ಸಿಬಿಐ ಜಾಲಕ್ಕೆ ಬಿದ್ದ ಆರ್ ಬಿಐನ ಮೈಕಲ್ ಅಮಾನತು

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 13: ಅಪನಗದೀಕರಣ ಹಿನ್ನೆಲೆ ನೋಟು ಬದಲಾವಣೆ ಜಾಲದಲ್ಲಿ ಆರ್ ಬಿಐನ ದೊಡ್ಡ ತಿಮಿಂಗಿಲಗಳೇ ಬಿದ್ದಂತಿದೆ. ಆರ್ ಬಿಐನ ಅಧಿಕಾರಿ ಮೈಕಲ್ ಸೇರಿದಂತೆ ಮೂವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಅದರಲ್ಲಿ ಮೈಕಲ್ ಅನ್ನು ಅಮಾನತುಗೊಳಿಸಲಾಗಿದೆ.

ನೋಟು ಬದಲಾವಣೆ ಹಿನ್ನೆಲೆಯಲ್ಲಿ ಪ್ರಭಾವಿತರಿಗೆ 1.5 ಕೋಟಿಗೂ ಹೆಚ್ಚು ಹಣವನ್ನು ಆರ್ ಬಿಐನ ಮೈಕಲ್ ಮತ್ತು ಇಬ್ಬರು ಅಧಿಕಾರಿಗಳು ಬದಲಾಯಿಸಿ ಕೊಟ್ಟಿರುವ ಅಚ್ಚರಿ ವಿಷಯವನ್ನು ಸಿಬಿಐ ಬಹಿರಂಗ ಪಡಿಸಿದೆ.[ಸಿಬಿಐಗೆ ಸಿಕ್ಕ ಚಳ್ಳಕೆರೆಯ ದೊಡ್ಡನೋಟಿನ ಧಣಿ ವೀರೇಂದ್ರ]

RBI three officer arrested by CBI in Bengaluru

ಬೆಂಗಳೂರಿನ ಸಿಬಿಐ ಅಧಿಕಾರಿಗಳು ಆರ್ ಬಿಐ ಕಚೇರಿಯಲ್ಲಿ ಲೆಕ್ಕಪತ್ರ ಪರಿಶೋಧನೆ ವೇಳೆಯಲ್ಲಿ ಒಂದೂವರೆ ಕೋಟಿಗೂ ಹೆಚ್ಚು ಹಣ ಬದಲಾವಣೆಯಾಗಿರುವ ಸತ್ಯ ಹೊರಬಂದಿದ್ದು, ಅಧಿಕಾರಿಗಳನ್ನು ಸಿಬಿಐ ಬಂಧಿಸಿದ್ದಾರೆ. ಆರ್ ಬಿಐ ಅದಿಕಾರಿಮೈಕಲ್ ಅನ್ನು ತಮ್ಮ ವೃತ್ತಿಯಿಂದ ಅಮಾನತುಗೊಳಿಸಲಾಗಿದೆ.

ಆರ್ ಬಿಐ ಆಧಿಕಾರಿಳು ಈ ಮೂವರಲ್ಲದೇ ಇನ್ನು ಎಷ್ಟು ಜನ ಅಡಗಿದ್ದಾರೆ ಎಂಬ ಸತ್ಯ ಹೊರಬೀಳಬೇಕಿದ್ದು, ಪ್ರಸ್ತುತ ಮೈಕಲ್ ಸೇರಿದಂತೆ ಮೂವರನ್ನು ಸಿಬಿಐ ಆಧಿಕಾರಿಗಳು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Demonetisation: RBI officer Mycle with two officers arrested by CBI in Bengaluru
Please Wait while comments are loading...