ಮಲ್ಲೇಶ್ವರದ ಮಂತ್ರಿಮಾಲ್ ಪುನಾರಂಭ ಸದ್ಯಕ್ಕಿಲ್ಲ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 2: ಹಿಂಬದಿಯ ಗೋಡೆ ಕುಸಿತದಿಂದಾಗಿ ಕಳೆದ 16ರಿಂದ ಮುಚ್ಚಲ್ಪಟ್ಟಿರುವ ಮಂತ್ರಿ ಮಾಲ್ ಸದ್ಯಕ್ಕೆ ಪುನರಾರಂಭವಾಗುವ ಸಂಭವವಿಲ್ಲ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಗೆ (ಬಿಬಿಎಂಪಿ) ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಕಟ್ಟಡದಲ್ಲಿ ಅಳವಡಿಸಲಾಗಿರುವ ಹವಾ ನಿಯಂತ್ರಿತ ವ್ಯವಸ್ಥೆಯಿಂದ ಬಂದ ನೀರು ಕಟ್ಟಡದ ಹಿಂಬದಿಯ ಗೋಡೆಯನ್ನು ತೀವ್ರವಾಗಿ ಹಸಿಗೊಳಿಸಿದ್ದ ಕಾರಣದಿಂದ ಆ ಗೋಡೆ ಕುಸಿದಿದೆ ಎಂದು ಆಯುಕ್ತರು ವಿವರಿಸಿದರು.

Re-open of Mantri square still indefinite

ಕಳೆದ ತಿಂಗಳ ಗೋಡೆ ಕುಸಿತದಿಂದಾಗಿ ಮಾಲ್ ನ ಇಬ್ಬರು ಕೆಲಸಗಾರರು ಸೇರಿದಂತೆ ನಾಲ್ವರು ಗಾಯಗೊಂಡಿದ್ದರು. ಅಂದಿನಿಂದ ಸುರಕ್ಷತೆಯ ದೃಷ್ಟಿಯಿಂದ ಮಾಲ್ ಅನ್ನು ಮುಚ್ಚಲಾಗಿದೆ.

ಈ ಪ್ರಕರಣದ ನಂತರ, ಕಟ್ಟಡದ ಗುಣಮಟ್ಟವನ್ನು ಪರೀಕ್ಷಿಸಲು ಬಿಬಿಎಂಪಿ ನೇಮಿಸಿದ್ದ ತಜ್ಞರ ಸಮಿತಿ ತನ್ನ ವರದಿಯನ್ನು ಬಿಬಿಎಂಪಿಗೆ ಸಲ್ಲಿಸಿದೆ. ಆದರೆ, ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತರು ತಜ್ಞರ ವರದಿ ಅಂಶಗಳನ್ನು ಬಹಿರಂಗಗೊಳಿಸಲಿಲ್ಲ.

ತಜ್ಞರ ವರದಿಯ ಬಗ್ಗೆ ಕೂಲಂಕಷ ಚರ್ಚೆ ನಡೆಸಿದ ನಂತರವಷ್ಟೇ ಮಂತ್ರಿ ಮಾಲ್ ಪುನರಾರಂಭಕ್ಕೆ ಅನುಮತಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ. ತಜ್ಞರ ಸಮಿತಿಯು ಸುಮಾರು ಎಂಟು ವಿಧಗಳಲ್ಲಿ ಕಟ್ಟಡದ ಗುಣಮಟ್ಟವನ್ನು ಪರೀಕ್ಷಿಸಿದ್ದು, ಕಟ್ಟಡ ನಿರ್ಮಾಣಕ್ಕೆ ಉಪಯೋಗಿಸಲಾಗಿರುವ ಸಿಮೆಂಟ್, ಕಬ್ಬಿಣ, ಉಕ್ಕು ಮುಂತಾದ ಸಾಮಗ್ರಿಗಳ ಗುಣಮಟ್ಟವನ್ನೂ ಅದು ಅಳೆದಿದೆ ಎಂದಷ್ಟೇ ಆಯುಕ್ತರು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Re-open of Mantri Mall is still oscillating so that BBMP has not taken decision regarding it. Meanwhile, the Commissioner of BBMP Manjunath Prasad has said that, the committee of experts who examined the quality of Mantri square has submitted its report.
Please Wait while comments are loading...