ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಲ್ಲಾ ಸಮಸ್ಯೆಗಳಿಗೂ ಒಂದೇ ಪರಿಹಾರ, 'ನಮ್ಮ100’ ಸಹಾಯವಾಣಿಗೆ ಚಾಲನೆ

ಬೆಂಗಳೂರು ಪೊಲೀಸರ ಬಹುನಿರೀಕ್ಷಿತ ಸಹಾಯವಾಣಿ 'ನಮ್ಮ100'ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಚಾಲನೆ

By Sachhidananda Acharya
|
Google Oneindia Kannada News

ಬೆಂಗಳೂರು, ಜೂನ್ 10: ಬೆಂಗಳೂರು ಪೊಲೀಸರ ಬಹುನಿರೀಕ್ಷಿತ ಸಹಾಯವಾಣಿ 'ನಮ್ಮ100'ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಚಾಲನೆ ನೀಡಿದರು.

ಹಲವು ಮಹತ್ವಾಕಾಂಕ್ಷಿ ಉದ್ದೇಶಗಳನ್ನು ಇಟ್ಟುಕೊಂಡು, ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ಈ 'ನಮ್ಮ100' ಕಂಟ್ರೋಲ್ ರೂಂ ಆರಂಭಿಸಲಾಗಿದೆ. ದಿನದ 24 ಗಂಟೆ ವಾರದ ಏಳು ದಿನವು ಸಾರ್ವಜನಿಕರು ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಲು 100 ಸಂಖ್ಯೆಗೆ ಕರೆ ಮಾಡಬಹುದು.

ಕೇವಲ 15 ಸೆಕೆಂಡುಗಳಲ್ಲಿ ನಿಮ್ಮ ಕರೆಗಳನ್ನು ಸ್ವೀಕರಿಸಲಾಗುತ್ತದೆ ಮತ್ತು ಕೇವಲ 15 ನಿಮಿಷಗಳಲ್ಲಿ ನೀವಿದ್ದ ಸ್ಥಳಕ್ಕೆ ಹೊಯ್ಸಳ ವಾಹನವನ್ನು ರವಾನಿಸಲಾಗುತ್ತದೆ. ಇದಕ್ಕಾಗಿ ವಿಶೇಷ ತಂತ್ರಜ್ಞಾನಗಳನ್ನು ಬೆಂಗಳೂರು ಪೊಲೀಸರು ಅಳವಡಿಸಿಕೊಂಡಿದ್ದಾರೆ.

ಈ ನಮ್ಮ100 ಯೋಜನೆಯ ಮತ್ತಷ್ಟು ವಿಶೇಷಗಳು ಇಲ್ಲಿವೆ

ಕರೆ ಸ್ವೀಕರಿಸಲು ಕೇವಲ 15 ಸೆಕೆಂಡ್

ನಿಮ್ಮ ಕರೆಯನ್ನು ಕಂಟ್ರೋಲ್ ರೂಂ ಸಿಬ್ಬಂದಿ 15 ಸೆಕುಂಡುಗಳ ಮೊದಲು ಎತ್ತಿಕೊಳ್ಳುತ್ತಾರೆ. 15 ನಿಮಿಷಗಳ ಒಳಗೆ ನೀವಿರುವ ಸ್ಥಳಕ್ಕೆ ಹೊಯ್ಸಳ ಪೊಲೀಸ್ ಗಸ್ತು ವಾಹನವನ್ನು ರವಾನಿಸುತ್ತಾರೆ.

1, 2, 3 ಒತ್ತಿ

100 ಸಂಖ್ಯೆಗೆ ಕರೆ ಮಾಡಿ, ಪೊಲೀಸ್ ಗೆ ಸಂಬಂಧಿಸಿದ ದೂರುಗಳಿಗಾಗಿ ಸಂಖ್ಯೆ 1ನ್ನು ಒತ್ತಿ, ಟ್ರಾಫಿಕ್ ಸಮಸ್ಯೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸಂಖ್ಯೆ 2ನ್ನು ಒತ್ತಿ, ಪೊಲೀಸರ ಻ಅಪಾಯಿಂಟ್ಮೆಂಟ್ ಹಾಗೂ ಯಾವುದೇ ತರಹದ ವಿಚಾರಣೆಗಳಿಗೆ 3ನ್ನು ಒತ್ತಿ.

