ಕಂಟೋನ್ಮೆಂಟ್-ವೈಟ್ ಫೀಲ್ಡ್ ಮಾರ್ಗದಲ್ಲಿ ಮತ್ತೆರಡು ಜೋಡಿ ಹಳಿ

Posted By: Nayana
Subscribe to Oneindia Kannada

ಬೆಂಗಳೂರು, ಡಿಸೆಂಬರ್ 20 : ನಗರದ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ಹಾಗೂ ವೈಟ್ ಫೀಲ್ಡ್ ನಡುವೆ 4 ರೈಲು ಹಳಿ ನಿರ್ಮಾಣ ಪ್ರಸ್ತಾವಣೆಗೆ ಮರುಜೀವ ಬಂದಿದೆ. ಈ ಹಿಂದೆ ವೈಟ್ ಫೀಲ್ಡ್ ಗೆ ಜೋಡಿ ಹಳಿ ನಿರ್ಮಾಣ ಮಾಡುವ ಪ್ರಸ್ತಾವನೆಗೆ ಅನುಮತಿ ದೊರೆತಿದ್ದರೂ ಕಾಲಕೂಡಿಬಂದಿರಲಿಲ್ಲ.

ಬೆಂಗಳೂರಿನಿಂದ ಮೈಸೂರಿಗೆ ರಾತ್ರಿ ರೈಲು ಸಂಚಾರವಿಲ್ಲ

ಬೆಂಗಳೂರು ಉಪನಗರ ರೈಲು ಯೋಜನೆಯ ಪ್ರಮುಖ ಭಾಗವಾಗಿರುವ ಕಂಟೋನ್ಮೆಂಟ್-ವೈಟ್ ಫೀಲ್ಡ್ ನಡುವೆ 4 ರೈಲು ಹಳಿ ನಿರ್ಮಾಣ ಪ್ರಸ್ತಾವನೆ ಮರು ಜೀವ ಪಡೆದಿದೆ. ಉಪನಗರ ರೈಲಿಗೆ ಆಗ್ರಹ ಹೆಚ್ಚುತ್ತಿದ್ದಂತೆಯೇ ಕಾಮಗಾರಿ ಸಂಬಂಧ ನೈಋತ್ಯ ರೈಲ್ವೆ ವಿಸ್ತೃತ ಯೋಜನಾ ವೆಚ್ಚದ ವರದಿಯನ್ನು ರೈಲ್ವೆ ಬೋರ್ಡುಗಳಿಗೆ ಕಳುಹಿಸಿದೆ.

Re thinking on 4 train lane between contonment to Whitefield

ವೈಟ್ ಫೀಲ್ಡ್ ವರೆಗೆ 2 ಜೋಡಿ ಹಳಿ ನಿರ್ಮಾಣ ಪ್ರಸ್ತಾವಣೆಗೆ ಬೋರ್ಡ್ ಬಹಳ ಹಿಂದೆಯೇ ಅನುಮತಿ ನೀಡಿತ್ತು. ಲಭ್ಯವಿರುವ ಭೂಮಿ ಬಳಸಿಕೊಂಡು ಕಾಮಗಾರಿ ಪ್ರಾರಂಭಿಸಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ೪೯೩ ಕೋಟಿ ರೂ. ಯೋಜನಾ ವೆಚ್ಚದ ವರದಿ ತಯಾರಿಸಿ ಸಲ್ಲಿಸಲಾಗಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಂಗಳೂರು -ಮೈಸೂರು ಎಲೆಕ್ಟ್ರಿಕ್ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್

ಮೂಲತಃ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ-ವೈಟ್ ಫೀಲ್ಡ್ ನಡುವೆ 2 ಜೋಡಿ ಹಳಿ ನಿರ್ಮಾಣಕ್ಕೆ ದಶಕದ ಹಿಂದೆ ಪ್ರಸ್ತಾವನೆಯಿತ್ತು. ದಿನಕಳೆದಂತೆ ರೈಲು ಹಳಿಯ ಇಕ್ಕೆಲಗಳಲ್ಲಿ ಕಟ್ಟಡಗಳ ಸಂಖ್ಯೆ ಏರಿಕೆಯಾಗಿದ್ದು, ನಗರದಿಂದ ಕಂಟೋನ್ಮೆಂಟ್ ವರೆಗೆ ೪ ಹಳಿ ಅಳವಡಿಕೆ ಅಸಾಧ್ಯ ಎನ್ನುವ ಸ್ಥಿತಿ ಉಂಟಾಗಿದೆ. ಹೀಗಾಗಿ ಕೊನೆಯಲ್ಲಿ ಕಂಟೋನ್ಮೆಂಟ್-ವೈಟ್ ಫೀಲ್ಡ್ ನಡುವೆ ಮಾತ್ರ ಕಾಮಗಾರಿ ಕೈಗೆತ್ತಿಕೊಳ್ಳಲು ನೈಋತ್ಯ ರೈಲ್ವೆ ತೀರ್ಮಾಣಿಸಿದೆ.

ಕಂಟೋನ್ಮೆಂಟ್-ವೈಟ್ ಫೀಲ್ಡ್ ನಡುವೆ ಸಂಪೂರ್ಣ ವಿದ್ಯುದೀಕರಣಗೊಂಡ ಜೋಡಿ ಹಳಿಯಿದೆ. ಈ ಮಾರ್ಗದಲ್ಲಿ ಪ್ಯಾಸೆಂಜರ್ ರೈಲುಗಳಷ್ಟೇ ಗೂಡ್ಸ್ ರೈಲುಗಳ ಓಡಾಟವೂ ಇದೆ. ಹೀಗಾಗಿ 4 ಹಳಿ ನಿರ್ಮಾಣ ಮಾಡಿದರೆ ಪ್ಯಾಸೆಂಜರ್ ರೈಲುಗಳ ಸಂಚಾರ ಹೆಚ್ಚಲಿದ್ದು, ನಿಲ್ದಾಣಗಳ ನಡುವಿನ ಪ್ರಯಾಣಾವಧಿ ಇಳಿಕೆಯಾಗಲಿದೆ. 2 ಜೋಡಿ ಹಳಿ ಆಟೋಮ್ಯಾಟಿಕ್ ಸಿಗ್ನಲಿಂಗ್ ಆದರೆ5-10 ನಿಮಿಷಕ್ಕೊಂದು ರೈಲು ಓಡಾಟ ಸಾದ್ಯವಾಗಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Re thinking on 4 train lane between contonment to Whitefield: South West railway planning includes fresh 4 lane railway project between contonment and whitefield. which is the part of suburban railway station of silicon city.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