ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಬ್ಬಾಳದ ಮೂಲಕ ಏರ್‌ಪೋರ್ಟ್‌ಗೆ ಮೆಟ್ರೋ, ಅನನುಕೂಲಗಳೇನು?

|
Google Oneindia Kannada News

ಬೆಂಗಳೂರು, ಜನವರಿ 12: ಕೆಂಪೇಗೌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ ಅದರಿಂದ ಅನನುಕೂಲಗಳು ಏನೇನು ಎನ್ನುವುದನ್ನು ನೋಡೋಣ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ರೈಲ್ವೆ ಯೋಜನೆ ಮಾರ್ಗ ಬದಲಾವಣೆ ಹಾಗೂ ಉದ್ದೇಶಿತ ಮೆಟ್ರೋ ವಿಸ್ತರಣಾ ಯೋಜನೆಗಳ ವೆಚ್ಚ ಪರಿಷ್ಕರಣೆ ಪ್ರಸ್ತಾವನೆಗೂ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಅಧ್ಯಯನ ನಡೆಸುತ್ತಿದ್ದಾಗ ನಾಗವಾರ-ಆರ್‌.ಕೆ.ಹೆಗಡೆ ನಗರ ಮಾರ್ಗದಲ್ಲಿ ಪೆಟ್ರೋಲಿಯಂ ಪೈಪ್‌ ಇರುವುದು ತಿಳಿದುಬಂದಿದೆ. ಹೀಗಾಗಿ 'ನಾಗವಾರ-ಆರ್‌.ಕೆ.ಹೆಗಡೆ ನಗರ-ಜಕ್ಕೂರು' ಬದಲು 'ನಾಗವಾರ-ಹೆಬ್ಬಾಳ-ಜಕ್ಕೂರು' ಮೂಲಕ ಮಾರ್ಗ ನಿರ್ಮಿಸಲು ಚರ್ಚೆಯಾಗಿದೆ. ಹೀಗೆ ಮಾರ್ಗ ನಿರ್ಮಿಸಿದರೆ ಹೊರವರ್ತುಲ ರಸ್ತೆಯಲ್ಲಿ ಭೂ ಸ್ವಾಧೀನದ ಸಮಸ್ಯೆಯೇ ಇಲ್ಲದೆ ಜಾಗ ಲಭ್ಯವಾಗಿದೆ.

ಕೆಂಪೇಗೌಡ ಏರ್‌ಪೋರ್ಟ್‌ ಮೆಟ್ರೋ ಮಾರ್ಗ ಬದಲಾವಣೆ,ಕಾರಣಗಳೇನು?ಕೆಂಪೇಗೌಡ ಏರ್‌ಪೋರ್ಟ್‌ ಮೆಟ್ರೋ ಮಾರ್ಗ ಬದಲಾವಣೆ,ಕಾರಣಗಳೇನು?

ಮಡಿವಾಳದ ಕೇಂದ್ರೀಯ ರೇಷ್ಮೆ ಮಂಡಳಿಯಿಂದ ಕೆಆರ್‌ಪುರ ವರೆಗಿನ ಮೆಟ್ರೋ 2 ಯೋಜನಾ ವೆಚ್ಚವನ್ನು 4,202 ಕಟಿ ರೂಗಳಿಂದ 5,994 ಕೋಟಿ ರೂ ಗಳಿಗೆ ಪರಿಷ್ಕರಣೆ ಮಾಡುವ ಪ್ರಸ್ತಾವನೆಗೂ ಸಂಪುಟ ಒಪ್ಪಿಗೆ ನೀಡಿದೆ. ಜೊತೆಗೆ ಮೆಟ್ರೋಪೂರ್ವ-ಪಶ್ಚಿಮ ಕಾರಿಡಾರ್ ನ ವಿಸ್ತರಣೆ ಮಾರ್ಗವಾಗಿ ಚೆಲ್ಲಘಟ್ಟ ಸ್ಟೇಷನ್ ನಿರ್ಮಾಣ ಸಂಬಂಧ ಒಟ್ಟು 140 ಕೋಟಿ ರೂ ವೆಚ್ಚದ ಪ್ರಸ್ತಾವನೆಗೂ ಸಂಪುಟ ಒಪ್ಪಿಗೆ ನೀಡಿದೆ.

ಹಳೆಯ ಮಾರ್ಗಕ್ಕಿಂತ 4-5 ಕಿ.ಮೀ ದೂರ

ಹಳೆಯ ಮಾರ್ಗಕ್ಕಿಂತ 4-5 ಕಿ.ಮೀ ದೂರ

ನಾಗವಾರ-ಹೆಗಡೆನಗರ ಮಾರ್ಗಕ್ಕಿಂತ ನೆಗವಾರ-ಹೆಬ್ಬಾಳ ಮಾರ್ಗದಲ್ಲಿ ಮೆಟ್ರೋ ಮಾರ್ಗ ನಿರ್ಮಾಣವಾದರೆ ಸುಮಾರ��� 4-5 ಕಿ.ಮೀ ದೂರವಾಗುತ್ತದೆ.

