ಮಾರ್ಚ್ 10ರೊಳಗೆ ಆರ್ಥಿಕ ದುರ್ಬಲರಿಗೆ ಉಚಿತ ಶಸ್ತ್ರಚಿಕಿತ್ಸೆ

By: ಶಂಭು, ಹುಬ್ಬಳ್ಳಿ
Subscribe to Oneindia Kannada

ಬೆಂಗಳೂರು, ಫೆಬ್ರವರಿ, 05: ದುಬಾರಿ ವೈದ್ಯಕೀಯ ವೆಚ್ಚ ಭರಿಸಲಾಗದ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ನಗರದ ಪ್ರತಿಷ್ಠಿತ ರೀಗಲ್ ಆಸ್ಪತ್ರೆ ವಿಶ್ವ ಕಿಡ್ನಿ ದಿನವಾದ ಮಾರ್ಚ್ 10ರೊಳಗೆ 25 ಉಚಿತ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಿದೆ.

ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಖ್ಯಾತ ನೆಫ್ರಲಾಜಿಸ್ಟ್ ಡಾ. ಸ್ವರ್ಣ ಅವರು, ಮೂತ್ರನಾಳ ರಚನೆಗೆ ಸಂಬಂಧಿಸಿದ ರೋಗಗಳಿಗೆ (ಯೂರಿರ್ಥಲ್ ಸ್ಟ್ರಕ್ಚರ್ ಡಿಸೀಸ್) ಹಾಗೂ ಪ್ರಾಸ್ಟಟೀಸ್ ಗೆ ಸಂಬಂಧಿಸಿದ ರೋಗಿಗಳಿಗೆ ಶಸ್ತ್ರಚಿಕಿತ್ಸೆ ನೀಡಲಾಗುವುದು. ಯೂರಿರ್ಥಲ್ ಸ್ಟ್ರಕ್ಚರ್ ಸಮಸ್ಯೆ ಮಾತ್ರವಲ್ಲದೇ ಭವಿಷ್ಯದಲ್ಲಿ ಕಿಡ್ನಿ ಸ್ಟೋನ್ ಹಾಗೂ ಪ್ರಾಸ್ಟ್ರೈಟ್ ಸಮಸ್ಯೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೂ ಶಸ್ತ್ರಚಿಕಿತ್ಸೆ ನಡೆಸುವ ಉದ್ದೇಶವಿದೆ ಎಂದರು.[ಐಸಿಯು ಕೋಣೆಗೆ ವಿಧಿಸಿದ್ದ ಹೆಚ್ಚುವರಿ ತೆರಿಗೆ ನೀತಿ ಹಿಂದಕ್ಕೆ]

Regal hospital to conduct 25 free surgeries in Bengaluru

ವಿಷಯ ತಿಳಿಸಿದ ರೀಗಲ್ ಆಸ್ಪತ್ರೆ ಸಿಇಓ ಡಾ.ವಿ. ಸೂರಿ ರಾಜು ಅವರು, ಇತ್ತೀಚಿನ ವರ್ಷಗಳಲ್ಲಿ ವೈದ್ಯಕೀಯ ವೆಚ್ಚ ಭರಿಸುವ ಸಾಮರ್ಥ್ಯವಿಲ್ಲದೆ ಶಸ್ತ್ರಚಿಕಿತ್ಸೆಯಿಂದ ವಿಮುಖವಾಗುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆರ್ಥಿಕ ದುರ್ಬಲರ ಅಸಹಾಯಕತೆ ನನ್ನನ್ನು ಬಾಧಿಸುತಿತ್ತು. ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಯಿತು ಎಂದರು.

ವಾಸ್ತವವಾಗಿ ಆರ್ಥಿಕ ದುರ್ಬಲರು ಶಸಚಿಕಿತ್ಸೆಗೆ ಹಣ ಕಟ್ಟಲಾಗದೆ ಪೇಚಾಡುತ್ತಿದ್ದ ಸಂದರ್ಭದಲ್ಲಿ ಅವರಿಗೆ ಒಂದಷ್ಟು ರಿಯಾಯ್ತಿಗಳನ್ನು ನೀಡುತ್ತಿದೆ. ಈ ಉಚಿತ ಶಸ್ತ್ರಚಿಕಿತ್ಸೆಗೆ ಒಳಪಡುವ ರೋಗಿಗಳನ್ನು ಬಿಪಿಎಲ್ ಕಾರ್ಡ್ ಹಾಗೂ ಅವರ ಆರ್ಥಿಕ ಸ್ಥಿತಿಗತಿಯೂ ಸೇರಿದಂತೆ ಹಲವು ಮಾನದಂಡಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಆರಂಭದಲ್ಲಿ 25 ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಉದ್ದೇಶಿಸಿದ್ದು, ಕ್ರಮೇಣ ವಾರ್ಷಿಕವಾಗಿ 50 ಶಸ್ತ್ರಚಿಕಿತ್ಸೆ ನಡೆಸುವ ಉದ್ದೇಶವೂ ಇದೆ ಎಂದರು.[10 ಸೆಂಮೀ ಟ್ಯೂಮರ್ ಹೊರತೆಗೆದ ಮಾರ್ಥಾಸ್ ವೈದ್ಯರು!]

ಈ ಬಗ್ಗೆ ಹೆಚ್ಚಿನ ಮಾಹಿತಿಗೆ ರೀಗಲ್ ಹಾಸ್ಪಿಟಲ್, ಸಿಎಂಆರ್ ಕಾಂಪ್ಲೆಕ್ಸ್, ಚೋಕನಹಳ್ಳಿ, ಹೆಗಡೆ ನಗರ ಮುಖ್ಯರಸ್ತೆ, ಬೆಂಗಳೂರು. ದೂರವಾಣಿ 8884048888, 8884058888, 080-28443439 ಸಂಪರ್ಕಿಸಬಹುದು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Regal hospital to conduct 25 free surgeries for economically weaker classes within March 10th in Bengaluru. Regal hospital address: No.30, CMR Complex, Chokkanahalli Hegdenagar Main Road,, Bengaluru, Karnataka 560064. Phone:088840 58888
Please Wait while comments are loading...