ನಮ್ಮ ಮೆಟ್ರೋ ನಿಲ್ದಾಣದಲ್ಲಿ ಸಿಗುತ್ತೆ ಬಾಡಿಗೆ ಬೈಕ್

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 23 : ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಬೈಕ್‌ಗಳು ಬಾಡಿಗೆಗೆ ಸಿಗಲಿವೆ. ಮೇ ತಿಂಗಳಿನಲ್ಲಿ ಮೆಟ್ರೋ ನಿಲ್ದಾಣದಲ್ಲಿ ಬಾಡಿಗೆ ಬೈಕ್ ಸೇವೆ ಆರಂಭವಾಗಲಿದೆ. ಒಂದು ಮೆಟ್ರೋ ನಿಲ್ದಾಣದಲ್ಲಿ 30 ಬೈಕ್‌ಗಳನ್ನು ನಿಲ್ಲಿಸಲು ಬಿಎಂಆರ್‌ಸಿಎಲ್ ಜಾಗ ನೀಡಲಿದೆ.

ನಮ್ಮ ಮೆಟ್ರೋ ನಿಲ್ದಾಣದಲ್ಲಿ ಬಾಡಿಗೆ ಬೈಕ್ ಸೇವೆ ಆರಂಭಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಟೆಂಡರ್ ಕರೆದಿತ್ತು. ಈಗ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸೇವೆ ಆರಂಭಿಸಲು ಸಿದ್ಧತೆ ನಡೆದಿದೆ. [ಮತ್ತೆ ರಸ್ತೆಗೆ ಬರಲಿದೆ ಬೈಕ್ ಟ್ಯಾಕ್ಸಿ]

bike

ಬೈಯಪ್ಪನಹಳ್ಳಿ, ಇಂದಿರಾನಗರ, ಟ್ರಿನಿಟಿ ವೃತ್ತ, ಸಂಪಿಗೆ ರಸ್ತೆ, ಪೀಣ್ಯ, ನಾಯಂಡಹಳ್ಳಿ ಜಂಕ್ಷನ್, ರಾಜಾಜಿನಗರ, ವಿಜಯನಗರ ನಿಲ್ದಾಣಗಳಲ್ಲಿ ಬೈಕ್ ಬಾಡಿಗೆಗೆ ಸಿಗಲಿದೆ. ಮೂರು ವರ್ಷಗಳ ಅವಧಿಗೆ ಟೆಂಡರ್ ನೀಡಲಾಗಿದ್ದು, ಟೆಂಡರ್ ಪಡೆದಿರುವ ಸಂಸ್ಥೆ ಮಾಸಿಕ 80 ಸಾವಿರದಿಂದ 1 ಲಕ್ಷ ರೂ. ವರೆಗೆ ಹಣ ಪಾವತಿ ಮಾಡಬೇಕಿದೆ. [ವೀನು ಪಾಲಿವಾಲ್, ಜನಪ್ರಿಯ ಮಹಿಳಾ ಬೈಕರ್ ಇನ್ನಿಲ್ಲ]

ಐಷಾರಾಮಿ ಬೈಕ್‌ಗಳು ಲಭ್ಯ : ಮೇ ಮೊದಲ ವಾರದಲ್ಲಿ 5 ನಿಲ್ದಾಣದಲ್ಲಿ ಬಾಡಿಗೆ ಬೈಕ್ ಸೇವೆ ಆರಂಭವಾಗಲಿದೆ. ಮೆಟ್ರೋ ನಿಲ್ದಾಣಕ್ಕೆ ಬರುವ ಪ್ರಯಾಣಿಕರು, ಸುತ್ತಮುತ್ತಲ ಪ್ರದೇಶಕ್ಕೆ ತೆರಳಲು ಬೈಕ್ ಬಳಸಬಹುದು. ಪುನಃ ಮೆಟ್ರೋ ನಿಲ್ದಾಣಕ್ಕೆ ಆಗಮಿಸಿ ಬೈಕ್ ನೀಡಿ, ರೈಲಿನಲ್ಲಿ ತೆರಳಬಹುದು. [ಬೆಂಗಳೂರಿನಲ್ಲಿ 1000 ಕ್ಕೂ ಅಧಿಕ ಹಾರ್ಲೆ ಡೇವಿಡ್ಸನ್ ಮಿಂಚು!]

ಹೊಂಡಾ ಆಕ್ವಿವಾದಿಂದ ಹಿಡಿದು ಎಲ್ಲಾ ಮಾದರಿಯ ಬೈಕ್‌ಗಳನ್ನು ಬಾಡಿಗೆಗೆ ನೀಡಲಾಗುತ್ತದೆ. ಹಾರ್ಲೆ ಡೆವಿಡ್‌ಸನ್‌ನಂತಹ ಐಷಾರಾಮಿ ಬೈಕ್‌ಗಳನ್ನು ಸಹ ಬಾಡಿಗೆಗೆ ನೀಡಲಾಗುತ್ತದೆ. ಬೈಕ್ ಬಾಡಿಗೆ ಪಡೆಯಲು ಪ್ರಯಾಣಿಕರು ವಿಳಾಸ ಮತ್ತು ಭಾವಚಿತ್ರವಿರುವ ಗುರುತಿನ ಚೀಟಿ ಸಲ್ಲಿಸಬೇಕು. ಹೆಲ್ಮೆಟ್‌ಗಳನ್ನು ಅವರೇ ಒದಗಿಸುತ್ತಾರೆ. [ಬೈಯಪ್ಪನಹಳ್ಳಿಯಿಂದ-ನಾಯಂಡಹಳ್ಳಿಗೆ 35 ನಿಮಿಷದ ಪ್ರಯಾಣ]

ಗಂಟೆಗೆ 20 ರೂ. ಬಾಡಿಗೆ : ಸಾಮಾನ್ಯ ಬೈಕ್‌ಗಳಿಗೆ ಪ್ರತಿ ಗಂಟೆಗೆ 20 ರೂ. ಬಾಡಿಗೆ ಪಾವತಿ ಮಾಡಬೇಕು. 3 ಕಿ.ಮೀ.ಗಿಂತ ದೂರ ಸಂಚಾರ ಮಾಡಿದರೆ ಪ್ರತಿ ಕಿ.ಮೀಗೆ 3 ರೂ. ದರ ಪಾವತಿ ಮಾಡಬೇಕು. ಐಷಾರಾಮಿ ಬೈಕ್‌ಗಳಿಗೆ ದಿನಕ್ಕೆ 1 ರಿಂದ 3 ಸಾವಿರ ರೂ.ದರ ನಿಗದಿ ಮಾಡಲಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Soon you can get rent a bike facility at Namma metro station Bengaluru. BMRCL will introduce this concept at 5 stations. It will be extended to more stations if the response is good.
Please Wait while comments are loading...