ಬೆಂಗಳೂರಿನಲ್ಲಿ ಆರ್ ಬಿಐನ ಇಬ್ಬರು ಅಧಿಕಾರಿಗಳ ಬಂಧನ

Posted By:
Subscribe to Oneindia Kannada


ಬೆಂಗಳೂರು, ಡಿಸೆಂಬರ್ 17: ಅಪನಗದೀಕರಣ ಹಿನ್ನೆಲೆ ಹೊಸ ನಗದು ಬದಲಾವಣೆ ಜಾಲದಲ್ಲಿ ಬೆಂಗಳೂರಿನ ಆರ್ ಬಿಐ ಕ್ಯಾಶ್ ವಿಭಾಗದ ಇಬ್ಬರು ಅಧಿಕಾರಿಗಳು ಸಿಕ್ಕಿ ಬಿದ್ದಿದ್ದು ಈಗ ಸಿಬಿಐ ಅತಿಥಿಗಳಾಗಿದ್ದಾರೆ.

ಆರ್ ಬಿಐ ಕ್ಯಾಶ್ ವಿಭಾಗದ ಹಿರಿಯ ವಿಶೇಷ ಸಹಾಯಕ ಸದಾನಂದ ನಾಯ್ಕ ಮತ್ತು ವಿಶೇಷ ಸಹಾಯಕಎ.ಕೆ.ಕೆವಿನ್ ಎಂಬುವವರು ಬಂಧಿತರು ಇವರು ಅಕ್ರಮವಾಗಿ 1 ಕೋಟಿ ಹಣವನ್ನು ಬೇರೆಯವರಿಗೆ ಬದಲಾಯಿಸಿಕೊಡಲು ಪ್ರಯತ್ನಿಸಿದ್ದು ಬೆಳಕಿಗೆ ಬಂದಿದೆ ಹೀಗಾಗಿ ಇವರನ್ನು ಬಂಧಿಸಲಾಗಿದೆ.

ಡಿಸೆಂಬರ್ 13 ರಂದು 1.5ಕೋಟಿ ಅಕ್ರಮ ಹಣ ಬದಲಾವಣೆ ಸಂಬಂಧ ಕೆ.ಮೈಕಲ್ ಸಿಬಿಐಗೆ ಸಿಕ್ಕಿ ಬಿದ್ದಿದರು. ಅವರನ್ನು ಅಮಾನತುಗೊಳಿಸಲಾಗಿತ್ತು.[ಸಿಬಿಐ ಜಾಲಕ್ಕೆ ಬಿದ್ದ ಆರ್ ಬಿಐನ ಮೈಕಲ್ ಅಮಾನತು]

RBI

ನೋಟು ಬದಲಾವಣೆ ಹಿನ್ನೆಲೆಯಲ್ಲಿ ಪ್ರಭಾವಿತರಿಗೆ 1.5 ಕೋಟಿಗೂ ಹೆಚ್ಚು ಹಣವನ್ನು ಆರ್ ಬಿಐನ ಮೈಕಲ್ ಮತ್ತು ಇಬ್ಬರು ಅಧಿಕಾರಿಗಳು ಬದಲಾಯಿಸಿ ಕೊಟ್ಟಿದ್ದರು ಎನ್ನಲಾಗಿತ್ತು. ಈ ಇಬ್ಬರೂ ಸೇರಿ ಒಟ್ಟು ಆರ್ ಬಿಐನ ಮೂವರು ಅಧಿಕಾರಿಗಳು ಸಿಕ್ಕಿ ಬಿದ್ದಂತಾಗಿದೆ.

ಆರ್ ಬಿಐನ ಹೊಸ ನೋಟು ಬದಲಾವಣೆ ಈ ಜಾಲದಲ್ಲಿ ಇನ್ನು ಯಾರು ಯಾರು ಇದ್ದಾರೆ. ಯಾರು ಯಾರಿಗೆ ಎಷ್ಟೆಷ್ಟು ಹಣವನ್ನು ಬದಲಾಯಿಸಿ ಕೊಡಲಾಗಿದೆ ಎಂಬುದು ಹೊರ ಬೀಳಬೇಕಿದೆ. ಆದರೂ ದೇಶದಲ್ಲಿ 30-40 ಪರ್ಸೆಂಟ್ ವ್ಯವಹಾರದ ನೋಟು ಬದಲಾವಣೆ ದಂಧೆ ನಡೆಯುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Demonetisation: RBI officer sadananda naik and A.K.kevin arrested by CBI in Bengaluru
Please Wait while comments are loading...