ಎಲ್ಲ ಕನ್ನಡ ಸುದ್ದಿಗಳನ್ನು ಓದುವ ಸುಂದರ ಅನುಭವ!

Posted By:
Subscribe to Oneindia Kannada

ಇಂಟರ್ನೆಟ್ಟಿನಲ್ಲಿ ಸುದ್ದಿ ಸಂವಹನೆಯ ಸ್ವರೂಪ, ವಿಧಿವಿಧಾನಗಳು ಬಳಸುವವರ ಅಭಿರುಚಿಗೆ ತಕ್ಕಂತೆ, ಮಾರುಕಟ್ಟೆಯ ಅಗತ್ಯಗಳಿಗೆ ಅನುಗುಣವಾಗುವಂತೆ ಬದಲಾಗುತ್ತಲೇ ಇರುತ್ತವೆ. ಬದಲಾವಣೆ ಜಗದ ನಿಯಮ ಎಂಬುವುದು ಇಂಟರ್ನೆಟ್ ಜಗತ್ತಿಗೂ ಅಕ್ಷರಶಃ ಅನ್ವಯಿಸುತ್ತದೆ.

ಇದಕ್ಕೆ ತಕ್ಕಂತೆ, ಒನ್ಇಂಡಿಯಾದ ನ್ಯೂಸ್ ಅಗ್ರಿಗೇಟರ್ '60 ಸೆಕೆಂಡ್ಸ್ ನೌ' (60SecondsNow) ಆಪ್ ಜೊತೆಗೆ ವೆಬ್ ತಾಣವನ್ನು ಕೂಡ ಲಾಂಚ್ ಮಾಡಿದೆ. ಭಾರತದಲ್ಲಿ ಮೊಬೈಲ್ ಬಳಕೆದಾರರು ವೃದ್ಧಿಯಾಗುತ್ತಿದ್ದಾರಾದರೂ ಡೆಸ್ಕ್ ಟಾಪ್ ಬಳಕೆದಾರರ ಸಂಖ್ಯೆಯೇನು ಕಮ್ಮಿಯಾಗಿಲ್ಲ.

ಕನ್ನಡ ಓದುಗರ ಅಭಿರುಚಿ, ಬಳಕೆ, ಅಗತ್ಯಗಳನ್ನು ಅಧ್ಯಯನಿಸಿ 60 ಸೆಕೆಂಡ್ಸ್ ನೌ ಅಂತರ್ಜಾಲ ತಾಣವನ್ನು ಬಿಡುಗಡೆ ಮಾಡಲಾಗಿದೆ. ಎಲ್ಲ ಕನ್ನಡ ತಾಣಗಳಲ್ಲಿ ಪ್ರಕಟವಾಗುವ ಕನ್ನಡ ಸುದ್ದಿ ಸ್ವಾರಸ್ಯ, ತಾಜಾ ಸುದ್ದಿಗಳನ್ನು ಒಂದೇ ಕಡೆಯಲ್ಲಿ ಓದುವ ಸುಂದರ ಅನುಭವ ನಿಮ್ಮದಾಗಲಿ.

60 Seconds Now

ಕನ್ನಡ, ಕರ್ನಾಟಕಕ್ಕೆ ಸಂಬಂಧಿಸಿದ ತಾಜಾ ಸುದ್ದಿಗಳನ್ನು, ಸಿನೆಮಾ ಲೋಕದ ಸುದ್ದಿಸ್ವಾರಸ್ಯಗಳನ್ನು, ವ್ಯಾಪಾರ ಜಗತ್ತಿನ ಆಗುಹೋಗುಗಳ ಸುದ್ದಿಗಳು ಒಂದೇ ನಿಮಿಷದಲ್ಲಿ ಓದುತ್ತಲೇ ಮತ್ತಷ್ಟು ಓದಬೇಕೆಂದು ಅನಿಸುವಂತೆ ಪುಟಗಳನ್ನು ನಿರೂಪಿಸಲಾಗಿದೆ.

ಈ ಸುದ್ದಿಗಳನ್ನು ಸೋಷಿಯಲ್ ಮೀಡಿಯಾ ಜನಪ್ರಿಯ ತಾಣಗಳಾದ ಫೇಸ್ ಬುಕ್, ಟ್ವಿಟ್ಟರ್ ಮತ್ತು ಗೂಗಲ್ ಪ್ಲಸ್ ನಲ್ಲಿ ಹಂಚಿಕೊಳ್ಳಿ. ನಿಮ್ಮ ಸ್ನೇಹಿತರಿಗೂ ತಿಳಿಸಿ. ಕನ್ನಡವನ್ನು ಉಳಿಸಿ, ಬೆಳೆಸುವ ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ. ಹಾಗೆಯೆ, ಈ ತಾಣವನ್ನು ನಿಮ್ಮ ಬ್ರೌಸರ್ ನಲ್ಲಿ ಬುಕ್ ಮಾರ್ಕ್ ಮಾಡಿಕೊಳ್ಳಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Read Kannada News in just one minute on 60 Seconds Now. The popular news aggregator has launched web version of the app with more features of sharing the stories on social media. Go through the website, inform the frieds, share it on social media.
Please Wait while comments are loading...