• search

ನಮ್ಮ ಮೆಟ್ರೋ ಪ್ರಯಾಣಿಕರೇ, 10 ನಿಮಿಷ ಮೊದಲೇ ನಿಲ್ದಾಣಕ್ಕೆ ಬನ್ನಿ!

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ಆಗಸ್ಟ್ 21: ಬೆಳಿಗ್ಗೆ 5 ರಿಂದ ಆರಂಭವಾಗಿ ಸಂಜೆ 11 ಗಂಟೆಯವರೆಗೂ ನಿರಂತರವಾಗಿ ಸೇವೆ ನೀಡುವ ನಮ್ಮ ಮೆಟ್ರೋ ರೈಲು, ಬೆಂಗಳೂರಿಗರ ನೆಚ್ಚಿನ ಸಾರಿಗೆ ವ್ಯವಸ್ಥೆ ಎಂಬುದರಲ್ಲಿ ಎರಡು ಮಾತಿಲ್ಲ.

  ಮೆಟ್ರೋ ಪ್ರಯಾಣಿಕರು ಬೆಳಿಗ್ಗೆ 5 ಕ್ಕೆ ರೈಲು ಹೊರಡುವ ಸಮಯದ 10 ನಿಮಿಷ ಮೊದಲೇ ಅಂದರೆ 4:50 ರ ಹೊತ್ತಿಗೇ ಮೆಟ್ರೋ ನಿಲ್ದಾಣಕ್ಕೆ ತಲುಪುವಂತೆ ಮತ್ತು ರಾತ್ರಿ ಕೊನೆಯ ಟ್ರೈನ್ ಹೊರಡುವ ಹತ್ತು ನಿಮಿಷ ಮೊದಲು ಅಂದರೆ 10:50 ಕ್ಕೇ ನಿಲ್ದಾಣಕ್ಕೆ ಬಂದಿರುವಂತೆ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಶನ್ ಲಿ.(ಬಿಎಂಆರ್ ಸಿಎಲ್) ಪ್ರಯಾಣಿಕರಲ್ಲಿ ಮನವಿ ಮಾಡಿದೆ. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಎಂಆರ್ ಸಿಎಲ್ ಹೇಳಿದೆ.

  ಇವು 'ನಮ್ಮ ಮೆಟ್ರೋ'ದ ಸುಂದರ, ವಿರೂಪ, ಕುರೂಪ ಚಿತ್ರಗಳು!

  ಮೆಜೆಸ್ಟಿಕ್ ನಲ್ಲಿ 11:15, ಯಲಚೇನಹಳ್ಳಿ, ಮೈಸೂರು ರಸ್ತೆ, ಬೈಯಪ್ಪನಹಳ್ಳಿಗಳಲ್ಲಿ 10:50, ನಾಗಸಂದ್ರ ನಿಲ್ದಾಣಗಳಲ್ಲಿ 10:40 ಕ್ಕೆ ನಿಲ್ದಾಣವನ್ನು ಮುಚ್ಚಲಾಗುವುದರಿಂದ ಅದಕ್ಕೂ ಮೊದಲೇ ಪ್ರಯಾಣಿಕರು ನಿಲ್ದಾಣವನ್ನು ಸೇರಿಕೊಳ್ಳಲು ಮನವಿ ಮಾಡಲಾಗಿದೆ. ಬೆಳಿಗ್ಗೆಯೂ ಮೆಟ್ರೋ ರೈಲು ಪ್ರಯಾಣ ಆರಂಭವಾಗುವ 10 ನಿಮಿಷ ಮೊದಲು ನಿಲ್ದಾಣ ತೆರೆಯಲಿದ್ದು, ಅದಕ್ಕೂ ಮೊದಲೇ ಬಂದವರು ನಿಲ್ದಾಣದ ಹೊರಗೇ ಕಾಯಬೇಕಾಗುತ್ತದೆ.