ನಮ್ಮ ಮೆಟ್ರೋ ಹಳಿಗೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನನಮ್ಮ ಮೆಟ್ರೋ ಹಳಿಗೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನ

2 ಕಡೆ ಮೆಟ್ರೋ ಬದಲಾಯಿಸಲೇ ಬೇಕು

2 ಕಡೆ ಮೆಟ್ರೋ ಬದಲಾಯಿಸಲೇ ಬೇಕು

ಪ್ರಯಾಣಿಕರು ಎರಡು ಕಡೆ ಮೆಟ್ರೋವನ್ನು ಬದಲಿಸಬೇಕಾಗುತ್ತದೆ. ನೇರಳೆ ಮಾರ್ಗ ಅಥವಾ ಹಸಿರು ಅಥವಾ ಹಳದಿ ಮಾರ್ಗ ಎಲ್ಲೇ ಮೆಟ್ರೋ ಹತ್ತಿದರೂ ಕೆಂಪು ಹಾಗೂ ನೀಲಿ ಮಾರ್ಗದ ಮೂಲಕ ಕೆಂಪೇಗೌಡ ಏರ್‌ಪೋರ್ಟ್‌ ಪ್ರವೇಶಿಸಬೇಕು.

ಆರು ಬೋಗಿ ಮೆಟ್ರೋ ಸೇವಾವಧಿ ಒಂದು ಗಂಟೆ ವಿಸ್ತರಣೆ ಆರು ಬೋಗಿ ಮೆಟ್ರೋ ಸೇವಾವಧಿ ಒಂದು ಗಂಟೆ ವಿಸ್ತರಣೆ

ಏರ್‌ಪೋರ್ಟ್ ತೆರಳುವುದು ಹೇಗೆ?

ಏರ್‌ಪೋರ್ಟ್ ತೆರಳುವುದು ಹೇಗೆ?

ಪ್ರಯಾಣಿಕರ ಏರ್‌ಪೋರ್ಟ್ ತಲುಪಬೇಕಾಗಿದ್ದರೆ ರೈಲ್ವೆ ನಿಲ್ದಾಣ,ಮೆಜೆಸ್ಟಿಕ್ ಅಥವಾ ಎಂಜಿ ರಸ್ತೆಯಲ್ಲಿ ಮೆಟ್ರೋ ಹತ್ತಬೇಕಾಗುತ್ತದೆ.ಅಲ್ಲಿಂದ ನಾಗವಾರ ತೆರಳಿ ಅಲ್ಲಿಂದ ಮತ್ತೊಂದು ಮೆಟ್ರೋ ಹತ್ತಿ ಏರ್‌ಪೋರ್ಟ್‌ಗೆ ಹೋಗಬೇಕಾಗಿದೆ. ರಾಮಕೃಷ್ಣಹೆಗಡೆ ನಗರ, ನಾಗವಾರ, ಜಕ್ಕೂರು ಮಾರ್ಗದಲ್ಲಿ ಆಯಿಲ್ ಪೈಪ್ ಲೈನ್ ಬಂದಿರುವ ಕಾರಣ ಮೆಟ್ರೋ ಮಾರ್ಗ ಬದಲಿಸಲಾಗಿದೆ.

ಯುರೋಪ್ ಬ್ಯಾಂಕ್‌ನಿಂದ ಮೆಟ್ರೋ 3,800 ಕೋಟಿ ಹೂಡಿಕೆ

ಯುರೋಪ್ ಬ್ಯಾಂಕ್‌ನಿಂದ ಮೆಟ್ರೋ 3,800 ಕೋಟಿ ಹೂಡಿಕೆ

ನಮ್ಮ ಮೆಟ್ರೋ ಎರಡನೇ ಹಂತದ ಯೋಜನೆಗೆ ಯುರೋಪಿಯನ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ 3800 ಕೋಟಿ ಹೂಡಿಕೆ ಮಾಡಲು ಮುಂದ��ಗಿದೆ. ಶುಕ್ರವಾರ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಸಮ್ಮುಖದಲ್ಲಿ 1700 ಕೋಟಿ ಯೋಜನಾ ಒಪ್ಪಂದಕ್ಕೆ ಬ್ಯಾಂಕ್ ಹಾಗೂ ಬಿಎಂಆರ್‌ಸಿಎಲ್ ಸಹಿ ಹಾಕಿದೆ.

English summary
The government’s plan to realign the Namma Metro route to Kempegowda International Airport (KIA) via Hebbal was intended to provide seamless connectivity, but it now appears the new route will only inconvenience passengers travelling to the airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X