ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರವಿ ಬೆಳಗೆರೆಗೆ ಜಯದೇವದಲ್ಲಿ ಆಂಜಿಯೋಪ್ಲಾಸ್ಟಿ ಚಿಕಿತ್ಸೆ

|
Google Oneindia Kannada News

Recommended Video

ನನ್ನ ತಂದೆ ನಿರಪರಾಧಿ ಎಂದ ರವಿ ಬೆಳಗೆರೆ ಮಗಳು ಭಾವನಾ ಬೆಳಗೆರೆ | Oneindia Kannada

ಬೆಂಗಳೂರು, ಡಿಸೆಂಬರ್ 19 : ಪತ್ರಕರ್ತ ರವಿ ಬೆಳಗೆರೆಗೆ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಮಂಗಳವಾರ ಆಂಜಿಯೋಪ್ಲಾಸ್ಟಿ ನಡೆಸಿ ರಕ್ತನಾಳದಲ್ಲಿದ್ದ ಬ್ಲಾಕೇಜ್ ಗಳನ್ನು ವೈದ್ಯರು ತೆರವುಗೊಳಿಸಿದ್ದಾರೆ.

ರವಿ ಬೆಳಗೆರೆಗೆ ಮತ್ತೆ ಮೂರು ದಿನ ಮಧ್ಯಂತರ ಜಾಮೀನು ಮುಂದುವರಿಕೆರವಿ ಬೆಳಗೆರೆಗೆ ಮತ್ತೆ ಮೂರು ದಿನ ಮಧ್ಯಂತರ ಜಾಮೀನು ಮುಂದುವರಿಕೆ

ಎರಡು ದಿನಗಳಿಂದ ಜಯದೇವ ಆಸ್ಪತ್ರೆಯ ವಿಶೇಷ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರವಿ ಬೆಳಗೆರೆ ಅವರು ಬಿಪಿ, ಹೃದಯ ಸಂಬಂಧಿ ಕಾಯಿಲೆ, ಮಧುಮೇಹದಿಂದ ಬಳಲುತ್ತಿದ್ದಾರೆ.

Ravi Belagere undergoes Angioplasty

ಮಾಜಿ ಸಹೋದ್ಯೋಗಿ ಸುನಿಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ನೀಡಿದ ಆರೋಪದ ಆರೋಪ ಎದುರಿಸುತ್ತಿದ್ದ ಬೆಳಗೆರೆ, ಕಳೆದ 7 ದಿನಗಳಿಂದ ಮಧ್ಯಂತರ ಜಾಮೀನಿನ ಮೇಲೆ ಚಿಕಿತ್ಸೆ ಪಡೆಯುತ್ತಿದ್ದರು.

ಸೋಮವಾರ ಡಿ.18 ರಂದು ರವಿ ಬೆಳಗೆರೆ ಅವರಿಗೆ ನೀಡಿದ್ದ ಮಧ್ಯಂತರ ಜಾಮೀನು ಅಂತ್ಯಗೊಂಡಿತ್ತು. ರವಿ ಬೆಳಗೆರೆ ಪರ ವಕೀಲ ದಿವಾಕರ್ ಅವರು ರವಿ ಬೆಳಗೆರೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಆಂಜಿಯೋ ಪ್ಲಾಸ್ಟಿ ಮಾಡುವಂತೆ ವೈದ್ಯರು ಸೂಚನೆ ನೀಡಿದ್ದಾರೆ. ಹಾಗಾಗಿ ಜಾಮೀನು ವಿಸ್ತರಿಸುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಸೆಷನ್ ನ್ಯಾಯಾಲಯವು ಡಿ.21ರವರೆಗೆ ಮಧ್ಯಂತರ ಜಾಮೀನು ನೀಡಿತ್ತು.

English summary
Journalist Ravi Belagere who is out on interim bail in colleague's contract killing case has been undergone angioplasty treatment on Tuesday at Jayadeva hospital in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X