  ಒಂದೇ ದಿನದಲ್ಲಿ ಎಷ್ಟೊಂದು ಕಥೆ ಕೊಟ್ಟ ನಮ್ಮ ಮೆಟ್ರೋ!

  ನೇರಳೆ ಮಾರ್ಗದ ಮೈಸೂರು ರಸ್ತೆ, ಬೈಯಪ್ಪನಹಳ್ಳಿ ಮತ್ತು ಹಸಿರು ಮಾರ್ಗದ ನಾಗಸಂದ್ರ, ಯಲಚೇನಹಳ್ಳಿಗಳಲ್ಲಿ ಮೊದಲ ರೈಲು 5 ಗಂಟೆಗೆ ಹೊರಡಲಿದ್ದು, ಈ ರೈಲಿನಲ್ಲಿ ಮೆಟ್ರೋ ಚಾಲಕರನ್ನು ಕರೆದೊಯ್ಯಲಾಗುತ್ತದೆ. ಪ್ರಯಾಣಿಕರಿಗೂ ಈ ಟ್ರೇನಿನಲ್ಲಿ ಅವಕಾಶವಿದೆಯಾದರೂ ಈ ಟ್ರೇನ್ ನಿಧಾನವಾಗಿ ಸಾಗುವುದರಿಂದ ಪ್ರಯಾಣಿಕರು ಈ ರೈಲನ್ನು ಆಯ್ಕೆ ಮಾಡಿಕೊಳ್ಳುವುದು ಕಡಿಮೆ.

  ಬೆಳಿಗ್ಗೆ 4:50 ಕ್ಕೆ ಮೆಟ್ರೋ ನಿಲ್ದಾಣ ತೆರೆಯುತ್ತೆ

  ಬೆಳಿಗ್ಗೆ 5 ಗಂಟೆಗೆ ಮೆಟ್ರೋ ರೈಲು ಸಂಚಾರ ಆರಂಭವಾಗುವ 10 ನಿಮಿಷ ಮೊದಲು ಅಂದರೆ 4:50ಕ್ಕೆ ಮೆಜೆಸ್ಟಿಕ್, ಯಲಚೇನಹಳ್ಳಿ, ನಾಗಸಂದ್ರ, ಬೈಯಪ್ಪನಹಳ್ಳಿ, ಮೈಸೂರು ರಸ್ತೆ ನಿಲ್ದಾಣಗಳು ತೆರೆಯಲಿವೆ. ಪ್ರಯಾಣಿಕರು ಕೇವಲ ಹತ್ತು ನಿಮಿಷ ಮೊದಲು ನಿಲ್ದಾಣಕ್ಕೆ ಆಗಮಿಸುವಂತಗೆ ಕೋರಲಾಗಿದೆ. ಅದಕ್ಕೂ ಮೊದಲೇ ಬಂದವರು ಮೆಟ್ರೋ ನಿಲ್ದಾಣದಾಚೆ ನಿಂತು ಕಾಯಬೇಕಾಗುತ್ತದಾದ್ದರಿಂದ ಸುರಕ್ಷತೆಯ ದೃಷ್ಟಿಯಿಂದಲೂ ಇದು ಅಪಾಯಕಾರಿ.

