ಆಧುನಿಕ ಜೀವನಶೈಲಿಯೇ ಮೂತ್ರಪಿಂಡ ಖಾಯಿಲೆಗೆ ಮೂಲ ಕಾರಣ

By: ಬೆಂಗಳೂರು ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಮಾರ್ಚ್,10: ಆಧುನಿಕ ಜೀವನಶೈಲಿ ಹಾಗೂ ಆರೋಗ್ಯ ಬಗೆಗೆ ಕಾಳಜಿಯ ಕೊರತೆಯಿಂದಾಗಿ ಪ್ರತಿ 100 ಮಂದಿಯಲ್ಲಿ 17 ಮಂದಿ ಮೂತ್ರಪಿಂಡ ಸಮಸ್ಯೆಗಳಿಂದ ನರಳುತ್ತಿದ್ದಾರೆ. ಆಘಾತಕಾರಿ ವಿಷಯವೆಂದರೆ ಶೇ. 6 ರಷ್ಟು ಮಂದಿ 3ನೇ ಹಂತಕ್ಕೆ ತಲುಪಿದ್ದು ತುರ್ತು ಚಿಕಿತ್ಸೆ ನಿರೀಕ್ಷೆಯಲ್ಲಿದ್ದಾರೆ.

ಮೂತ್ರ ಪಿಂಡ ಕಾಯಿಲೆಯ ಬಗ್ಗೆ ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ರೀಗಲ್ ಆಸ್ಪತ್ರೆ ವೈದ್ಯರು, ಸಿಬ್ಬಂಬದಿಗಳು ಗುರುವಾರ 'ವಿಶ್ವ ಕಿಡ್ನಿ ದಿನಾಚರಣೆ' ಅಂಗವಾಗಿ ಮನೆ-ಮನೆಗೂ ತಲುಪಿ ಮೂತ್ರಪಿಂಡದ ಪ್ರತಿಕೃತಿ ನೀಡುವ ಮೂಲಕ ನಾಗರಿಕರಲ್ಲಿ ಜಾಗೃತಿ ಉಂಟು ಮಾಡಿದರು.[ಮಾರ್ಚ್ 10 ವಿಶ್ವ ಕಿಡ್ನಿ ದಿನ, ಮೂತ್ರಪಿಂಡ ಜೋಪಾನ]

Bengaluru

ಜಾಗೃತಿ ಸಮಾರಂಭದಲ್ಲಿ ಮಾತನಾಡಿದ ಖ್ಯಾತ ಯೂರಾಲಜಿಸ್ಟ್ ಹಾಗೂ ರೀಗಲ್ ಆಸ್ಪತ್ರೆ ಸಿಇಒ ಡಾ.ವಿ. ಸೂರಿ ರಾಜು, 'ಕಿಡ್ನಿ ಆರೋಗ್ಯದತ್ತ ದೃಢ ಹೆಜ್ಜೆ ಇಡಲು 'ಕಿಡ್ನಿಯಥಾನ್' ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. 'ಕಿಡ್ನಿಯಥಾನ್' ಮೂಲಕ ಪೋಷಕರು, ಶುಶ್ರೂಕರು, ಯುವ ರೋಗಿಗಳು ಹಾಗೂ ಸಾಮಾನ್ಯ ಸಾರ್ವಜನಿಕರಿಗೆ ಮಕ್ಕಳ ಹಂತದಲ್ಲೇ ಕಿಡ್ನಿ ಸಮಸ್ಯೆಗೆ ಚಿಕಿತ್ಸೆ ನೀಡುವುದು ಹಾಗೂ ಕಿಡ್ನಿ ಸಮಸ್ಯೆ ಬಾರದಂತೆ ತಡೆಗಟ್ಟುವ ಬಗ್ಗೆ ಜಾಗೃತಿ ಮೂಡಿಸಲಿದ್ದೇವೆ ಎಂದು ಹೇಳಿದರು.[ಮೊಟ್ಟ ಮೊದಲ ಕಿಡ್ನಿ ಕಸಿ ಮಾಡಿ ಇಂದಿಗೆ 51 ವರ್ಷ]

ರೀಗಲ್ ಆಸ್ಪತ್ರೆಯು ಹಲವಾರು ಕಿಡ್ನಿ ವೈಫಲ್ಯ ರೋಗಿಗಳಿಗೆ ಜೀವದಾನ ಮಾಡಿದೆ. 'ಕಿಡ್ನಿಯಥಾನ್' ನಲ್ಲಿ ಈಗಾಗಲೇ ಶಸ್ತ್ರ ಚಿಕಿತ್ಸೆ ಮಾಡಿಕೊಂಡು ಗುಣಮುಖರಾಗುತ್ತಿರುವ ಮಂದಿಯೂ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಏನಿದು ಕ್ರೋನಿಕ್ ಕಿಡ್ನಿ ಡಿಸೀಜ್ (ಸಿಕೆಡಿ) :

ಇದೊಂದು ದೀರ್ಘಕಾಲಿಕ ಮೂತ್ರಪಿಂಡ ಕಾಯಿಲೆ. ಇದು ಕಿಡ್ನಿ ವೈಫಲ್ಯಕ್ಕೆ ಕಾರಣವಾಗುತ್ತದೆ. ಇದಕ್ಕೆ ಕಿಡ್ನಿ ಕಸಿ ಅಥವಾ ನಿತ್ಯ ಡಯಾಲಿಸಿಸ್ ಮಾಡಿಸುವ ಮೂಲಕ ರಕ್ತ ಶುದ್ಧೀಕರಣ ಮಾಡುವುದೊಂದೇ ಪರಿಹಾರ ಎಂದು ಕಿಡ್ನಿಯ ಮತ್ತೊಂದು ವೈಫಲ್ಯದ ಬಗ್ಗೆ ಮಾಹಿತಿ ನಡೆದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Regal hospital have conducted Kidney awareness progarmme in Bengaluru on Thursday, March 10th. 2nd Thursday of March is observed as World Kidney Day.
Please Wait while comments are loading...