ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೀರಶೈವ-ಲಿಂಗಾಯತರ ಸಮಸ್ಯೆಗಳ ಇತ್ಯರ್ಥಕ್ಕೆ ಪ್ರಯತ್ನ: ಖಂಡ್ರೆ

|
Google Oneindia Kannada News

ಬೆಂಗಳೂರು, ಆಗಸ್ಟ್ 29: ರಾಜ್ಯದಲ್ಲಿ ಭುಗಿಲೆದ್ದಿರುವ ಲಿಂಗಾಯತ- ವೀರಶೈವ ನಡುವಿನ ಪ್ರತೇಕ ಧರ್ಮ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಪೌರಾಡಳಿತ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.

Recommended Video

Bengaluru : Akhila Bharata Veerashaiva Mahasabha crucial meeting today

ಎಲ್ಲರೂ ಒಂದಾಗಿ ಬಂದರೆ ಪ್ರತ್ಯೇಕ ಧರ್ಮದ ವಿಚಾರ ತೀರ್ಮಾನ : ಸಿದ್ದರಾಮಯ್ಯಎಲ್ಲರೂ ಒಂದಾಗಿ ಬಂದರೆ ಪ್ರತ್ಯೇಕ ಧರ್ಮದ ವಿಚಾರ ತೀರ್ಮಾನ : ಸಿದ್ದರಾಮಯ್ಯ

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಲಿಂಗಾಯತ -ವೀರಶೈವ ಧರ್ಮಗಳು ಒಂದೇ ಆಗಿದ್ದು, ಇಬ್ಬರೂ ಲಿಂಗ ಪೂಜೆ ಮಾಡುತ್ತಾರೆ. ಹೀಗಾಗಿ ಭೇದಭಾವ, ಭಿನ್ನಾಭಿಪ್ರಾಯ ಮರೆತು ಈ ಸಮಸ್ಯೆಯನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ" ಅವರು ಹೇಳಿದರು.

Resolve differences between Lingayats and Veerashaiva says minister Eshwar Khandre

ವೀರಶೈವ ಮಹಾಸಭಾ ಅಭಿಪ್ರಾಯವು ಲಿಂಗಾಯತ ಮತ್ತು ವೀರಶೈವ ಒಂದೇ ಆಗಿದೆ. ಇತ್ತೀಚೆಗೆ ಇವೆರಡರ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಾಗಿದ್ದು, ವೀರಶೈವ ಮತ್ತು ಲಿಂಗಾಯತರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಸಮಸ್ಯೆಯನ್ನು ಶಮನಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಪ್ರತೇಕ ಧರ್ಮಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿಗೆ ಬಂದಾಗ ಇಬ್ಬರೂ ಒಟ್ಟಾಗಿ ಬನ್ನಿ ಎಂದು ಅವರು ಸಲಹೆ ನೀಡಿದ್ದಾರೆ ಎಂದು ಹೇಳಿದರು.

English summary
Karnataka Municipal Administration Minister Eshwar Khandre says he will try to resolve differences of separate religion between Lingayats and Veerashaivas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X