ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಸೆಂಬರ್ 5ಕ್ಕೆ ಬಿಬಿಎಂಪಿ ಉಪಮೇಯರ್ ಉಪ ಚುನಾವಣೆ

|
Google Oneindia Kannada News

ಬೆಂಗಳೂರು, ನವೆಂಬರ್ 22: ಬಿಬಿಎಂಪಿ ಉಪ ಮೇಯರ್ ರಮೀಳಾ ಉಮಾಶಂಕರ್ ಅಕಾಲಿಕ ನಿಧನದಿಂದ ತೆರವಾದ ಉಪಮೇಯರ್ ಸ್ಥಾನಕ್ಕೆ ಡಿಸೆಂಬರ್ 5ರಂದು ಚುನಾವಣೆ ನಡೆಯಲಿದೆ.

ಚುನಾವಣಾಧಿಕಾರಿಗಳು ಗುರುವಾರ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಆಡಳಿತದ ನಾಲ್ಕನೇ ಮೇಯರ್ ಆಯ್ಕೆ ಚುನಾವಣೆ ಸಂದರ್ಭದಲ್ಲೇ ಉಪ ಮೇಯರ್ ಚುನಾವಣೆ ನಡೆದಿತ್ತು ಆದರೆ ಉಪಮೇಯರ್ ನಿಧನದಿಂದಾಗಿ ಆ ಸ್ಥಾನ ತೆರವಾಗಿದೆ.

ಡಿಸೆಂಬರ್‌ನಲ್ಲಿ ಬಿಬಿಎಂಪಿ ಉಪಮೇಯರ್ ಆಯ್ಕೆ, ರೇಸಿನಲ್ಲಿ ಯಾರ್ಯಾರು? ಡಿಸೆಂಬರ್‌ನಲ್ಲಿ ಬಿಬಿಎಂಪಿ ಉಪಮೇಯರ್ ಆಯ್ಕೆ, ರೇಸಿನಲ್ಲಿ ಯಾರ್ಯಾರು?

ಉಪ ಮೇಯರ್ ರಮೀಳಾ ಉಮಾಶಂಕರ್ ಹೃದಯಾಘಾತದಿಂದ ನಿಧನ ಹೊಂದಿದ್ದರು. ಅವರ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ. ಆಕಾಂಕ್ಷಿಗಳು ಯಾರ್ಯಾರಿದ್ದಾರೆ: ಉಪ ಮೇಯರ್ ಸ್ಥಾನಕ್ಕೆ ಜೆಡಿಎಸ್ ನಲ್ಲಿ ಆಕಾಂಕ್ಷಿಗಳ ನಡುವೆ ಭಾರಿ ಪೈಪೋಟಿ ನಡೆದಿದೆ. ಪಾಲಿಕೆ ಜೆಡಿಎಸ್ ನಾಯಕಿ ನೇತ್ರಾ ನಾರಾಯಣ್, ಸದಸ್ಯರಾದ ಇಮ್ರಾನ್ ಪಾಷಾ, ಭದ್ರೇಗೌಡ ಹಾಗೂ ರಾಜಶೇಖರ್ ತೀವ್ರ ಕಸರತ್ತು ನಡೆಸಿದ್ದಾರೆ.

Regional commissioner has announced by election for deputy mayor post on December 5

ಅದೇ ರೀತಿ 12 ಸ್ಥಾಯಿ ಸಮಿತಿಗಳ ಅಧ್ಯಕ್ಷ ಹುದ್ದೆಗಳು ಕಳೆದ ವರ್ಷದಂತೆಯೇ ಕಾಂಗ್ರೆಸ್, ಜೆಡಿಎಸ್ ಮತ್ತು ಪಕ್ಷೇತರ ನಡುವೆ ಹಂಚಿಕೆಯಾಗಲಿದೆ. ಮೇಯರ್ ಸ್ಥಾನ ಕಾಂಗ್ರೆಸ್ ಗೆ ನೀಡಿರುವುದರಿಂದ ಆರ್ಥಿಕ ಸ್ಥಾಯಿ ಸಮಿತಿ ಮತ್ತೆ ಜೆಡಿಎಸ್ ಪಾಲಾಗುವ ಸಾಧ್ಯತೆ ಇದೆ.

English summary
Regional commissioner has announced by election for BBMP deputy mayor post on December 5. The post was vacant after demise of Ramila Umashankar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X