ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮ್ಯೂಸಿಕ್ ಜತೆ ಓಟ, ಇದು ಫಾಸ್ಟ್ ಟ್ರ್ಯಾಕ್ ಅಲ್ಟಿಮೇಟ್ 5K

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 29: ಭಾರತದಲ್ಲಿ 'ಮ್ಯೂಸಿಕ್ ರನ್' ಪ್ರವರ್ತಕ ಮತ್ತು ಮುಂಚೂಣಿ ಸ್ಫೋರ್ಟ್ಸ್ ಮಾರುಕಟ್ಟೆ ಮತ್ತು ಬ್ರ್ಯಾಂಡ್ ಲೈಸೆನ್ಸಿಂಗ್ ಸಂಸ್ಥೆ ಬೇಸ್ ಲೈನ್ ವೆಂಚರ್ಸ್, ಬೆಂಗಳೂರಿನಲ್ಲಿ ಸೆ. 10, 2016 ರಂದು ಮ್ಯೂಸಿಕ್ ರನ್ ನಡೆಸುತ್ತಿದೆ. ಈ ವಿಶಿಷ್ಟ ಕಾರ್ಯಕ್ರಮದ ಮೊದಲ ಆವೃತ್ತಿಯ ಟೈಟಲ್ ಪ್ರಾಯೋಜಕರಾಗಿ ಫಾಸ್ಟ್ ಟ್ರ್ಯಾಕ್ ಸಂಸ್ಥೆ ಆಯ್ಕೆಯಾಗಿದೆ.

ಜಾಗತಿಕವಾಗಿ ಬೃಹತ್ ಓಟದಲ್ಲಿ ಮ್ಯೂಸಿಕ್ ರನ್ ವೇಗಯುತವಾಗಿ ಬೆಳೆಯುತ್ತಿರುವ ಸ್ಪರ್ಧೆ 5 ಕಿ.ಮೀ ದೂರದ ಮ್ಯೂಸಿಕ್ ಮತ್ತು ಫಿಟ್‍ನೆಸ್ ರನ್, ಲಾಸ್ ಏಂಜಲಸ್ ನಿಂದ ಬ್ಯಾಂಕಾಕ್ ವರೆಗೆ, ಸಿಂಗಪುರದಿಂದ ಹಂಬರ್ಗ್ ವರೆಗೆ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿದೆ.

ಫಾಸ್ಟ್ ಟ್ರ್ಯಾಕ್ ಭಾರತದ ಯುವಕರ ಅಗತ್ಯ ವಸ್ತುಗಳ ಐಕಾನಿಕ್ ಬ್ರಾಂಡ್ ಆಗಿದ್ದು, ಯುವಕರು ಮ್ಯೂಸಿಕ್ ಮತ್ತು ಫಿಟ್ನೆಸ್ಸಕ್ರಿಯವಾಗಿರುವುದನ್ನು ಉತ್ತೇಜಿಸಲು ಫಾಸ್ಟ್ ಟ್ರ್ಯಾಕ್ ಮ್ಯೂಸಿಕ್ ರನ್ ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ಈ ಆಂದೋಲನದ ಮೂಲಕ ಫಾಸ್ಟ್ ಟ್ರ್ಯಾಕ್ ಯುವಕರನ್ನು ತನ್ನತ್ತ ಸೆಳೆಯುವ ಗುರಿ ಹೊಂದಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಟೈಟಾನ್ ಕಂಪನಿ ಲಿಮಿಟೆಡ್ ನ ಕೈಗಡಿಯಾರ ಮತ್ತು ಸಂಬಂದ ಸಾಮಾಗ್ರಿಗಳ ವಿಭಾಗದ ಸಿಇಒ ಎಸ್.ರವಿಕಾಂತ್, ಫಾಸ್ಟ್ ಟ್ರ್ಯಾಕ್ ಉತ್ಸಾಹಿ ಬ್ರಾಂಡ್. ಇದು ಎಲ್ಲ ಚೌಕಟ್ಟುಗಳನ್ನು ಮೀರಿ ಯುವಕರ ಧ್ವನಿಯನ್ನು ಹುಟ್ಟುಹಾಕುತ್ತದೆ ಎಂದರು. ಓಟಗಾರರು ಬೆಂಗಳೂರು ಕಾರ್ಯಕ್ರಮ ಪುಟ www.themusicrun.com/events/bengaluru ದಲ್ಲಿ ವೋಟ್ ಮಾಡಬಹುದು.

