ಬೆಂಗಳೂರು ವಾಸಿ ಉತ್ತರ ಕರ್ನಾಟಕ ಮಂದಿಗೆ ಏನಾಗಿದೆ?

By: ರವಿಕೃಷ್ಣಾ ರೆಡ್ಡಿ
Subscribe to Oneindia Kannada

ಕಳೆದ ಏಳೆಂಟು ವರ್ಷಗಳಲ್ಲಿ ಕಾವೇರಿ ಸಮಸ್ಯೆ ಬಂದಾಗಲೆಲ್ಲ ಬೆಂಗಳೂರಿನಲ್ಲಿ ಐಟಿ-ಬಿಟಿ ವಲಯದಲ್ಲಿ ಕೆಲಸ ಮಾಡುವ ಮೈಸೂರು-ಮಂಡ್ಯ ಭಾಗದ ಯುವಜನತೆ ತಾವೇತಾವಾಗಿ ಸಂಘಟನೆ ಮಾಡಿಕೊಂಡು ಬೆಂಗಳೂರಿನಲ್ಲಿ ಹೋರಾಟಕ್ಕೆ ಇಳಿಯುತ್ತಾರೆ.

ಕಳೆದ ಎರಡು ವರ್ಷಗಳಿಂದ ಕೋಲಾರ-ಚಿಕ್ಕಬಳ್ಳಾಪುರದ ಯುವಕ/ಯುವತಿಯರು "ಯುವಶಕ್ತಿ" ಹೆಸರಿನಲ್ಲಿ ಸಂಘಟಿತರಾಗಿ "ಶಾಶ್ವತ ನೀರಾವರಿ" ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಮತ್ತು ಬೆಂಗಳೂರಿನಲ್ಲಿ ಸಭೆ-ಸಮಾವೇಶಗಳನ್ನು ಸಂಘಟಿಸುತ್ತಿದ್ದಾರೆ.[ಮಹದಾಯಿ ನೀರು ಹಂಚಿಕೆ : ಕಥೆ ವ್ಯಥೆ ಟೈಮ್ ಲೈನ್]

ಆದರೆ, ಬೆಂಗಳೂರಿನಲ್ಲಿರುವ ಈ ಉತ್ತರ ಕರ್ನಾಟಕದ ಯುವಜನತೆಗೆ ಏನಾಗಿದೆ? ಬೆಂಗಳೂರಿನಲ್ಲಿ ಕೇವಲ "ಜೋಳದ ರೊಟ್ಟಿ ಮತ್ತು ಎಣ್ಣೆಗಾಯಿ ಪಲ್ಯ" ಸಿಗುವ ಖಾನಾವಳಿಗಳನ್ನು ಹುಡುಕಾಡುವುದಕ್ಕೇ ಸೀಮಿತವಾಗಿದೆಯೇ ಅವರ ಕ್ರಿಯಾಶೀಲತೆ? [ಗ್ಯಾಲರಿ: ಮಹದಾಯಿ ತೀರ್ಪು ಖಂಡಿಸಿ ರೈತರ ಆಕ್ರೋಶ]

Ravi Krishna Reddy on Mahadayi Verdict North Karnataka people in Bengaluru

ಅದು ಕೃಷ್ಣಾ-ಆಲಮಟ್ಟಿ ಯೋಜನೆ ಇರಬಹುದು, ಈಗ ಮಹದಾಯಿ-ಕಳಸಾಬಂಡೂರಿ ವಿಷಯ ಇರಬಹುದು, ಈ ಸಮಸ್ಯೆಯ ಬಾಧೆ ತಟ್ಟದ ದಕ್ಷಿಣ ಕರ್ನಾಟಕದವರನ್ನು ಬಿಡಿ, ಆದರೆ ಬೆಂಗಳೂರಿನಲ್ಲಿ ನೌಕರಿ ಮಾಡುತ್ತಿರುವ ಉತ್ತರ ಕರ್ನಾಟಕದ ಲಕ್ಷಾಂತರ ಯುವಜನತೆ ತಮ್ಮ ಮಣ್ಣಿನ ಋಣವನ್ನು ತೀರಿಸುವ ಸಂದರ್ಭಗಳನ್ನು ಕಳೆದುಕೊಂಡರೆ, ಅದು ಕ್ಷಮಾರ್ಹವಲ್ಲ. ಯೋಚಿಸಿ.[ಮಹದಾಯಿಗಾಗಿ ಟ್ವಿಟ್ಟರಲ್ಲೂ ಆಕ್ರೋಶದ ಕಿಡಿ]

ಕಳೆದ ಒಂದು ವರ್ಷದಲ್ಲಿ ಎರಡು ಬಾರಿ ನರಗುಂದ-ನವಲಗುಂದಗಳಿಗೆ ಹೋಗಿಬಂದು, ಅಲ್ಲಿಯ ಬಡ, ನಿರುದ್ಯೋಗಿ, ಬಹುತೇಕ ಅವಿದ್ಯಾವಂತ ರೈತರು ಸ್ವಯಂಪ್ರೇರಿತವಾಗಿ ಹೋರಾಟ ಮತ್ತು ಚಳವಳಿಗಳಲ್ಲಿ ಪಾಲ್ಗೊಂಡಿದ್ದನ್ನು ಕಂಡಿರುವ ನಾನು, ಅದೇ ತರಹದ ಕಾಳಜಿ ಮತ್ತು ಹೋರಾಟ ಮನೋಭಾವವನ್ನು ಹೊಟ್ಟೆ ತುಂಬಿದ ಈ ಯುವಜನತೆಯಲ್ಲಿ ಕಾಣದಿರುವ ಕಾರಣಕ್ಕೆ ಇಷ್ಟು ಕಟುವಾಗಿ, ಬಹಳ ಜವಾಬ್ದಾರಿ ಮತ್ತು ಬೇಸರದಿಂದ ಈ ಮಾತನ್ನು ಹೇಳುತ್ತಿದ್ದೇನೆ. [ಮಹದಾಯಿ ಯೋಜನೆಗೆ ಚಾಲನೆ ಸಿಕ್ಕಿದ್ದು ಹೇಗೆ?]

ಇದು ವಾಟ್ಸ್ಯಾಫ್, ಫೇಸ್‌ಬುಕ್, ಟ್ವಿಟ್ಟರ್‌ಗಳ ಯುಗ. ಸಮಯ ಬಂದಾಗ ಹೋರಾಟ ಕಟ್ಟುವುದು ಅಷ್ಟು ಕಷ್ಟವಲ್ಲ. ಮಣ್ಣಿನ ಋಣಬಾಧೆ ಬಾಧಿಸಬೇಕು ಅಷ್ಟೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Opinion : Ravi Krishna Reddy on Mahadayi Verdict: A large chunk of young people from North Karnataka have migrated to Bengaluru. They are behaving as if they have forgetton their roots
Please Wait while comments are loading...