'ನಮ್ಮ ಮೆಟ್ರೋ' ಚಾಲಕ ಸಿಬ್ಬಂದಿಯಲ್ಲಿ ಮಹಿಳೆಯರೇ ಹೆಚ್ಚು!

Posted By:
Subscribe to Oneindia Kannada

ಬೆಂಗಳೂರು, ಜನವರಿ 31: ಉದ್ಯಾನ ನಗರಿಯ ಹೊಸ ಪ್ರಯಾಣ ಸೌಲಭ್ಯವಾದ ನಮ್ಮ ಮೆಟ್ರೋ ಈಗ ಮಹಿಳಾ ಶಕ್ತಿಯಿಂದ ಮತ್ತಷ್ಟು ಕಂಗೊಳಿಸುತ್ತಿದೆ.

ಇತ್ತೀಚೆಗೆ, ನಮ್ಮ ಮೆಟ್ರೋ ರೈಲು ಚಾಲಕರ ಹುದ್ದೆಗೆ 97 ಜನರನ್ನು ನೇಮಕಗೊಳಿಸಲಾಗಿದ್ದು, ಇವರಲ್ಲಿ 57 ಮಂದಿ ಮಹಿಳೆಯರಾಗಿದ್ದಾರೆಂದು ನಮ್ಮ ಮೆಟ್ರೋ ಹೇಳಿದೆ.

Recent appointment in Namma Metro for loco pilots are maximus women

ಇದರಿಂದಾಗಿ, ನಮ್ಮ ಮೆಟ್ರೋದಲ್ಲಿ ಈಗಿರುವ ಮಹಿಳಾ ಚಾಲಕರು ಮೊತ್ತ ಗಣನೀಯ ಮಟ್ಟಕ್ಕೇರಿದೆ ಎಂದು ಹೇಳಲಾಗಿದೆ. ನಿಯಮಗಳ ಪ್ರಕಾರ, ಮೆಟ್ರೋ ನೇಮಕಾತಿಯಲ್ಲಿ ಮಹಿಳೆಯರಿಗಾಗಿ ಶೇ. 30ರಷ್ಟು ಸ್ಥಾನಗಳನ್ನು ಮೀಸಲಿಡಲಾಗಿದೆ. ಆದರೆ, ನಿರೀಕ್ಷೆಗೂ ಮೀರಿ ಮಹಿಳೆಯರು ನಮ್ಮ ಮೆಟ್ರೋದಲ್ಲಿ ಉದ್ಯೋಗಿಗಳಾಗಲು ಉತ್ಸುಕರಾಗಿದ್ದಾರೆಂದು ಹೇಳಲಾಗಿದೆ.

ಇದಕ್ಕಿಂತ ಕುತೂಹಲಕಾರಿ ವಿಚಾರ ಮತ್ತೊಂದಿದೆ. ಮೆಟ್ರೋ ರೈಲು ಚಾಲಕರಾಗಲು ಕನಿಷ್ಠ ವಿದ್ಯಾರ್ಹತೆ ಡಿಪ್ಲೊಮಾ ಆಗಿದೆ. ಆದರೆ, ಇತ್ತೀಚೆಗೆ ಹೊಸದಾಗಿ ನಮ್ಮ ಮೆಟ್ರೋಗೆ ಬಂದು ಸೇರಿಕೊಂಡಿರುವವರಲ್ಲಿ ಹಲವಾರು ಮಂದಿ ಇಂಜಿನಿಯರ್ ಪದವೀಧರರೇ ಆಗಿದ್ದಾರೆಂದು ಹೇಳಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Recent recruitment in Namma Metro for the post of loco pilots 59% are women. Despite the education criteria for the post is diploma, many of new recruitments are engineering graduates.
Please Wait while comments are loading...