ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೂರನೇ ಮಹಿಳಾ ಮುಖ್ಯ ಕಾರ್ಯದರ್ಶಿಯಾಗಿ ರತ್ನಪ್ರಭ

|
Google Oneindia Kannada News

ಬೆಂಗಳೂರು, ನವೆಂಬರ್ 28 : ಕರ್ನಾಟಕದ ಮೂರನೇ ಮಹಿಳಾ ಮುಖ್ಯ ಕಾರ್ಯದರ್ಶಿಯಾಗಿ ಐಎಎಸ್ ಅಧಿಕಾರಿ ಕೆ.ರತ್ನಪ್ರಭ ಶುಕ್ರವಾರ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಹಾಲಿ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಯಾ ನವೆಂಬರ್ 30 ರಂದು ಸೇವೆಯಿಂದ ನಿವೃತ್ತಿ ಹೊಂದಲಿದ್ದು, ಅವರ ಸ್ಥಾನಕ್ಕೆ ಸರಕಾರದ ಹೆಚ್ಚುವರಿ ಕಾರ್ಯದರ್ಶಿ ಕೆ.ರತ್ನಪ್ರಭ ನೇಮಕ ಕುರಿತು ಅದಿಕೃತ ಘೋಷಣೆ ಹೊರಬೀಳಬೇಕಿದೆ.

ಈ 2000ರಲ್ಲಿ ತೆರೆಸಾ ಭಟ್ಟಾಚಾರ್ಯ ಮೊದಲ ಮಹಿಳಾ ಮುಖ್ಯ ಕಾರ್ಯದರ್ಶಿ ಯಾಗಿ 11 ತಿಂಗಳು ಸೇವೆ ಸಲ್ಲಿಸಿದ್ದರು. ನಂತರ 2006ರಲ್ಲಿ ಡಾ.ಮಾಲತಿ ದಾಸ್ ಕೇವಲ ಮೂರು ತಿಂಗಳು ಸೇವೆ ಸಲ್ಲಿಸಿದ್ದರು.

Ratnaprabha First Dalit Women chief secretary of Karnataka

ಈಗಾಗಲೇ ನೂತನ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಕುರಿತಂತೆ ರಾಜ್ಯ ಸಚಿವ ಸಂಪುಟ ಸಭೆ ಮುಖ್ಯಮಂತ್ರಿಗಳಿಗೆ ಪರಮಾಧಿಕಾರ ನೀಡಿದ್ದು, ಸೇವಾ ಹಿರಿತನದ ಆಧಾರದ ಮೇಲೆ ರತ್ನಪ್ರಭ ಅವರನ್ನೇ ನೇಮಕ ಮಾಡಲು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ ಎಂದು ಸರಕಾರದ ಉನ್ನತ ಮೂಲಗಳು ಹೇಳಿವೆ.

ಸೇವಾ ಹಿರಿತನದ ಪಟ್ಟಿಯಲ್ಲಿ ರತ್ನಪ್ರಭ ಕೆ.ಎಸ್.ಪಟ್ಟನಾಯಕ್ ಹಾಗೂ ಲತಾ ಕೃಷ್ಣರಾವ್ ಅವರ ಹೆಸರುಗಳಿವೆ. ರತ್ನಪ್ರಭ ಅವರು ನಾಲ್ಕು ತಿಂಗಳ ನಂತರ, ಲತಾ ಕೃಷ್ಣರಾವ್ ಐದು ತಿಂಗಳ ನಂತರ ಹಾಗೂ ಪಟ್ಟನಾಯಕ್ 10 ತಿಂಗಳ ನಂತರ ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ. ಆದರೆ ಸೇವಾ ಹಿರಿತನದಲ್ಲಿ ರತ್ನಪ್ರಭ ಅವರೇ ಮುಂಚೂಣಿಯಲ್ಲಿದ್ದಾರೆ.

ದಲಿತ ಜನಾಂಗಕ್ಕೆ ಸೇರಿದ ಮಹಿಳೆಯೊಬ್ಬರು ರಾಜ್ಯದ ಮುಖ್ಯ ಕಾರ್ಯದರ್ಶಿ ಹುದ್ದೆಯಲ್ಲಿ ಸೇವೆ ಸಲ್ಲಿಸುವುದನ್ನು ತಪ್ಪಿಸಿ, ಬೇರೊಬ್ಬರಿಗೆ ಮಣೆ ಹಾಕುವುದು ಸರಿಯಲ್ಲ ಎಂಬ ಅಭಿಪ್ರಾಯಕ್ಕೆ ಸರಕಾರ ಬಂದಿದೆ ಎನ್ನಲಾಗುತ್ತಿದೆ. ಹೀಗಾಗಿ ಒಂದೆರಡು ದಿನಗಳಲ್ಲಿ ರತ್ನಪ್ರಭ ಅವರ ಹೆಸರು ಅಧಿಕೃತವಾಗಿ ಹೊರಬೀಳಲಿದೆ.

English summary
Karnataka will get its first Dalit women chief secretary on Friday while present at office Subhashchandra Kuntia will retired from the service. Ratnaprabha will serve four months as chief secretary and she will retired from service March 30, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X