5 ಕಿ.ಮೀ ರನ್ನಿಂಗ್ ಕೋರ್ಸ್ ನ ಅನುಭವ

5 ಕಿ.ಮೀ ರನ್ನಿಂಗ್ ಕೋರ್ಸ್ ನ ಅನುಭವ

ಓಟಕ್ಕಿಂತ ಒಂದು ಬಗೆಯ ಪಾರ್ಟಿಯಂತಿರುವ ಈ ಕಾರ್ಯಕ್ರಮದಲ್ಲಿ ಓಟಗಾರರು ವಿಶ್ವದ ಲೌಡೆಸ್ಟ್ 5 ಕಿ.ಮೀ ರನ್ನಿಂಗ್ ಕೋರ್ಸ್ ನ ಅನುಭವ ಪಡೆಯಲಿದ್ದಾರೆ. 5 ಭಿನ್ನ ವಿಭಾಗಗಳಲ್ಲಿ ಸ್ಪರ್ಧೆಗಳು ಆಯ್ಕೆ ಮಾಡಿದ ಅತ್ಯಂತ ಜನಪ್ರಿಯ ಗೀತೆಗಳನ್ನು 120ಕ್ಕೂ ಹೆಚ್ಚು ಸ್ಪೀಕರ್ ಗಳಲ್ಲಿ ಅಳವಡಿಸಲಾಗುವುದು.

ನೆಚ್ಚಿನ ಗೀತೆಗೆ ವೋಟ್ ಮಾಡಬಹುದು

ನೆಚ್ಚಿನ ಗೀತೆಗೆ ವೋಟ್ ಮಾಡಬಹುದು

ರಾಕ್, ಪಾಪ್, ಹಳೆಯ, ಹಿಪ್ ಪಾಪ್ ಮತ್ತು ಡ್ಯಾನ್ಸ್ ವಿಭಾಗದ ಹಾಡುಗಳನ್ನು ಸ್ಪರ್ಧಿಗಳು ಆಯ್ಕೆ ಮಾಡಬಹುದು. ಮ್ಯೂಸಿಕ್ ರನ್ ವಿಶ್ವದಲ್ಲಿನ ಏಕೈಕ ಕ್ರೌಡ್ ಸೋಸರ್ಡ್ ಓಟ. ಸ್ಪರ್ಧಿಗಳು ಓಟದ ಸೌಂಡ್ ಟ್ರಾಕ್ಸ್ ಮ್ಯೂಸಿಕ್ ವೋಟಿಂಗ್ ಆಪ್ ಬಳಸಿ ನಿಯಂತ್ರಣ ಮಾಡಬಹುದು. ಕಾರ್ಯಕ್ರಮದಲ್ಲಿ ಅವರು ತಮ್ಮ ನೆಚ್ಚಿನ ಗೀತೆಗೆ ವೋಟ್ ಮಾಡಬಹುದು ಮತ್ತು ಹೆಚ್ಚು ಮತ ಗಳಿಸಿದ ಗೀತೆ ಆಫಿಷಿಯಲ್ ರನ್ ಪ್ಲೇ ಲಿಸ್ಟ್ ಆಗುತ್ತದೆ.

ಬೆಂಗಳೂರಿನ ಕ್ಲಾರ್ಕ್ ಎಕ್ಸೊಟಿಕದಲ್ಲಿ

ಬೆಂಗಳೂರಿನ ಕ್ಲಾರ್ಕ್ ಎಕ್ಸೊಟಿಕದಲ್ಲಿ

ಓಟದ ಬಳಿಕ ವಿಶ್ವದರ್ಜೆಯ ಡಿಜೆಗಳು ಹಾಗೂ ಲೈವ್ ಬ್ಯಾಂಡ್ ಗಿಗ್ಸ್, ಡ್ಯಾನ್ಸರ್, ಲೇಸರ್ ಲೈಟ್ಸ್, ಚಿಲ್ ಔಟ್ ಜೋನ್, ಎಲ್‍ಇಡಿ ಸ್ಕ್ರೀನ್, ಪಟಾಕಿಗಳೊಂದಿಗೆ ಸಂಭ್ರಮಾಚರಣೆ ನಡೆಯಲಿದೆ. ಭಾರತದಲ್ಲಿ ಮೊದಲ ಕಾರ್ಯಕ್ರಮ ಬೆಂಗಳೂರಿನ ಕ್ಲಾರ್ಕ್ ಎಕ್ಸೊಟಿಕದಲ್ಲಿ ಸೆ.10, 2016ರಂದು ನಡೆಯಲಿದೆ.