ಅಪಾಯಿಂಟ್ ಮೆಂಟ್ ಫಿಕ್ಸ್ ಮಾಡಿಕೊಳ್ಳಿ

ಪೊಲೀಸ್ ಠಾಣೆಗಳಿಗೆ ತೆರಳಿ ಕಾಯುವ ಸಮಸ್ಯೆ ಇಲ್ಲ. 100 ಸಂಖ್ಯೆಗೆ ಕರೆ ಮಾಡಿ ನಿಮ್ಮ ಅಪಾಯಿಂಟ್ಮೆಂಟ್ ಫಿಕ್ಸ್ ಮಾಡಿಕೊಳ್ಳಬಹುದು. ನಂತರ ನಿಗದಿಯಾದ ಸಮಯದಲ್ಲಿ ಠಾಣೆಗೆ ಭೇಟಿ ನೀಡಬಹುದು.

ನುರಿತ ಸಿಬ್ಬಂದಿ

ಕಂಟ್ರೋಲ್ ರೂಂ ನಿರ್ವಹಣೆಗೆ ಸಿಬ್ಬಂದಿಗಳಿಗೆ ಸೂಕ್ತ ತರಬೇತಿಯನ್ನೂ ನೀಡಲಾಗಿದೆ. ಯಾವುದೇ ಸಮಸ್ಯೆಯಲ್ಲಿದ್ದಾಗ 100 ಸಂಖ್ಯೆಗೆ ಕರೆ ಮಾಡಿ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಕೇಳಿಕೊಂಡಿದ್ದಾರೆ.

ಎಲ್ಲದಕ್ಕೂ ಒಂದೇ ಸಂಖ್ಯೆ

ಹಲವು ಸಂಖ್ಯೆ ನೆನಪಿನಲ್ಲಿಟ್ಟುಕೊಳ್ಳುವ ಅಗತ್ಯವಿಲ್ಲ. ವನಿತಾ ಸಹಾಯವಾಣಿ, ಮಕ್ಕಳ ಸಹಾಯವಾಣಿ, ಹಿರಿಯರ ಸಹಾಯವಾಣಿ ಎಲ್ಲದಕ್ಕೂ 100 ಸಂಖ್ಯೆಗೆ ಕರೆ ಮಾಡಿದರೆ ಸಾಕು. ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ.

8,000 ಕರೆ ಸ್ವೀಕರಿಸುವ ಸಾಮರ್ಥ್ಯ

ಸದ್ಯ ದಿನವೊಂದಕ್ಕೆ ಬೆಂಗಳೂರು ಪೊಲೀಸರು 3,000 ಕರೆಗಳನ್ನು ಸ್ವೀಕರಿಸುತ್ತಿದ್ದಾರೆ. ಆದರೆ ದಿನಕ್ಕೆ 8,000 ಕರೆಗಳನ್ನು ಸ್ವೀಕರಿಸುವ ಸಾಮರ್ಥ್ಯವನ್ನು ಕಂಟ್ರೋಲ್ ರೂಂ ಹೊಂದಿದೆ.

Receiving 3000 calls a day but geared up to receive upto 8000 calls a day.

6 ಸೆಕೆಂಡುಗಳಲ್ಲಿ ಕರೆ ಸ್ವೀಕಾರ

ಕೇವಲ 15 ಸೆಕೆಂಡುಗಳಲ್ಲಿ ಕರೆ ಸ್ವೀಕರಿಸಲಾಗುವುದು ಎಂಬ ಭರವಸೆಯನ್ನು ಪೊಲೀಸರು ನೀಡಿದ್ದರು. ಆದರೆ ಕೇವಲ 6 ಸೆಕೆಂಡುಗಳಲ್ಲಿ ಈಗ ಕರೆ ಸ್ವೀಕರಿಸಲಾಗುತ್ತಿದೆ.

English summary
Chief minister Siddaramaiah inaugurated ‘Namma100’, a comprehensive citizen emergency service of Bengaluru police. In this Namma100 time for answering a call is 15 seconds and time for Hoysala to respond and reach the spot is 15 minutes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X