ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಸ್ತೆ ಗುಂಡಿ ಕಂಡರೆ ಆನ್ಲೈನ್ ನಲ್ಲಿ ಬಿಬಿಎಂಪಿಗೆ ದೂರು ನೀಡಿ

By Mahesh
|
Google Oneindia Kannada News

ಬೆಂಗಳೂರು, ಜೂನ್ 17: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಅತಿ ದೊಡ್ಡ ಸಮಸ್ಯೆಗಳಲ್ಲಿ ಒಂದೆನಿಸಿರುವ ರಸ್ತೆಗುಂಡಿಗೆ ಪರಿಹಾರ ಕಂಡುಕೊಳ್ಳಲು, ಸಮ್ಮಿಶ್ರ ಸರ್ಕಾರ ಶ್ರಮಿಸುತ್ತಿದೆ. ಜನರ ದೂರುಗಳನ್ನು ಸ್ವೀಕರಿಸಲು ಮೊಬೈಲ್ ಅಪ್ಲಿಕೇಶನ್. ಆನ್ ಲೈನ್ ವೇದಿಕೆ ಒದಗಿಸುತ್ತಿದೆ. ಬಿಬಿಎಂಪಿಯ ಸಹಾಯ ಅಪ್ಲಿಕೇಷನ್ ಮೂಲಕ ಸುಲಭವಾಗಿ ದೂರು ನೀಡಬಹುದು.

ಬಿಬಿಎಂಪಿಯ 20 ಇಲಾಖೆಗಳಿಗೆ ಸಂಬಂಧಿಸಿದ ದೂರುಗಳನ್ನು ಮೊಬೈಲ್ ಮೂಲಕವೇ ನೀಡಬಹುದಾಗಿದೆ.ದೂರಿಗೆ ಸಂಬಂಧಪಟ್ಟಂತೆ ತೆಗೆದುಕೊಂಡ ಕ್ರಮಗಳ ವಿವರ ನಿಮ್ಮ ಮೊಬೈಲ್‌ಗೆ ಸಂದೇಶ ರೂಪದಲ್ಲಿ ಬರುತ್ತದೆ

ಸಕಲ ಸಮಸ್ಯೆಗಳ ಪರಿಹಾರಕ್ಕೆ ಬಳಸಿ ಬಿಬಿಎಂಪಿ ಆಪ್ ಸಕಲ ಸಮಸ್ಯೆಗಳ ಪರಿಹಾರಕ್ಕೆ ಬಳಸಿ ಬಿಬಿಎಂಪಿ ಆಪ್

ಅಪ್ಲಿಕೇಶನ್ ಮೂಲಕ ಬರುವ ದೂರುಗಳನ್ನು ನಿರ್ವಹಣೆ ಮಾಡಲು 24 ಗಂಟೆಗಳ ಕಾಲವೂ ಕಾರ್ಯನಿರ್ವಹಣೆ ಮಾಡುವ ಸಹಾಯವಾಣಿ ಕಾರ್ಯ ನಿರ್ವಹಿಸುತ್ತಿದೆ.

ಜನರು ನೀಡಿರುವ ದೂರಿನ ವಿರುದ್ಧ ಕೈಗೊಂಡಿರುವ ಕ್ರಮಗಳ ಬಗ್ಗೆ ಎಸ್‌ಎಂಎಸ್ ಮೂಲಕ ಮಾಹಿತಿ ದೊರೆಯಲಿದೆ. ದೂರು ಬಗೆಹರಿಸಿದ ಬಗ್ಗೆ ಅಸಮಾಧಾನವಿದ್ದಲ್ಲಿ ಮರು ದೂರು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಜನರು ನೀಡಿರುವ ದೂರುಗಳನ್ನು ಅಧಿಕಾರಿಗಳಿಗೆ ಮತ್ತು ಕ್ಷೇತ್ರದ ಪಾಲಿಕೆ ಸದಸ್ಯರಿಗೆ ಎಸ್​ಎಂಎಸ್ ಮೂಲಕ ತಿಳಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.

20 ಇಲಾಖೆಗಳ ಬಗ್ಗೆ ದೂರು

20 ಇಲಾಖೆಗಳ ಬಗ್ಗೆ ದೂರು

ಬಿಬಿಎಂಪಿ ಸಹಾಯ ಮೊಬೈಲ್ ಅಪ್ಲಿಕೇಶನ್ ಮೂಲಕ ಮೂಲಸೌಕರ್ಯ, ರಸ್ತೆ, ತ್ಯಾಜ್ಯ ನಿರ್ವಹಣೆ, ಕಟ್ಟಡ ಯೋಜನೆ, ಆಸ್ತಿ ತೆರಿಗೆ, ಆರೋಗ್ಯ, ಪರಿಸರ, ಮರಗಳ ಕಟಾವು ಮತ್ತು ಅರಣ್ಯ ಇಲಾಖೆ ಸೇರಿದಂತೆ 20 ಇಲಾಖೆಗಳ ಬಗ್ಗೆ ದೂರುಗಳನ್ನು ಸಲ್ಲಿಸಬಹುದಾಗಿದೆ.

ಬಿಬಿಎಂಪಿ ಸಹಾಯ ಅಪ್ಲಿಕೇಶನ್

ಬಿಬಿಎಂಪಿ ಸಹಾಯ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ ಮತ್ತು ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು http://bbmp.gov.in ಅಥವ ಗೂಗಲ್ ಪ್ಲೇ ಸ್ಟೋರ್‌ಗೆ ಭೇಟಿ ನೀಡಿ.

ಮಹೇಶ್ವರ್ ರಾವ್ ಅವರ ಟ್ವೀಟ್ ಗೆ ಪ್ರತಿಕ್ರಿಯೆ

ಸುಮನಹಳ್ಳಿ, ಹೊರ ರಿಂಗ್ ರಸ್ತೆ ಫ್ಲೈ ಓವರ್ ನಲ್ಲಿ ರಸ್ತೆ ಸರಿಪಡಿಸಿ ಎಂದು ಮಹೇಶ್ವರ್ ರಾವ್ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದಾರೆ.

ಮಾನ್ಯರೆ, ನಿಮ್ಮ ದೂರನ್ನು ದಾಖಲಿಸಲಾಗಿದೆ

ಮಾನ್ಯರೆ, ನಿಮ್ಮ ದೂರನ್ನು ದಾಖಲಿಸಲಾಗಿದೆ ಎಂದು ತಕ್ಷಣವೇ ಪ್ರತಿಕ್ರಿಯಿಸಿದ್ದ ಬಿಬಿಎಂಪಿ ಆಯುಕ್ತರಾದ ಮಹೇಶ್ವರ್ ರಾವ್.

ಹೆಬ್ಬಾಳ ಮೇಲ್ಸೇತುವೆ ರಿಪೇರಿ

ಹೆಬ್ಬಾಳ ಮೇಲ್ಸೇತುವೆ ರಿಪೇರಿ ಮಾಡುವ ಕಾರ್ಯದ ಚಿತ್ರಗಳು

English summary
Deputy chief minister and Bengaluru development minister G. Parameshwar has requested Bengalureans to report a pothole in he city and get it fixed Maheshwar Rao, BBMP commissioner has tweeted in series about how the work is under progress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X