ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಗಣರಾಜ್ಯೋತ್ಸವಕ್ಕೆ ಸಿದ್ಧತೆ, ಹೆಚ್ಚಿನ ಭದ್ರತೆ

By Ananthanag
|
Google Oneindia Kannada News

ಬೆಂಗಳೂರು, ಜನವರಿ 24: ನಗರದಲ್ಲಿ ಇದೇ 26ರಂದು ನಡೆಯಲಿದರುವ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಮೈದಾನದಲ್ಲಿ ಸೂಕ್ತ ಸಿದ್ದತೆ ಮಾಡಲಾಗಿದ್ದು ಜೊತೆಗೆ ನಗರದೆಲ್ಲೆಡೆ ಸೂಕ್ತ ಭದ್ರತೆಗೂ ಕ್ರಮ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ತಿಳಿಸಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ರೌಡಿಗಳ ವಿರುದ್ಧ ಕಠೀಣ ಕ್ರಮ ಕೈಗೊಳ್ಳಲಾಗಿದ್ದು, ಭೀತ್ತಿ ಪತ್ರ, ಸಿಗರೇಟು, ಬಣ್ಣದ ದ್ರಾವಣ, ಬೆಂಕಿಪೊಟ್ಟಣ, ಸಂಚಾರಿ ದೂರವಾಣಿ ಗಳನ್ನು ಪೆರೇಡ್ ಮೈದಾನದಲ್ಲಿ ನಿರ್ಬಂಧಿಸಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು. ಅಲ್ಲದೆ ಭದ್ರತೆಗಾಗಿ 152 ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮಾಣಿಕ್ ಷಾ ಪರೇಡ್ ಒಂದರಲ್ಲೇ 58 ಸಿಸಿಟಿವಿ ಹಾಕಲಾಗಿದೆ ಎಂದು ತಿಳಿಸಿದರು.[2017ರ ಗಣರಾಜ್ಯೋತ್ಸವ ಪರೇಡ್ ನಲ್ಲಿ ಕರ್ನಾಟಕದ ಜನಪದ ಹೆಜ್ಜೆ]

Republic day: observance of the security of the Republic in bengaluru

ಭದ್ರತೆಗಾಗಿ ಕೆಎಸ್ ಆರ್ ಪಿ ತುಕಡಿ ಸೇರಿದಂತೆ 9472 ಪೊಲೀಸರು, 30 ಕೆಎಸ್ ಪಿ, 10 ಸಿಎಆರ್, ಗರುಡ ಪಡೆ ಮತ್ತು 9 ಡಿಸಿಪಿ, 48 ಇನ್ಸ್ ಪೆಕ್ಟರ್ ಗಳನ್ನು ನಿಯೋಜಿಸಲಾಗಿದೆ. ಪೆರೇಡ್ ಮೈದಾನದ ಸುತ್ತ ಮುತ್ತ ಸಂಚಾರಕ್ಕಾಗಿ ನಿಷೇಧ ಹೇರಿದ್ದು, ಕೆಲವು ಮಾರ್ಪಾಡುಗಳನ್ನು ಮಾಡಲಾಗಿದೆ. ವಾಹನ ನಿಲುಗಡೆಗೂ ವ್ಯವಸ್ಥೆ ಮಾಡಲಾಗಿದೆ ಎಂದರು.[188 ಕೈದಿಗಳನ್ನು ಗಣರಾಜ್ಯೋತ್ಸವ ದಿನದಂದು ಬಿಡುಗಡೆಗೆ ನಿರ್ಧಾರ]

ಗಣರಾಜ್ಯೋತ್ಸವದ ಅಂಗವಾಗಿ ಪೆರೇಡ್ ಮೈದಾನದಲ್ಲಿ 26ರಂದು ಬೆಳಗ್ಗೆ 8.58ಕ್ಕೆ ಸರಿಯಾಗಿ ರಾಜ್ಯಪಾಲರು ಮೈದಾನಕ್ಕೆ ಆಗಮಿಸಲಿದ್ದು, 9ಗಂಟೆಗೆ ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದಾರೆ, ಈ ವೇಳೆ ಪುಷ್ಪವೃಷ್ಟಿಮಾಡಲು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಾಗಿದೆ. ಧ್ವಜಾರೋಹಣದ ನಂತರ ರಾಜ್ಯಪಾಲರು ಪರೇಡ್ ವೀಕ್ಷಿಸಿ ಗೌರವ ರಕ್ಷೆ ಸ್ವೀಕರಿಸಿ ಜನತೆಗೆ ಗಣರಾಜ್ಯೋತ್ಸವದ ಸಂದೇಶ ನೀಡಲಿದ್ದಾರೆ ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದರು.

ಈ ಬಾರಿ ಗಣರಾಜ್ಯೋತ್ಸವದಕ್ಕೆ ಪುದುಚೆರಿಯ ಕಂಟೀ ಜಂಬ್ ಕವಾಯತು ತಂಡ ಪಾಲ್ಗೊಳ್ಳಲಿದೆ. ಅದೇ ರೀತಿ ಕವಾಯತು ತಂಡ ಪುದುಚೇರಿಯಲ್ಲಿ ಪಾಲ್ಗೊಳ್ಳಲಿದೆ. ಪಥ ಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು, ತಾಲೀಮು ನಡೆಯಲಿದೆ. ಪೊಲೀಸ್, ಸ್ಕೌಟ್ಸ್ ಅಂಡ್ ಗೈಡ್ಸ್ ಸೇರಿದಂತೆ 68 ತುಕಡಿಗಳಲ್ಲಿ ಸುಮಾರು 2100 ಮಂದಿ ಭಾಗವಹಿಸಲಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಸಾಂಕೇತಿಕವಾಗಿ ಜೀವರಕ್ಷಕ ಪ್ರಶಸ್ತಿ ವಿತರಣೆ ಕಾರ್ಯಕ್ರಮವಿರುತ್ತದೆ ಎಂದು ತಿಳಿಸಿದರು.

English summary
The Republic day celebration on 26th January in bengaluru. Police are preparing to celebrate and observance of the security of the Republic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X