ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನವೀಕರಣಗೊಂಡ ಬೆಂಗಳೂರು ಟೌನ್‌ಹಾಲ್ ಹೇಗಿದೆ?

|
Google Oneindia Kannada News

ಬೆಂಗಳೂರು, ಏ. 9 : ನವೀಕರಣಗೊಂಡ ಬೆಂಗಳೂರಿನ ಟೌನ್‌ಹಾಲ್‌ ಬುಧವಾರ ಉದ್ಘಾಟನೆಗೊಂಡಿದೆ. ನೂತನ ವೇದಿಕೆ, ಹವಾನಿಯಂತ್ರಿತ ವ್ಯವಸ್ಥೆ, ವಿದ್ಯುತ್‌ ಮತ್ತು ಬೆಳಕಿನ ವ್ಯವಸ್ಥೆ, ಅತ್ಯಾಧುನಿಕ ಆಸನ ಮುಂತಾದ ವ್ಯವಸ್ಥೆಗಳನ್ನು ಹೊಸದಾಗಿ ಆಳವಡಿಸಲಾಗಿದೆ.

ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಅನಂತ್ ಕುಮಾರ್, ಬೆಂಗಳೂರು ನಗರ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ, ಬಿಬಿಎಂಪಿ ಮೇಯರ್ ಎನ್.ಶಾಂತಕುಮಾರಿ ಸೇರಿದಂತೆ ಹಲವು ನಾಯಕರು ಬುಧವಾರ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಟೌನ್‌ಹಾಲ್ ನವೀಕರಣ ಕಾಮಗಾರಿಯನ್ನು ಕೇಂದ್ರ ಸರ್ಕಾರಿ ಸ್ವಾಮ್ಯದ ಬ್ರಾಡ್‌ಕಾಸ್ಟ್‌ ಇಂಜಿನಿಯರಿಂಗ್‌ ಕನ್ಸಲ್ಟೆಂಟ್‌ ಇಂಡಿಯಾ ಲಿ. ತಯಾರಿಸಿದ್ದ ವಿಸ್ತ್ರತ ಯೋಜನಾ ವರದಿ ಆಧಾರದ ಮೇಲೆ ಮಾಡಲಾಗಿದ್ದು, 5 ಕೋಟಿ ರೂ. ವೆಚ್ಚ ಮಾಡಲಾಗಿದೆ. ಗುತ್ತಿಗೆ ನೀಡಿದ್ದ ಸಂಸ್ಥೆಯೇ ಐದು ವರ್ಷಗಳ ಕಾಲ ಉಚಿತವಾಗಿ ನಿರ್ವಹಣೆ ಮಾಡಲಿದೆ. [ಮೂರು ತಿಂಗಳ ಕಾಲ ಬೆಂಗಳೂರಿನ ಟೌನ್ ಹಾಲ್ ಬಂದ್]

ನವೀಕರಣಗೊಂಡ ಟೌನ್‌ಹಾಲ್‌ನಲ್ಲಿ ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ಪ್ಲಾಸ್ಟಿಕ್ ನಿಷೇಧಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಬಿಬಿಎಂಪಿ ಮೇಯರ್ ಎನ್.ಶಾಂತಕುಮಾರಿ ಹೇಳಿದ್ದಾರೆ. ಮತ್ತಷ್ಟು ಆಧುನಿಕ ಸೌಲಭ್ಯಗಳನ್ನು ಕಲ್ಪಿಸಲು ಎರಡನೇ ಹಂತದ ನವೀಕರಣ ಕಾರ್ಯವನ್ನು ಕೈಗೊಳ್ಳುವ ಪ್ರಸ್ತಾಪವೂ ಇದೆ ಎಂದು ಮೇಯರ್ ತಿಳಿಸಿದ್ದಾರೆ.

ನವೀಕರಣಗೊಂಡ ಟೌನ್‌ಹಾಲ್ ಉದ್ಘಾಟನೆ

ನವೀಕರಣಗೊಂಡ ಟೌನ್‌ಹಾಲ್ ಉದ್ಘಾಟನೆ

2014ರ ಸೆಪ್ಟೆಂಬರ್‌ನಿಂದ ನವೀಕರಣ ಕಾರ್ಯಕ್ಕಾಗಿ ಬಂದ್ ಮಾಡಲಾಗಿದ್ದ ಬೆಂಗಳೂರಿನ ಟೌನ್‌ಹಾಲ್‌ಅನ್ನು ಬುಧವಾರ ಉದ್ಘಾಟನೆ ಮಾಡಲಾಗಿದೆ. 5 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ವ್ಯವಸ್ಥೆಗಳನ್ನು ಟೌನ್‌ಹಾಲ್‌ನಲ್ಲಿ ಅಳವಡಿಸಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನವೀಕರಣ ಕಾಮಗಾರಿಯನ್ನು ಕೈಗೊಂಡಿತ್ತು.

ಯಾವ-ಯಾವ ಸೌಲಭ್ಯಗಳಿವೆ?

ಯಾವ-ಯಾವ ಸೌಲಭ್ಯಗಳಿವೆ?

ಧ್ವನಿ ವರ್ಧಕ, ಪಾಲ್ ಸೀಲಿಂಗ್, ವೇದಿಕೆ ನಿರ್ಮಾಣ, ಹವಾನಿಯಂತ್ರಣ ವ್ಯವಸ್ಥೆ, ಹೊಸ ಆಸನ ವ್ಯವಸ್ಥೆ, ನೂತನ ಶೌಚಾಲಯ ನಿರ್ಮಾಣ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ. ನವೀಕರಣದ ಗುತ್ತಿಗೆ ಪಡೆದಿದ್ದ ಸಂಸ್ಥೆಯೇ ಎಲ್ಲಾ ಸೌಲಭ್ಯಗಳ ನಿರ್ವಹಣೆಯನ್ನು ಐದು ವರ್ಷಗಳ ಅವಧಿಗೆ ಉಚಿತವಾಗಿ ಮಾಡಲಿದೆ.