  ರಾತ್ರಿ 10 ನಿಮಿಷ ಮೊದಲೇ ನಿಲ್ದಾಣ ಸೇರಿಕೊಳ್ಳಿ

  ರಾತ್ರಿ 10 ನಿಮಿಷ ಮೊದಲೇ ನಿಲ್ದಾಣ ಸೇರಿಕೊಳ್ಳಿ

  ರಾತ್ರಿ 11:15 ಕ್ಕೆ ಮೆಜೆಸ್ಟಿಕ್ ನಿಲ್ದಾಣ ಮುಚ್ಚಲಾಗುವುದರಿಂದ ಪ್ರಯಾಣಿಕರು ಆ ಸಮಯದೊಳಗೆ ನಿಲ್ದಾಣಕ್ಕೆ ಬರುವಂತೆ ಕೋರಲಾಗಿದೆ. ಮೆಜೆಸ್ಟಿಕ್ ನಿಂದ ಹೊರಡುವ ಎಲ್ಲಾ ಟ್ರೇನ್ ಗಳು ರಾತ್ರಿ 11:25 ಕ್ಕೆ ಹೊರಡಲಿದ್ದು, ಇದು ಆ ದಿನದ ಕೊನೆಯ ರೈಲಾಗಿರಲಿದೆ. ಹಾಗೆಯೇ ಯಲಚೇನಹಳ್ಳಿ, ಮೈಸೂರು ರಸ್ತೆ, ಬೈಯಪ್ಪನಹಳ್ಳಿಗಳಲ್ಲಿ 10:50ಕ್ಕೆ ನಿಲ್ದಾಣ ಮುಚ್ಚಲಿದ್ದು, ಇಲ್ಲಿಂದ 11:00 ಗಂಟೆಗೆ ಕೊನೆಯ ರೈಲು ಹೊರಡಲಿವೆ. ನಾಗಸಂದ್ರ ನಿಲ್ದಾಣವನ್ನು 10:40 ಕ್ಕೇ ಮುಚ್ಚಲಿದ್ದು, ಇಲ್ಲಿಂದ ಕೊನೆಯ ರೈಲು 10:50 ಕ್ಕೆ ಹೊರಡಲಿದೆ.

  ರೈಲುಗಳ ಸಂಖ್ಯೆ ಹೆಚ್ಚಾಗಲಿದೆಯೇ?

  ರೈಲುಗಳ ಸಂಖ್ಯೆ ಹೆಚ್ಚಾಗಲಿದೆಯೇ?

  ಸಂಪಿಗೆ ರಸ್ತೆಯಿಂದ ಯಲಚೇನಹಳ್ಳಿ ವರೆಗಿನ ಹಸಿರು ಮಾರ್ಗ ಆರಂಭವಾದ ನಂತರ ಮೆಟ್ರೋ ಬಳಕೆದಾರರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿದೆ. ಈಗಾಗಲೇ ಪ್ರತಿದಿನ 3.t5 ಲಕ್ಷ ಜನರು ಮೆಟ್ರೋ ಬಳಸುತ್ತಿದ್ದಾರೆ. ಜನಜಂಗುಳಿಯೂ ಹೆಚ್ಚಾಗಿರುವುದರಿಂದ ಮೆಟ್ರೋ ರೈಲುಗಳ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆಯೂ ಬಿಎಂಆಅರ್ ಸಿಎಲ್ ಚಿಂತಿಸುತ್ತಿದ್ದು, ಸದ್ಯದಲ್ಲೇ ರೈಲುಗಳ ಸಂಖ್ಯೆಯೂ ಹೆಚ್ಚಲಿದೆ. ಪ್ರಯಾಣಿಕರ ಸಂಖ್ಯೆ ಈಗಿನದಕ್ಕಿಂತ ದುಪ್ಪಟ್ಟಅಗುವ ನಿರೀಕ್ಷೆಯೂ ಇದೆ.

  ಅಂತರ ಕಡಿಮೆ ಮಾಡುವ ಬಗ್ಗೆಯೂ ಚಿಂತನೆ

  ಅಂತರ ಕಡಿಮೆ ಮಾಡುವ ಬಗ್ಗೆಯೂ ಚಿಂತನೆ

  ಒಂದು ರೈಲಿಂದ ಇನ್ನೊಂದು ರೈಲಿಗೆ ಈಗಾಗಲೇ ಕನಿಷ್ಠ 6 ನಿಮಿಷಗಳ ಅಂತಗರವಿದೆ. ಈ ಅಂತರವನ್ನು ಪೀಕ್ ಅವರ್ ನಲ್ಲಿ 4 ನಿಮಿಷಕ್ಕಿಳಿಸಿ, ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Metro travelers should come to 10 mins before the first train starts to travel and 10 minst before the train ends, Bengaluru metro rail corporation ltd told.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more