ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಂಚ ಕೇಳಿ ಎಸಿಬಿಗೆ ಸಿಕ್ಕಿ ಬಿದ್ದ ಆರ್ ಐ ಶಾಂತು

By Ananthanag
|
Google Oneindia Kannada News

ಬೆಂಗಳೂರು, ನವೆಂಬರ್ 28: ಯಲಹಂಕ ಕೆರೆಕೋಡಿ ಬಳಿ ನಿವೇಶನ ಖಾತೆ ಬದಲಾವಣೆಗಾಗಿ ರೆವಿನ್ಯೂ ಇನ್ಸ್ ಪೆಕ್ಟರ್ ಹೆಚ್ಚುವರಿ ಲಂಚ ಕೇಳಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸೋಮವಾರ ಸಿಕ್ಕಿ ಬಿದ್ದಿದ್ದಾರೆ.

ಯಲಹಂಕದ ಕೊಂಡಪ್ಪ ಲೇ ಔಟ್ ನಿವಾಸಿ ಯಲಹಂಕದ ಕೆರೆಗೋಡಿ ರಸ್ತೆಯಲ್ಲಿನ ಬಿಬಿಎಂಪಿ ವಾರ್ಡ್ ನಂ 1 ರಲ್ಲಿ 30x40 ನಿವೇಶನದ ಖಾತೆ ಬದಲಿಸಿಕೊಳ್ಳಲು ಯಲಹಂಕ ಬಿಬಿಎಂಪಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಕಂದಾಯ ವಸೂಲಿಗಾರ ಚೆಲುವಯ್ಯ ಅವರ ಸೂಚನೆಯಂತೆ ಡಿಡಿ ಪಾವತಿಸಿದ್ದರು. ಆದರೆ ಆರ್ ಐ ಶಾಂತಕುಮಾರ್ ಲಂಚಕ್ಕೆ ಒತ್ತಾಯಿಸಿ ಆಗಸ್ಟ್ 6 ರಂದು ರು 2500 ಹಣವನ್ನು ವಸೂಲು ಮಾಡಿದ್ದರು. ಇನ್ನು ಹೆಚ್ಚುವರಿಯಾಗಿ 2000 ನೀಡಬೇಕೆಂದು ದೂರವಾಣಿಯಲ್ಲಿ ಒತ್ತಾಯಿಸಿದಾಗ ಅರ್ಜಿದಾರನಿಗೆ ರೇಗಿತು. ನಂತರ ಅವರಿಗೆ ತಿಳಿಯದಂತೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಸಲ್ಲಿಸಿದ್ದರು.[ಖಾತೆಗಾಗಿ ಲಂಚ ಕೇಳಿದ್ದ ಗ್ರಾಮಲೆಕ್ಕಿಗ ಎಸಿಬಿ ಬಲೆಗೆ]

crime

ಭ್ರಷ್ಟಾಚಾರ ನಿಗ್ರಹದಳ ನವೆಂಬರ್ 27 ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಈ ವಿಚಾರ ತಿಳಿದ ಕಂದಾಯ ವಸೂಲಿಗಾರ ಚೆಲುವಯ್ಯ ಅವರಿಂದ ತಪ್ಪಿಸಿಕೊಂಡು ತಲೆ ಮರೆಸಿಕೊಂಡಿದ್ದಾನೆ. ಅದರೆ ಆರ್ ಐ ಶಾಂತಕುಮಾರ್ ಅವರು ಸಿಕ್ಕಿ ಬಿದ್ದಿದ್ದು ಭ್ರಷ್ಟಾಚಾರ ಕಾಯ್ದೆಯನ್ವಯ ದಸ್ತಗಿರಿ ಮಾಡಲಾಗಿದೆ.[ಲಂಚ ಪಡೆವಾಗ ಬಲೆಗೆ ಬಿದ್ದ ಕಂದಾಯ ಅಧಿಕಾರಿ]

English summary
Anti Corruption Bureau officers raid on yalahanka revenue office, Demand the 2000 rupee bribe Revenue officer to yalahanka Resident in bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X