ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದುಬೈ ಸಂಸ್ಥೆಯಿಂದ ಬೆಂಗಳೂರಲ್ಲಿ ರಾಯಲ್ಸ್ ಕಲ್ಯಾಣ ಮಂಟಪ

By Mahesh
|
Google Oneindia Kannada News

ಬೆಂಗಳೂರು, ಏಪ್ರಿಲ್ 15: ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರಿಂದ ನಗರದ ಅತಿದೊಡ್ಡ ಕಲ್ಯಾಣ ಮಂಟಪ ಆರ್ ಜಿ ರಾಯಲ್ ಉದ್ಘಾಟನೆ ಮಾಡಿದರು.

ದುಬೈನ ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ನಗರದಲ್ಲಿ ಹೊಸದಾಗಿ ನಿರ್ಮಿಸಿರುವ ಅತಿ ದೊಡ್ಡ ಕಲ್ಯಾಣ ಮಂಟಪ ಹಾಗೂ 4 ಸ್ಟಾರ್ ಹೋಟೆಲ್ "ಆರ್ ಜಿ ರಾಯಲ್" ನ್ನು ಉದ್ಘಾಟಿಸಿ ಮಾತನಾಡಿದರು.[ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ ಮದ್ಯ ನಿರ್ಬಂಧ: ಕೇರಳಕ್ಕೆ ಸುಪ್ರೀಂ ಬಲ]

ಫಾರ್ಚೂನ್ ಗ್ರೂಪ್ ಆಪ್ ಹೋಟೇಲ್ ಗಳ ಮೂಲಕ ರವೀಶ್ ಗೌಡ ಅವರು ದುಬಾಯಿಯಲ್ಲಿ ವಿಶಿಷ್ಟ ಹೆಸರನ್ನು ಗಳಿಸಿದ್ದಾರೆ. ಯಶಸ್ವಿ ಉದ್ಯಮಿಯಾಗಿರುವ ಇವರು ರಾಜ್ಯದ ಜನತೆಗೆ ಹೊಸದನ್ನು ನೀಡುವ ಪ್ರಯತ್ನವನ್ನು ಇಲ್ಲಿ ಮಾಡಿದ್ದಾರೆ.

RG Royal Hotel & Convention Centre Inauguration

ಪೋಷಕರು ಕೇವಲ ತಮ್ಮ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಹೆಚ್ಚು ಗಮನ ನೀಡದೆ ಅವರು ಜೀವನದ ಸವಾಲುಗಳಿಗೆ ಸಮರ್ಪಕವಾಗಿ ಸಜ್ಜಾಗುವಂತಹ ಜ್ಞಾನ ಪಡೆಯುವಂತೆ ಪ್ರೇರೇಪಿಸಬೇಕು ಎಂದರು. ಜೀವನದ ಸವಾಲುಗಳು ಶೈಕ್ಷಣಿಕ ಜ್ಞಾನದ ಪರಿಧಿಗಿಂತಲೂ ಮಿಗಿಲಾಗಿರುತ್ತವೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ನೀಡುವ ಮಹತ್ವದಿಂದ ಮಕ್ಕಳು ಹೆಚ್ಚಿನದನ್ನು ಪಡೆಯಲು ಸಾಧ್ಯ ಎಂದು ಹೇಳಿದರು.[ಆರೋಗ್ಯ ಭಾಗ್ಯ ಕಾಪಾಡಿಕೊಳ್ಳಲು 6 ಸರಳ ಸೂತ್ರಗಳು]

ನಂತರ ಮಾತನಾಡಿದ ಕೇಂದ್ರ ಸಚಿವ ಡಿ ವಿ ಸದಾನಂದಗೌಡ, ರಾಜ್ಯದ ಅಭಿವೃದ್ದಿಗೆ ಒಕ್ಕಲಿಗ ಸಮುದಾಯ ಬಹಳಷ್ಟು ಕೊಡುಗೆಯನ್ನು ನೀಡಿದೆ. ಒಕ್ಕಲಿಗ ಸಮುದಾಯದ ಹಲವರು ದೇಶ ವಿದೇಶಗಳಲ್ಲಿ ಯಶಸ್ವಿ ಉದ್ಯಮವನ್ನು ಸ್ಥಾಪಿಸಿಕೊಂಡಿದ್ದಾರೆ. ಪಾರ್ಚೂನ್ ಗ್ರೂಪ್ ಹೋಟೇಲ್ ಕೂಡಾ ಇಂತಹ ಯಶಸ್ವಿ ಉದ್ಯಮಿಗಳಲ್ಲೊಂದು ಎಂದರು.

ಬೆಂಗಳೂರಿನಲ್ಲಿ 4ಸ್ಟಾರ್ ಆರ್ ಜಿ ರಾಯಲ್ ಹೋಟೆಲ್


ಫಾರ್ಚೂನ್ ಗ್ರೂಪ್ ಆಫ್ ಹೋಟೇಲ್ಸ್ ನ ಅಧ್ಯಕ್ಷ ರವೀಶ್ ಗೌಡ್ ಮಾತನಾಡಿ, ಎರಡು ಸಾವಿರಕ್ಕಿಂತಲೂ ಹೆಚ್ಚು ಅತಿಥಿಗಳನ್ನು ಒಳಗೊಂಡಿರುವಂತಹ ಮದುವೆಗಳನ್ನು ಹಾಗೂ ಕಾರ್ಯಕ್ರಮಗಳನ್ನು ಕೇವಲ ಪ್ಯಾಲೇಸ್ ಗ್ರೌಂಡ್ ನಲ್ಲಿ ಮಾತ್ರ ಮಾಡಲು ಸಾಧ್ಯ. ಆ ಮಟ್ಟದ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಬೇರೆ ಯಾವುದೇ ಕಲ್ಯಾಣಮಂಟಪಗಳು ಹಾಗೂ ಕಟ್ಟಡಗಳು ಇಲ್ಲ.

ಈ ಕೊರತೆಯನ್ನು ಹೋಗಲಾಡಿಸುವ ಉದ್ದೇಶದಿಂದ ಆರ್ ಜಿ ರಾಯಲ್ ಕನ್‍ವೆನ್ಷನ್ ಹಾಲ್ ಹಾಗೂ ಹೋಟೇಲನ್ನು ನಿರ್ಮಿಸಲಾಗಿದೆ ಎಂದರು. ಅಲ್ಲದೆ, ಇದರ ಜೊತೆಯಲ್ಲಿಯೇ 4 ಸ್ಟಾರ್ ಶ್ರೇಣಿಯ ಹೋಟೆಲ್ ಕೂಡಾ ಇದ್ದು, ಇಲ್ಲಿನ 70 ಸುಸಜ್ಜಿತ ಕೊಠಡಿಗಳು ದೇಶ ವಿದೇಶದ ಅತಿಥಿಗಳಿಗೆ ಅಂತರಾಷ್ಟ್ರೀಯ ಗುಣಮಟ್ಟದ ಸೇವೆಯನ್ನು ನೀಡಲಿದೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ನಟ ಡಾ. ಶಿವರಾಜ್ ಕುಮಾರ್, ನಟ ಯಶ್, ಸಚಿವ ಅಂಬರೀಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

English summary
Adichunchanagiri Matha jagadguru Nirmalananda Natha Seer has Inaugurated the First of Its kind in terms of Space & Facilities in Bangalore "RG ROYAL HOTEL & CONVENTION" Centre.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X