12 ವರ್ಷಗಳ ಬಳಿಕ ರಿಯಲ್ ಸ್ಟಾರ್ ಕನಸು ನನಸು

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 01 : 'ರಿಯಲ್ ಸ್ಟಾರ್ ಅವರ ವಾರ್ಷಿಕ ಆದಾಯ 2 ಲಕ್ಷ ರು ಮಾತ್ರ, 17 ಎಕರೆ ಕೃಷಿ ಜಮೀನು ಖರೀದಿಸಿ ರೈತನಾಗಲು ಹೊರಟ್ಟಿದ್ದರು' ಎಂಬ ಸುದ್ದಿ ಹುಬ್ಬೇರುವಂತೆ ಮಾಡುತ್ತದೆ. ಈಗ ಈ ಕೇಸಿಗೆ ತಾರ್ಕಿಕ ಅಂತ್ಯ ಸಿಕ್ಕಿದೆ. ಸುಮಾರು 12 ವರ್ಷಗಳ ಬಳಿಕ ಉಪೇಂದ್ರ ಅವರ ಕನಸು ನನಸಾಗಿದೆ. ಈಗ 'ರೈತ' ಎಂದು ಹೆಗಲ ಮೇಲೆ ಟವೆಲ್ ಹಾಕಿಕೊಂಡು ಓಡಾಡಬಹುದಾಗಿದೆ.

ಉಪೇಂದ್ ಅವರು 2005 ರಲ್ಲಿ ತಾವರೆಕೆರೆ ಬ್ಯಾಲಾಳು ಬಳಿ 17 ಎಕರೆ 10 ಗುಂಟೆ ಕೃಷಿ ಜಮೀನು ಖರೀದಿಸಿ ರೈತನಾಗಲು ಹೊರಟ್ಟಿದ್ದರು. ಆದರೆ, ಇದಕ್ಕೆ ಸ್ಥಳೀಯ ಸಹಾಯಕ ಆಯುಕ್ತರಿಂದ ಆಕ್ಷೇಪ ವ್ಯಕ್ತವಾಗಿತ್ತು.

ಉಪೇಂದ್ರ ಅವರಿಗೆ ಕೃಷಿಯೇತರ ಮೂಲದ ಆದಾಯ ಮಿತಿ ವಾರ್ಷಿಕ 2 ಲಕ್ಷ ರು ಗಿಂತಲೂ ಅಧಿಕವಾಗಿದೆ. ಕರ್ನಾಟಕ ಭೂ ಸುಧಾರಣಾ ಕಾಯ್ದೆಯ ಅನ್ವಯ ಈ ಖರೀದಿ ಕ್ರಮ ಕಾನೂನು ಬಾಹಿರ ಎಂದು ಸ್ಥಳೀಯ ಸಹಾಯಕ ಆಯುಕ್ತರು ಆಕ್ಷೇಪಿಸಿ, ಆಸ್ತಿ ಮುಟ್ಟುಗೋಲಿಗೆ ಆದೇಶಿಸಿದ್ದರು. ಆದರೆ, 'ಅರ್ಜಿದಾರರ ವಿರುದ್ಧ ಸರ್ಕಾರ ಸೂಕ್ತ ಸಮಯದಲ್ಲಿ ಕ್ರಮ ತೆಗೆದುಕೊಂಡಿಲ್ಲ' ಎಂದು ಹೈಕೋರ್ಟಿನಲ್ಲಿ ಅರ್ಜಿ ವಜಾಗೊಂಡಿದೆ.

ಘಟನೆ ಹಿನ್ನಲೆ

ಘಟನೆ ಹಿನ್ನಲೆ

ಬಿ.ಎಂ. ಉಪೇಂದ್ರ ಕುಮಾರ್ ಅಲಿಯಾಸ್ ಉಪೇಂದ್ರ ಅವರು 2005ರಲ್ಲಿ ತಾವರೆಕರೆ ಹೋಬಳಿಯ ಸರ್ವೇ ನಂ. 13/1 ಹಾಗೂ 14ರಲ್ಲಿ ಕೃಷಿ ಜಮೀನು ಖರೀದಿಸಿದ್ದರು. 'ಕರ್ನಾಟಕ ಭೂ ಕಂದಾಯ ಕಾಯ್ದೆಯ 79 ಎ ಮತ್ತು 79 ಬಿ ಅಸಾಂವಿಧಾನಿಕವಾಗಿವೆ' ಎಂದು ಸ್ಥಳೀಯ ಸಹಾಯಕ ಆಯುಕ್ತರು ಆಕ್ಷೇಪಿಸಿದ್ದರು.

