ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಂ‌ ಲಕ್ಷ ವಸತಿ ಯೋಜನೆ: 3 ಮಹಡಿ ಅಲ್ಲ, 14 ಮಹಡಿಗಳ ಮನೆ ನಿರ್ಮಾಣ

By Nayana
|
Google Oneindia Kannada News

ಬೆಂಗಳೂರು,ಆಗಸ್ಟ್ 27: ಮುಖ್ಯಮಂತ್ರಿಗಳ ಒಂದು ಲಕ್ಷ ವಸತಿ ಯೋಜನೆ ಮತ್ತೊಂದು ತಿರುವು ಪಡೆದುಕೊಂಡಿದ್ದು,ಮೂರು ಅಂತಸ್ತಿನ ಕಟ್ಟಡ ಬದಲು 14ಮಹಡಿಗಳನ್ನು ನಿರ್ಮಿಸಲು ಸರ್ಕಾರ ಮುಂದಾಗಿದೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಇದೂ ಕೂಡ ಒಂದಾಗಿದೆ.

ಈ ಮೊದಲು ಮೂರು ಮಹಡಿಗಳಲ್ಲಿ ಬರುವ 1936 ಮನೆಗಳ ನಿರ್ಮಾಣಕ್ಕೆ ಕರೆದ ಟೆಂಡರ್ ರದ್ದುಪಡಿಸಲಾಗಿದೆ. ಒಂದೊಮ್ಮೆ ಮೂರು ಮಹಡಿಯ ಕಟ್ಟಡ ನಿರ್ಮಿಸಿದರೆ ಉಳಿದುರುವ ಮನೆಗಳನ್ನು ನಿರ್ಮಿಸಲು ಮತ್ತೊಂದು ಜಾಗ ಹುಡುಕಬೇಕಾಗುತ್ತದೆ ಹಾಗಾಗಿ ಒಂದೇ ಜಾಗದಲ್ಲಿ 14 ಅಂತಸ್ತಿನ ಮನೆಗಳನ್ನು ನಿರ್ಮಿಸಲು ನಿರ್ಧರಿಸಿದ್ದಾರೆ.

'ವಸತಿ ಯೋಜನೆ ಕಂತು ಸಹಕಾರ ಸಂಘದಿಂದಲೇ ಭರಿಸಲು ಚಿಂತನೆ' 'ವಸತಿ ಯೋಜನೆ ಕಂತು ಸಹಕಾರ ಸಂಘದಿಂದಲೇ ಭರಿಸಲು ಚಿಂತನೆ'

ರಾಜೀವ್‌ ಗಾಂಧಿ ವಸತಿ ನಿಗಮ ಒಂದೇ ಹಂತದಲ್ಲಿ ಜಾರಿ ಮಾಡಿದ ಯೋಜನೆಗಳಲ್ಲಿ 1936 ಮನೆಗಳನ್ನು ಜಿ+ ಕಟ್ಟಡದ ಮಾದರಿಯಲ್ಲಿ ನಿರ್ಮಿಸಲು 2018ರ ಫೆಬ್ರವರಿಯಲ್ಲಿ ಟೆಂಡರ್ ಆಹ್ವಾನಿಸಿತ್ತು.

Redesigning in CMs one lakh housing scheme: Tender cancelled

ನಗರ ಜಿಲ್ಲೆಯ 582.39 ಎಕರೆ ಜಾಗವನ್ನು ಉಚಿತವಾಗಿ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ನೀಡಲಾಗಿದೆ. ಕೆಲವೆಡೆ ಕಸದ ಘಟಕಗಳಿಗೆ ಹೊಂದಿಕೊಂಡಿರುವ ಜಾಗ, ಕ್ವಾರಿ ಇರುವುದು ಕಂಡುಬಂದಿದೆ. ಇಂತಹ ಜಾಗವನ್ನು ಮನೆಗಳನ್ನು ನಿರ್ಮಿಸಿದರೆ ಜನರು ಒಪ್ಪವುದಿಲ್ಲ. ಹೀಗಾಗಿ ಮನೆ ನಿರ್ಮಿಸಲು ಟೆಂಡರ್ ಕರೆಯುವ ಬದಲು ಜಾಗವು ವಸತಿ ಪ್ರದೇಶಕ್ಕೆ ಸೂಕ್ತವಾಗಿದೆಯೇ ಎಂದು ಖಾತರಿಪಡಿಸಿಕೊಳ್ಳಲಾಗುತ್ತದೆ.

ಕಾರ್ಮಿಕರ ವಸತಿ ಯೋಜನೆ ಸಹಾಯಧನ 5 ಲಕ್ಷಕ್ಕೆ ಏರಿಕೆ ಕಾರ್ಮಿಕರ ವಸತಿ ಯೋಜನೆ ಸಹಾಯಧನ 5 ಲಕ್ಷಕ್ಕೆ ಏರಿಕೆ

ಒಂದನೇ ಹಂತದಲ್ಲಿ ಅರ್ಜಿ ಕರೆದಾಗಲೇ ಒಂದು ಲಕ್ಷಕ್ಕೂ ಅಧಿಕ ಮಂದಿ ಅರ್ಜಿ ಸಲ್ಲಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ 49,125 ಅರ್ಜಿಗಳು ಸಲ್ಲಿಕೆಯಾಗಿದೆ. ದಾಖಲೆಗಳನ್ನು ಪರಿಶೀಲಿಸಿದ ಬಳಿಕ 48,615 ಅರ್ಜಿದಾರರು ಮಾತ್ರ ಅರ್ಹರು ಎಂದು ತಿಳಿದುಬಂದಿದೆ,ಎರಡನೇ ಹಂತದಲ್ಲಿ ಇನ್ನುಳಿದ 51,385 ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು.

English summary
Redesigning in the structure of chief minister's one lakh housing scheme which is altered 14 storeys from three storeys, caused cancellation of earlier tender. Officials said lack of availability of land for the project, the government decided to redesign the scheme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X