ಬೆಂಗಳೂರು : ರಸ್ತೆ ಅಪಘಾತ ನಿವೃತ್ತ ಜಡ್ಜ್‌ ಸ್ಥಳದಲ್ಲೇ ಸಾವು

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 21 : ಬೆಂಗಳೂರಿನಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ನಿವೃತ್ತ ನ್ಯಾಯಾಧೀಶರು ಮೃತಪಟ್ಟಿದ್ದಾರೆ. ಯಲಹಂಕ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತಪಟ್ಟವರನ್ನು ನ್ಯಾಯಾಂಗ ಬಡಾವಣೆ ನಿವಾಸಿ ನಿವೃತ್ತ ನ್ಯಾಯಾಧೀಶ ಕೆ.ಈಶ್ವರ್ ಭಟ್ (83) ಎಂದು ಗುರುತಿಸಲಾಗಿದೆ. ಸೋಮವಾರ ಮಧ್ಯಾಹ್ನ ಜಕ್ಕೂರು ಬಳಿ ಈ ಅಪಘಾತ ನಡೆದಿದೆ. ಈಶ್ವರ್ ಭಟ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿದ್ದರು. [ಅಪಘಾತವಾದಾಗ ಜೀವ ಉಳಿಸಲು ನೆರವಾಗಿ]

road accident

ಹೈಕೋರ್ಟ್‌ಗೆ ತೆರಳಲು ಬಸ್ ಹತ್ತಲು ಹೋಗುತ್ತಿದ್ದಾಗ ಕೆಂಪೇಗೌಡ ವಿಮಾನ ನಿಲ್ದಾಣದ ಕಡೆಯಿಂದ ಬಂದ ಸಿಫ್ಟ್ ಕಾರು ಈಶ್ವರ್ ಭಟ್ ಅವರಿಗೆ ಡಿಕ್ಕಿ ಹೊಡೆದಿದೆ. ಕಾಲು ಮತ್ತು ತಲೆಗೆ ಗಂಭೀರಗಾಯವಾಗಿದ್ದ ಈಶ್ವರ್ ಭಟ್ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.[ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆಗೆ ಚಾಲನೆ]

ಯಲಹಂಕ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದು, ಕಾರಿನ ಚಾಲಕ ವಿಜಯ್ ಕುಮಾರ್ ಅವರನ್ನು ಬಂಧಿಸಿದ್ದಾರೆ. [ಶ್ರೀರಂಗಪಟ್ಟಣದ ಕೆ.ಶೆಟ್ಟಿಹಳ್ಳಿ ಕ್ರಾಸ್ ಪ್ರಯಾಣಿಕರ ಯಮಪಾಶ]

9 ಲಕ್ಷ ದರೋಡೆ : ಬ್ಯಾಂಕ್‌ಗೆ ಹಣ ಕಟ್ಟಲು ಹೋಗುತ್ತಿದ್ದವನ ಮೇಲೆ ಹಲ್ಲೆ ಮಾಡಿ 9 ಲಕ್ಷ ರೂ. ದರೋಡೆ ಮಾಡಿರುವ ಘಟನೆ ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೋಂಡಾ ಆಕ್ಟಿವಾ ಬೈಕ್‌ನಲ್ಲಿ ಬ್ಯಾಂಕ್‌ಗೆ ಹಣ ಕಟ್ಟಲು ತೆರಳುತ್ತಿದ್ದ ವಿಶ್ವ ಅವರ ಮೇಲೆ ಪಲ್ಸರ್ ಬೈಕ್‌ನಲ್ಲಿ ಬಂದ ನಾಲ್ವರು ದಾಳಿ ಮಾಡಿ, ಹಣದ ಬ್ಯಾಗ್ ಕಸಿದು ಪರಾರಿಯಾಗಿದ್ದಾರೆ. ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
83-year-old retired judge K. Eshwar Bhat killed in road accident near Jakkur, Bengaluru on Monday, March 21st afternoon. Eshwar Bhat, who retired as a judge with the magistrate court in the city 23 years ago. The Yelahanka traffic police registered a case.
Please Wait while comments are loading...