ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್‌ಡಿಕೆ ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ಶಾಸಕರ ಖರೀದಿ ಪ್ರಕರಣ ತನಿಖೆಗೆ: ರಾಮಲಿಂಗಾ ರೆಡ್ಡಿ

By Manjunatha
|
Google Oneindia Kannada News

Recommended Video

ಎಚ್‌ಡಿಕೆ ಪ್ರಮಾಣವಚನ ಸ್ವೀಕರಿಸಿದ ಕೂಡಲೇ ಈ ಕೆಲಸ ಮಾಡಬೇಕು ಅಂದ್ರು ರಾಮಲಿಂಗಾ ರೆಡ್ಡಿ

ಬೆಂಗಳೂರು, ಮೇ 21: ಕುಮಾರಸ್ವಾಮಿ ಅವರು ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ಬಿಜೆಪಿಯವರು ಮಾಡಿದ್ದಾರೆ ಎನ್ನಲಾಗುತ್ತಿರುವ ಶಾಸಕರ ಖರೀದಿ ಯತ್ನ ಪ್ರಕರಣವನ್ನು ತನಿಖೆಗೆ ಒಳಪಡಿಸುವಂತೆ ಮನವಿ ಮಾಡುತ್ತೇವೆ ಎಂದು ಶಾಸಕ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಹಣದ ಆಮೀಷ ಒಡ್ಡಿ ಆಮಪರೇಷನ್ ಕಮಲಕ್ಕೆ ಮುಂದಾಗಿರುವುದು ಆಡಿಯೋ ಕ್ಲಿಪ್‌ಗಳಿಂದ ಗೊತ್ತಾಗಿದೆ, ಆದರೆ ನಕಲಿ ಎಂದು ಅವರು ಹೇಳುತ್ತಿದ್ದಾರೆ ಸತ್ಯಾ ಸತ್ಯತೆ ತನಿಖೆಯಿಂದ ಹೊರ ಬರಲಿ ಎಂದು ಅವರು ಹೇಳಿದರು.

ಯಡಿಯೂರಪ್ಪ ಕರೆ ಮಾಡಿ ಆಮಿಷ ಒಡ್ಡಿದ್ದು ನಿಜ: ಬಿಸಿ ಪಾಟೀಲ್ಯಡಿಯೂರಪ್ಪ ಕರೆ ಮಾಡಿ ಆಮಿಷ ಒಡ್ಡಿದ್ದು ನಿಜ: ಬಿಸಿ ಪಾಟೀಲ್

'2008 ರಿಂದ 2013 ರವರೆಗೆ ಅವರು ಏನು ಮಾಡಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಆಗ ಕೊಳ್ಳೆ ಹೊಡೆದ ದುಡ್ಡಲ್ಲಿ ಈಗ ಶಾಸಕರ ಖರೀದಿ ಮಾಡಲು ಮುಂದಾಗಿದ್ದಾರಾ?, ಅಥವಾ ದೆಹಲಿಯಿಂದ ಹಣ ಬರ್ತಾ ಇದೆಯಾ?' ಎಂದು‌ ಅವರು ಪ್ರಶ್ನಿಸಿದರು.

Request to investigate MLA purchase issue: Ramalinga Reddy

ಬಿಜೆಪಿಯನ್ನು 'ಕುದುರೆ ವ್ಯಾಪಾರ' ಖೆಡ್ಡಾಕ್ಕೆ ಕೆಡವಿದ ಕಾಂಗ್ರೆಸ್‌ ತಂತ್ರಬಿಜೆಪಿಯನ್ನು 'ಕುದುರೆ ವ್ಯಾಪಾರ' ಖೆಡ್ಡಾಕ್ಕೆ ಕೆಡವಿದ ಕಾಂಗ್ರೆಸ್‌ ತಂತ್ರ

ಕಾಂಗ್ರೆಸ್ ಜೆಡಿಎಸ್ ನಾಯಕರನ್ನು ನಿದ್ದೆ ಮಾಡಲು ಬಿಡುವುದಿಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ, ಭ್ರಷ್ಟಾಚಾರ ಆರೋಪದಲ್ಲಿ ಸಿಲುಕಿರುವ ಯಡಿಯೂರಪ್ಪ ಹಾಗೂ ರೆಡ್ಡಿ ಸಹೋದರರು ಮತ್ತೆ ಅಧಿಕಾರ ಸಿಕ್ಕು ಕೊಳ್ಳೆಹೊಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ, ಆ ಅವಕಾಶ ತಪ್ಪಿದೆ ಹಾಗಾಗಿ ಅವರಿಗೆ ನಿದ್ದೆ ಬರುತ್ತಿಲ್ಲ" ಎಂದು ಬಿಜೆಪಿ ನಾಯಕರನ್ನು ಟೀಕಿಸಿದರು.

English summary
Congress MLA Ramalinga Reddy said 'i will write letter to Kumaraswamy after he take oath as Cm to investigate MLA purchase issue of BJP leaders'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X