ಉಪೇಂದ್ರ ಲಕ್ಕಿ

ಉಪೇಂದ್ರ ಲಕ್ಕಿ

2015ರಲ್ಲಿ 'ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತರಲಾಯಿತು. ಇದರಿಂದಾಗಿ ಕೃಷಿಯೇತರ ಮೂಲದ ಆದಾಯ ಮಿತಿ ವಾರ್ಷಿಕ ಮಿತಿ 25 ಲಕ್ಷ ರು ಗೆ ಏರಿಸಲಾಯಿತು.' ಹೀಗಾಗಿ ಸಕಾರದ ಮೇಲ್ಮನವಿ ಬೆಲೆ ಕಳೆದುಕೊಂಡಿತು. ಆದರೆ, ಈಗ ಉಪೇಂದ್ರ ಪರ ತೀರ್ಪು ಬರಲು ಈ ತಿದ್ದುಪಡಿಯೊಂದೇ ಕಾರಣವಲ್ಲ.

ಸೂಕ್ತ ಸಮಯದಲ್ಲಿ ಕ್ರಮ ಜರುಗಿಸದ ಕಾರಣ

ಸೂಕ್ತ ಸಮಯದಲ್ಲಿ ಕ್ರಮ ಜರುಗಿಸದ ಕಾರಣ

ಸೂಕ್ತ ಸಮಯದಲ್ಲಿ ಕ್ರಮ ಜರುಗಿಸದ ಕಾರಣ, ಆಸ್ತಿಯನ್ನು ಉಪೇಂದ್ರ ಅವರು ಉಳಿಸಿಕೊಳ್ಳಲು ಸಾಧ್ಯವಾಯಿತು. 2005ರಲ್ಲಿ ಖರೀದಿಸಿದ ಭೂಮಿಗೆ 2007ರಲ್ಲಿ ನೋಟಿಸ್ ಜಾರಿಗೊಳಿಸಿದ್ದು ಬಿಟ್ಟರೆ, ಯಾವುದೇ ಕ್ರಮ ಜರುಗಿಸಿರಲಿಲ್ಲ. ಇದು ಉಪೇಂದ್ರಗೆ ವರವಾಯಿತು.

Upendra Finally Turns Politician? | Oneindia Kannada
ರೈತ ಕುಟುಂಬ:

ರೈತ ಕುಟುಂಬ:

ಹಿಂದೂ ಅವಿಭಕ್ತ ಕುಟುಂಬಕ್ಕೆ ಸೇರಿದ್ದೇನೆ. ಕುಂದಾಪುರದ ಕೋಟೇಶ್ವರದಲ್ಲಿ ಈಗಲೂ ನಮ್ಮ ಕುಟುಂಬದವರು ಕೃಷಿಕರಾಗಿದ್ದಾರೆ. ಹೀಗಾಗಿ ನಾನು ಬ್ಯಾಲಾಳು ಬಳಿ ಜಮೀನು ಖರೀದಿಸಿದೆ. ಜಮೀನು ಅಭಿವೃದ್ಧಿ ಮಾಡಲು ಕರ್ನಾಟಕ ಬ್ಯಾಂಕಿನಿಂದ 35 ಲಕ್ಷ ರು ಸಾಲ ಪಡೆದುಕೊಂಡಿದ್ದೇನೆ ಎಂದು ಕೋರ್ಟಿಗೆ ಉಪೇಂದ್ರ ಪರ ವಕೀಲರು ಹೇಳಿದ್ದಾರೆ. ಈಗ ಕಾನೂನು ತೊಡಕು ನಿವಾರಿಸಿಕೊಂಡು ರೈತನಾಗಿ ಕಣಕ್ಕಿಳಿಯಲು ಸಿದ್ಧರಾಗುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Real Star Upendra bought 17 acres of farmland showing income below Rs 2 lakh. More than 11 years after Upendra bought 17 acres and 10 guntas of agricultural land in Tavarekere, the Sandalwood star is finally the 'farmer' he wants to be reports Bangaloremirror.
Please Wait while comments are loading...