುಟ್‌ಪಾತ್ ಮೇಲೆ ಬೈಕ್ ಸಂಚಾರಕ್ಕೆ ಬಿತ್ತು ಬ್ರೇಕ್

ಫುಟ್ ಪಾತ್ ವಾಹನ ಚಲಾಯಿಸಿ ಎಷ್ಟೋ ಜನರ ಪ್ರಾಣ ಬಲಿಯಾಗಿದೆ, ಕುಡಿದ ಮತ್ತಿನಲ್ಲಿ ಪಾದಚಾರಿ ಮಾರ್ಗದಲ್ಲಿ ವಾಹನ ಚಲಾಯಿಸುವುದು ಬೇರೆ, ಸರಿ ಇದ್ದರೂ ಹಗಲು ಹೊತ್ತಲ್ಲೇ ಟ್ರಾಫಿಕ್ ನಿಂದ ತಪ್ಪಿಸಿಕೊಳ್ಳಲು ಪಾದಚಾರಿ ಮಾರ್ಗದಲ್ಲಿ ದ್ವಿಚಕ್ರ ವಾಹನಚಲಾಯಿಸಿ ಪಾದಚಾರಿಗಳಿಗೆ ತೊಂದರೆಯನ್ನುಂಟು ಮಾಡುತ್ತಿದ್ದರು. ಅದನ್ನು ತಪ್ಪಿಸುವ ಸಲುವಾಗಿ ಸಂಚಾರ ಪೊಲೀಸರು ಈ ನಿಯಮ ಜಾರಿಗೆ ತಂದಿದ್ದಾರೆ.

ನೈಸ್‌ ರಸ್ತೆಯ 2 ಮಾರ್ಗದಲ್ಲಿ ಟೋಲ್‌ ಪ್ಲಾಜಾ ವಿಸ್ತರಣೆ: ಎಲ್ಲೆಲ್ಲಿ? ನೈಸ್‌ ರಸ್ತೆಯ 2 ಮಾರ್ಗದಲ್ಲಿ ಟೋಲ್‌ ಪ್ಲಾಜಾ ವಿಸ್ತರಣೆ: ಎಲ್ಲೆಲ್ಲಿ?

ಈ ಹಿಂದೆ ಹಲಸೂರು ಪೊಲೀಸರು ಇದಕ್ಕೊಂದು ಉಪಾಯ ಮಾಡಿ ಉಪಯೋಗಕ್ಕೆ ಬಾರದಿರುವ ಕಬ್ಬಿಣದ ಪೋಲ್ ಗಳನ್ನು ತಂದು, ಪಾದಚಾರಿ ಮಾರ್ಗ ಮಧ್ಯದಲ್ಲಿ ಇರಿಸಿದ್ದಾರೆ. ಇದರಿಂದ ಬೈಕ್ ಸವಾರರು ಪಾದಚಾರಿ ಮಾರ್ಗದಲ್ಲಿ ಚಲಾಯಿಸುವುದಕ್ಕೆ ಕಡಿವಾಣ ಹಾಕಿದ್ದರು.

ಏರ್‌ಪೋರ್ಟ್‌ ಬಳಿ ಬಿಎಂಟಿಸಿ ಬಸ್‌ಗಳು ಸದ್ಯಕ್ಕೆ ಟೋಲ್‌ ಕಟ್ಟಬೇಕಿಲ್ಲ ಏರ್‌ಪೋರ್ಟ್‌ ಬಳಿ ಬಿಎಂಟಿಸಿ ಬಸ್‌ಗಳು ಸದ್ಯಕ್ಕೆ ಟೋಲ್‌ ಕಟ್ಟಬೇಕಿಲ್ಲ

Riding on footpath? Be ready to face a criminal case

ಆದರೆ ಬೇರೆ ಪ್ರದೇಶಗಳ ಗತಿ ಏನು ಎಂದು ಆಲೋಚಿಸಿದಾಗ ಫುಟ್ ಪಾತ್‌ ಮೇಲೆ ವಾಹನಗಳನ್ನು ಕಡ್ಡಾಯವಾಗಿ ನಿಷೇಧಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಈಗಾಗಲೇ ನೂರಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ ದಾಖಲಿಸಿ ವಾಹನವನ್ನು ಜಪ್ತಿ ಮಾಡಲಾಗಿದೆ.

English summary
Riding on footpath? Be ready to face a criminal case, seizure of vehicle, arrest procedure and suspension of driving license Not an information but a caution.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X