1,00,000ಕ್ಕು ಅಧಿಕ ಮ್ಯೂಸಿಕ್ ಓಟಗಾರರು

1,00,000ಕ್ಕು ಅಧಿಕ ಮ್ಯೂಸಿಕ್ ಓಟಗಾರರು

ಜಾಗತಿಕ ಕಾರ್ಯಕ್ರಮ ಈಗಾಗಲೇ 25 ನಗರಗಳಲ್ಲಿದ್ದು, 1,00,000ಕ್ಕು ಅಧಿಕ ಮ್ಯೂಸಿಕ್ ಓಟಗಾರರು, 70ಕ್ಕೂ ಅಧಿಕ ಪ್ರಾಯೋಜಕರು ಮತ್ತು 30ಕ್ಕು ಅಧಿಕ ಕಲಾವಿದರ ಪ್ರದರ್ಶನ ಹೊಂದಿದೆ. ವಾರ್ಮಪ್ ಮತ್ತು ಜನಪ್ರಿಯ ಕಲಾವಿದರ ಪ್ರದರ್ಶನಗಳೊಂದಿಗೆ 5 ಕಿ.ಮೀ ಓಟಕ್ಕೆ ಚಾಲನೆ ದೊರೆಯಲಿದೆ.

ಫಾಸ್ಟ್ ಟ್ರ್ಯಾಕ್ ಕುರಿತು

ಫಾಸ್ಟ್ ಟ್ರ್ಯಾಕ್ ಕುರಿತು

1998ರಲ್ಲಿ ಬಿಡುಗಡೆಗೊಂಡ ಫಾಸ್ಟ್‍ಟ್ರ್ಯಾಕ್ 2005ರಲ್ಲಿ ನಗರ ಪ್ರದೇಶದ ಯುವಕರ ಸ್ವತಂತ್ರ್ಯ ಬ್ರ್ಯಾಂಡ್ ಆಯಿತು. ಅಲ್ಲಿಂದ ಕೈಗಡಿಯಾರ, ಕನ್ನಡಕಗಳು ಮತ್ತು ಇತರೆ ಉತ್ಪನ್ನಗಳೊಂದಿಗೆ ಬೆಳವಣಿಗೆ ಸಾಧಿಸುತ್ತಿದೆ. 2009ರಲ್ಲಿ ಅಗತ್ಯ ಉತ್ಪನ್ನಗಳ ವಲಯಕ್ಕೆ ಕಾಲಿಟ್ಟಿತು. ಬ್ಯಾಗ್, ಬೆಲ್ಟ್ ಮತ್ತು ಪರ್ಸ್‍ಗಳು ಇವತ್ತು ಅತ್ಯಂತ ಯಶಸ್ವಿ ಉತ್ಪನ್ನಗಳಾಗಿವೆ. 2013ರಲ್ಲಿ ಯುವಕ, ಯುವತಿಯರಿಗಾಗಿ ಹೆಲ್ಮೆಟ್ ಪರಿಚಯಿಸಿತು. ದೇಶದಾದ್ಯಂತ ರೀಟೇಲ್ ಹೊಂದಿದ್ದು, 79 ನಗರಗಳಲ್ಲಿ 158 ಮಳಿಗೆ ಹೊಂದಿದೆ. ಅಧಿಕೃತ ಮಲ್ಟಿಬ್ರ್ಯಾಂಡ್ ಔಟ್‍ಲೆಟ್ ಹಾಗೂ ಆನ್‍ಲೈನ್ ತಾಣ ಹೊಂದಿದೆ. ದೇಶದ ಯುವಕರ ಅತ್ಯಂತ ಪ್ರೀತಿಯ ಬ್ರ್ಯಾಂಡ್ ಎಂಬ ಹೆಗ್ಗಳಿಕೆ

ಬೇಸ್‍ಲೈನ್ ವೆಂಚರ್ಸ್ ಕುರಿತು

ಬೇಸ್‍ಲೈನ್ ವೆಂಚರ್ಸ್ ಕುರಿತು

ಇದೊಂದು ಕ್ರೀಡಾ ಮಾರ್ಕೆಟಿಂಗ್, ಮನರಂಜನೆ ಮತ್ತು ಪರವಾನಗಿ ಕಂಪನಿ. ಬ್ರಾಂಡ್ ಮತ್ತು ಪ್ರೇಕ್ಷಕರ ಸಂಪರ್ಕಕ್ಕೆ ನಾನಾ ವೇದಿಕೆ, ಪ್ರಾಯೋಜಕತ್ವದ ಮೂಲಕ ಪರಿಹಾರ ಒದಗಿಸುತ್ತದೆ. ಮುಂಬೈ, ಬೆಂಗಳೂರು, ದಿಲ್ಲಿ, ಸಿಂಗಪುರ ಮತ್ತು ಲಾಸ್ ಏಂಜಲಸ್‍ಗಳಲ್ಲಿ ಪ್ರಮುಖ ತಂಡವನ್ನು ಹೊಂದಿದೆ. ಭಾರತದಲ್ಲಿ ಮ್ಯೂಸಿಕ್ ರನ್ ಆಯೋಜನೆಗೆ ಬೇಸ್‍ಲೈನ್ ಪರವಾನಗಿ ಹೊಂದಿದೆ.

English summary
Register for The Music Run Ultimate 5K by Fasttrack. Register with your friends and run to the soundtrack selected by you, before partying at the ultimate after-run music festival
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X