5 ಕೋಟಿ ವೆಚ್ಚದಲ್ಲಿ ನವೀಕರಣ

5 ಕೋಟಿ ವೆಚ್ಚದಲ್ಲಿ ನವೀಕರಣ

ಟೌನ್‌ಹಾಲ್ ನವೀಕರಣ ಕಾಮಗಾರಿಯನ್ನು ಕೇಂದ್ರ ಸರ್ಕಾರಿ ಸ್ವಾಮ್ಯದ ಬ್ರಾಡ್‌ಕಾಸ್ಟ್‌ ಇಂಜಿನಿಯರಿಂಗ್‌ ಕನ್ಸಲ್ಟೆಂಟ್‌ ಇಂಡಿಯಾ ಲಿ. ತಯಾರಿಸಿದ್ದ ವಿಸ್ತ್ರತ ಯೋಜನಾ ವರದಿ ಆಧಾರದ ಮೇಲೆ ಮಾಡಲಾಗಿದ್ದು, 5 ಕೋಟಿ ರೂ. ವೆಚ್ಚ ಮಾಡಲಾಗಿದೆ. 6 ಕೋಟಿ ವೆಚ್ಚದಲ್ಲಿ ಎರಡನೇ ಹಂತದ ಆಧುನೀಕರಣ ಕಾಮಗಾರಿಯನ್ನು ನಡೆಸುವ ಉದ್ದೇಶವನ್ನು ಬಿಬಿಎಂಪಿ ಹೊಂದಿದೆ.

ಟೌನ್‌ಹಾಲ್‌ನಲ್ಲಿ ಪ್ಲಾಸ್ಟಿಕ್ ನಿಷೇಧ

ಟೌನ್‌ಹಾಲ್‌ನಲ್ಲಿ ಪ್ಲಾಸ್ಟಿಕ್ ನಿಷೇಧ

ನವೀಕರಣಗೊಂಡ ಟೌನ್‌ಹಾಲ್‌ನಲ್ಲಿ ಕುಷನ್ ಆಸನಗಳನ್ನು ನಿರ್ಮಿಸಲಾಗಿದ್ದು, ಕಿಡಿಗೇಡಿಗಳನ್ನು ಅದಕ್ಕೆ ಹಾನಿ ಮಾಡಬಾರದು ಎಂದು ಮೇಯರ್ ಎನ್.ಶಾಂತಕುಮಾರಿ ಮನವಿ ಮಾಡಿದ್ದಾರೆ. ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ಟೌನ್‌ಹಾಲ್‌ವೊಳಗೆ ಪ್ಲಾಸ್ಟಿಕ್ ನಿಷೇಧಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಮೇಯರ್ ಹೇಳಿದ್ದಾರೆ.

ಪುಟ್ಟಣ್ಣ ಚೆಟ್ಟಿ ಪ್ರತಿಮೆ ಸ್ಥಾಪನೆ

ಪುಟ್ಟಣ್ಣ ಚೆಟ್ಟಿ ಪ್ರತಿಮೆ ಸ್ಥಾಪನೆ

ಟೌನ್‌ಹಾಲ್ ಮುಂಭಾಗದಲ್ಲಿ ಪುಟ್ಟಣ್ಣ ಚೆಟ್ಟಿ ಅವರ ಪ್ರತಿಮೆ ಸ್ಥಾಪನೆ ಮಾಡುವ ಉದ್ದೇಶವಿದೆ. ಈ ಬಗ್ಗೆ ಶೀಘ್ರದಲ್ಲೇ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಬೆಂಗಳೂರು ನಗರ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಬೆಂಗಳೂರು ನಗರಸಭೆ ಅಧ್ಯಕ್ಷರಾಗಿದ್ದ ಪುಟ್ಟಣ್ಣ ಚೆಟ್ಟಿ ಅವರ ಹೆಸರಿನಲ್ಲಿ ನಿರ್ಮಿಸಿದ ಸರ್.ಪುಟ್ಟಣ್ಣ ಚೆಟ್ಟಿ ಪುರಭವನ ಟೌನ್‌ ಎಂದು ಪ್ರಸಿದ್ಧಿ ಪಡೆದಿದೆ.

ಬಾಡಿಗೆ ದರ ಶೀಘ್ರದಲ್ಲೇ ಹೆಚ್ಚಳ?

ಬಾಡಿಗೆ ದರ ಶೀಘ್ರದಲ್ಲೇ ಹೆಚ್ಚಳ?

ನವೀಕರಣಗೊಂಡ ಟೌನ್‌ಹಾಲ್‌ನ ದಿನದ ಬಾಡಿಗೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಮೊದಲು 10 ಸಾವಿರ ರೂ. ಬಾಡಿಗೆ ಪಡೆಯಲಾಗುತ್ತಿತ್ತು. ಈಗ ಹೊಸ ವ್ಯವಸ್ಥೆ ಅಳವಡಿಸಿರುವುದರಿಂದ ಬಾಡಿಗೆ ಹೆಚ್ಚಾಗಲಿದೆ. ಈ ಕುರಿತು ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಒಪ್ಪಿಗೆ ಪಡೆಯಬೇಕಾಗಿದೆ.

English summary
Renovated Bengaluru Town Hall building inaugurated on 8th April 2015. Bruhat Bangalore Mahanagara Palike (BBMP) renovated building spending 5 core.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X